FoodLatest

ಮಸಾಲೆ ರೋಟಿಯ ರುಚಿನೋಡಿ… ಮನೆಯಲ್ಲಿಯೇ ತಯಾರು ಮಾಡುವುದು ಹೇಗೆ?

ನಮಗೆ ಬೇಕಾದ ತಿನಿಸುಗಳನ್ನು ಮನೆಯಲ್ಲಿಯೇ ರುಚಿ, ಶುಚಿಯಾಗಿ ಮಾಡಿಕೊಳ್ಳಬಹುದಾಗಿದೆ. ಅಡುಗೆ ಮಾಡುವ ಬಗ್ಗೆ ಆಸಕ್ತಿಯಿದ್ದರೆ ಅದೇನು ಕಷ್ಟವಲ್ಲ.. ಈ ಬಾರಿ ಮಸಾಲೆ ರೋಟಿ ಮಾಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು- 2ಬಟ್ಟಲು, ಈರುಳ್ಳಿ- 2, ಹಸಿಮೆಣಸಿಕಾಯಿ- 5, ಅಲ್ಪ ಪ್ರಮಾಣದಲ್ಲಿ ಕಾಳುಮೆಣಸು,  ಬೆಳ್ಳುಳ್ಳಿ,  ಶುಂಠಿ ಪೇಸ್ಟ್,  ಚಕ್ಕೆ, ಲವಂಗ, ಏಲಕ್ಕಿ,  ಗಸಗಸೆ,  ನಿಂಬೆರಸ,  ಜೀರಿಗೆ, ಕೊತ್ತಂಬರಿಸೊಪ್ಪು

ಮಾಡುವ ವಿಧಾನ ಹೇಗೆ?

ಮೊದಲಿಗೆ ಮೈದಾಹಿಟ್ಟಿಗೆ ನೀರು ಹಾಕಿ ಚಪಾತಿ ಮಾದರಿಯಲ್ಲಿ ಕಲಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ತೆಗೆದಿಟ್ಟುಕೊಂಡ ಮಸಾಲೆ ಪದಾರ್ಥಗಳಾದ ಈರುಳ್ಳಿ, ಹಸಿಮೆಣಸಿಕಾಯಿ, ಕಾಳುಮೆಣಸು, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಚಕ್ಕೆ, ಲವಂಗ, ಏಲಕ್ಕಿ, ಗಸಗಸೆ, ನಿಂಬೆರಸ, ಜೀರಿಗೆ, ಕೊತ್ತಂಬರಿಸೊಪ್ಪು ಎಲ್ಲವನ್ನು ಹಾಕಿ ರುಬ್ಬಬೇಕು. ಸ್ವಲ್ಪ ಪ್ರಮಾಣದ ಕಡ್ಲೆಹಿಟ್ಟು ತೆಗೆದುಕೊಂಡು ರುಬ್ಬಿದ ಮಸಾಲೆಯನ್ನು ಅದಕ್ಕೆ ಹಾಕಿ ಕಲಸಿ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಬೇಕು.

ಬಳಿಕ ಮೊದಲು ಕಲೆಸಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಲಟ್ಟಿಸಿ ಅದರೊಳಗೆ ಮಸಾಲೆಯ ಉಂಡೆಯನ್ನು ಹಾಕಬೇಕು. ಮತ್ತೆ ಒಬ್ಬಟ್ಟಿನ ರೀತಿ ಲಟ್ಟಿಸಿ  ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿದರೆ ಮಸಾಲೆ ರೋಟಿ ರೆಡಿ. ಈ ಮಸಾಲೆ ರೋಟಿಯನ್ನು ಚಟ್ನಿಯೊಂದಿಗೆ ಸೇವಿಸಿದರೆ ಇನ್ನಷ್ಟು ರುಚಿಯಾಗಿರುತ್ತದೆ.

 

 

 

 

admin
the authoradmin

ನಿಮ್ಮದೊಂದು ಉತ್ತರ