LatestMysore

ಅರಕೆರೆ ಶ್ರೀ ಬಸವೇಶ್ವರ ದೇವಸ್ಥಾನ ಅಭಿವೃದ್ಧಿಗೆ 25 ಲಕ್ಷ ಅನುದಾನ: ದೊಡ್ಡಸ್ವಾಮಿಗೌಡ

ಕೆ.ಆರ್.ನಗರ(ಸಂಘಟನೆ ಮಂಜುನಾಥ್):  750 ವರ್ಷಗಳ ಇತಿಹಾಸ ಇರುವ ಅರಕೆರೆ ಶ್ರೀ ಬಸವೇಶ್ವರ ದೇವಸ್ಥಾನ ಅಭಿವೃದ್ಧಿಗೆ 25 ಲಕ್ಷ ಅನುದಾನವನ್ನು ಶಾಸಕ ರವಿಶಂಕರ್ ನೀಡಿದ್ದಾರೆ  ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ ಹೇಳಿದರು.

ಅರಕೆರೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸುಖ ಶಾಂತಿ ನೆಮ್ಮದಿಗಾಗಿ ಗ್ರಾಮಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿ ಆಗಬೇಕು. ಅದರಲ್ಲೂ ಅರಕೆರೆ ಗ್ರಾಮದಲ್ಲಿರುವ ಈ ಬಸವೇಶ್ವರ ಶಕ್ತಿಶಾಲಿ ಭಕ್ತಿಯಿಂದ ಬೇಡಿದ ವರವನ್ನು ಕರುಣಿಸುವ ಬಸವೇಶ್ವರ ದೇವರ ಪವಾಡಗಳು ಅಪಾರ ಈಗಾಗಲೇ ನಮಗೆ ಅನುಭವ ಆಗಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸನ್ಮಾನ್ಯ ದಿವಂಗತ ಧ್ರುವ ನಾರಾಯಣ್ ಅವರ ನೇತೃತ್ವದಲ್ಲಿ ರವಿಶಂಕರ್ ಅವರು ಇದೇ ದೇವಸ್ಥಾನದಲ್ಲಿ ಮೊದಲ ಪೂಜೆ ಸಲ್ಲಿಸಿ ಜನ ಆಶೀರ್ವಾದ ಕಾರ್ಯಕ್ರಮವನ್ನು ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಪ್ರಾರಂಭಿಸಿದರು. ಬಸವೇಶ್ವರ ಆಶೀರ್ವಾದದಿಂದ ಅಧಿಕ ಮತಗಳಿಂದ ರವಿಶಂಕರ್ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿ ಶಾಸಕರಾಗಿದ್ದಾರೆ. ಹಾಗಾಗಿ ಈ ದೇವಸ್ಥಾನ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ದೇವಸ್ಥಾನ ಪೂರ್ಣಗೊಳ್ಳಲು ಈಗಾಗಲೇ ಅಂದಾಜು ಕ್ರಿಯ ಯೋಜನೆ, ಸುಮಾರು 50 ಲಕ್ಷ ಆಗುತ್ತದೆ ಎಂಬ ಮಾಹಿತಿ ಇದ್ದು ಮೊದಲ ಅನುದಾನ 25 ಲಕ್ಷ ಬಿಡುಗಡೆ ಆಗಿದೆ ಜೊತೆಗೆ ಇನ್ನಷ್ಟು ಅನುದಾನ ಹಾಕಿಸುವ ಮೂಲಕ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗೋಣ ಜೊತೆಗೆ ಒಂದಷ್ಟು ದಾನಿಗಳು ಸೇರಿದಂತೆ ಗ್ರಾಮದ ಎಲ್ಲರ ಸಹಕಾರ ಈ ದೇವಸ್ಥಾನಕ್ಕೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಹರಿದು ಬರಲಿ ಎಂದು ಎಲ್ಲರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಉದಯ್ ಶಂಕರ್, ಎಸ್ ಟಿ ಘಟಕದ ಕಾಂಗ್ರೆಸ್ ಅಧ್ಯಕ್ಷ ನರಸಿಂಹ ನಾಯಕ,ಗ್ರಾಪಂ ಮಾಜಿ ಸದಸ್ಯ ಯತಿರಾಜ್, ಎಸ್ ಕುಮಾರ್ ಮಂಜಪ್ಪ, ಸಿ ಪಿ ಕುಮಾರ್, ಸ್ವಾಮಿ, ಶಿವರಾಜ್, ಮಹದೇವ, ಪ್ರಕಾಶ್, ಆರ್ ಮಂಜಪ್ಪ, ಶಂಕರಪ್ಪ, ಪಾಟೀಲ್, ಚಂದ್ರಪ್ಪ, ಶಿವಣ್ಣ, ನಾಡಗೌಡ ಕುಮಾರಸ್ವಾಮಿ , ಗುತ್ತಿಗೆದಾರ ನಾರಾಯಣಸ್ವಾಮಿ, ಬೋರಪ್ಪನಾಯಕ, ಗಾರೆಕೃಷ್ಣ, ಕೆಂಚನಹಳ್ಳಿಪ್ರಸನ್ನ, ಕಾಂತರಾಜ್, ಕಲಾವಿದ, ವೆಂಕಟೇಶ್, ಮಹದೇವ್ ನಾರಾಯಣಪ್ಪ, ರಾಜಣ್ಣ, ಮಂಜು, ಅಪ್ಪು, ಕಾಳೇಗೌಡ, ನಾಗರಾಜೇಗೌಡ, ರಘು, ಮಂಜು ಇತರರು ಇದ್ದರು

ಬೆಂಗಳೂರಿನ ಆರ್ಮಿ ಕ್ಯಾಂಟೀನ್ ನಲ್ಲಿ 52 ಹುದ್ದೆಗಳ ಭರ್ತಿಗೆ ನೇಮಕಾತಿ

admin
the authoradmin

Leave a Reply