janamanakannada > Blog > Latest > Job News > ಬೆಂಗಳೂರಿನ ಆರ್ಮಿ ಕ್ಯಾಂಟೀನ್ ನಲ್ಲಿ 52 ಹುದ್ದೆಗಳ ಭರ್ತಿಗೆ ನೇಮಕಾತಿ
ಬೆಂಗಳೂರಿನ ಆರ್ಮಿ ಕ್ಯಾಂಟೀನ್ ನಲ್ಲಿ ಖಾಲಿ ಇರುವ 52 ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಅಸಿಸ್ಟೆಂಟ್ ಮ್ಯಾನೇಜರ್( ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರ ಬೇಕು), ಸ್ಟೋರ್ ಕೀಪರ್, ಬಿಲ್ಲಿಂಗ್ ಕ್ಲರ್ಕ್, ಸೇಲ್ಸ್ ಪರ್ಸನ್, ಡಿಸ್ಪ್ಯಾಚ್ ರೈಡರ್, ಸಹಾಯಕ, ವಾಚ್ ಮನ್, ಮಲ್ಟಿ ಟಾಸ್ಕಿಂಗ್ (ಸಿಬ್ಬಂದಿ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರ ಬೇಕು ಮತ್ತು ಅಗತ್ಯ ಅರ್ಹತೆ ಹೊಂದಿರಬೇಕು)
ವಯೋಮಿತಿ: 18 ವರ್ಷ ಮೇಲ್ಪಟ್ಟಿರ ಬೇಕು. ಕೆಲಸದ ಸ್ಥಳ: ಬೆಂಗಳೂರು, ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 31, 2026
ಅಗತ್ಯ ದಾಖಲೆಗಳೊಂದಿಗೆ ಇಮೇಲ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಳಾಸ: ಕಮಾಂಡೆಂಟ್, ಗೋಲ್ಡನ್ ಪಾಮ್ ಸ್ಟೇಷನ್ ಕ್ಯಾಂಟೀನ್, ಹೆಡ್ ಕ್ವಾಟರ್ಸ್ ಕೆ-ಕೆ ಸಬ್ ಏರಿಯಾ, ಬೆಂಗಳೂರು-560001

ನೇಮಕಾತಿಗೆ ಸಂಬಂಧಿಸಿದ ಮಾಹಿತಿಗೆ ಆರ್ಮಿ ಕ್ಯಾಂಟೀನ್ ನ ಅಧಿಕೃತ ವೆಬ್ ಸೈಟ್ https://gpcscblr.co.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸ ಬಹುದಾಗಿದೆ.
Tags:Job news
admin








