Latest

ಇಂದಿನ (11-07-2026 ಶನಿವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಕೇರಳ ಶ್ರೀ ಆದಿಶಕ್ತಿ ಜೋತಿಷ್ಯರಾದ ಪಂಡಿತ್ ಶ್ರೀ ಮಂಜುನಾಥಶಾಸ್ತ್ರಿ

ಸಂವತ್ಸರ: ಶ್ರೀ ಪರಾಭವ  ಅಯನ: ಉತ್ತರಾಯಣ  ಋತು: ಗ್ರೀಷ್ಮ ಮಾಸ: ಜ್ಯೇಷ್ಠ ಪಕ್ಷ: ಕೃಷ್ಣ ಪಕ್ಷ ತಿಥಿ: ದ್ವಾದಶಿ 2:02AM ವರೆಗೆ ನಂತರ ತ್ರಯೋದಶಿ ನಕ್ಷತ್ರ: ಕೃತ್ತಿಕೆ 11:00 AM ವರೆಗೆ ನಂತರ ರೋಹಿಣಿ  ಯೋಗ: ಗಂಡ  ಕರಣ: ಕೌಲವ 3:42 PM ವರೆಗೆ ತೈತಲೆ ಶುಭ ಸಮಯಗಳು: ಅಭಿಜಿತ್ ಮುಹೂರ್ತ 11:55 AM ದಿಂದ 12:47 PM ವರೆಗೆ, ಬ್ರಹ್ಮ ಮುಹೂರ್ತ: 4:16 AM ದಿಂದ 5:04 AM ವರೆಗೆ, ಅಮೃತ ಕಾಲ 8:52 AM ದಿಂದ 10:19 AM ವರೆಗೆ ರಾಹುಕಾಲ: 9:07 AM ದಿಂದ 10:44 AM ವರೆಗೆ, ಯಮಗಂಡ: 1:58 PM ದಿಂದ 3:36 PM ವರೆಗೆ, ಗುಳಿಕ ಕಾಲ:5:52 AM ದಿಂದ 7:29 AM ವರೆಗೆ  ಸೂರ್ಯೋದಯ: 5:52, ಸೂರ್ಯಾಸ್ತ: 6:50  ದಿನಾಂಕ:11-07-2026, ಶನಿವಾರ(ಕೃಪೆ:ಕನ್ನಡಶುಭಮಂಗಳ)

ನಿಮ್ಮ ದ್ವಾದಶ ರಾಶಿಗಳ ಫಲಾಫಲಗಳು ಹೇಗಿವೆ?

ಮೇಷ

ಹೊಸ ವಿಚಾರಗಳ ಅನ್ವೇಷಣೆಯು ನಿಮಗೆ ಖುಷಿಕೊಡುವುದು. ಇಂದು ಧನ ವ್ಯವಹಾರದಲ್ಲಿ ಸರಿಯಾದ ತಿಳಿವಳಿಕೆ ಇಟ್ಟುಕೊಳ್ಳಿ. ಹಳೆಯ ಸಂಬಂಧವನ್ನು ಹೊಸದಾಗಿಸಿಕೊಳ್ಳುವುದು ಉತ್ತಮ. ಪ್ರಭಾವಿಗಳ ಮಾತಿನಿಂದ ನಿಮಗೆ ಸಿಗಬೇಕಾದುದು ಸಿಗಲಿದೆ. ನಿಮ್ಮ ಅಭಿಪ್ರಾಯವು ದೃಢವಾಗಿರಲಿ. ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು. ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು.

ವೃಷಭ

ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುವ ಸಂಭವವಿದೆ. ಪ್ರಯಾಣವು ಕಷ್ಟವಾದರೂ ಹೋಗಲಿದ್ದೀರಿ. ಇದರಿಂದ ನಿಮಗೆ ಸಂತೋಷವಾಗಲಿದೆ. ದೃಷ್ಟಿದೋಷದಿಂದ ಮನಸ್ಸು ಕುಗ್ಗಲಿದೆ. ನಿಮ್ಮ ಸುತ್ತಲಿನ ವಾತಾವರಣವನ್ನು ಚೆನ್ನಾಗಿರಿಸಿಕೊಳ್ಳುವಿರಿ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ.

ಮಿಥುನ

ಅಧ್ಯಯನದಲ್ಲಿ ನೀವು ಮಾಡುವ ಪ್ರಯತ್ನಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಿ ಲಾಭ ಗಳಿಸುವಿರಿ. ನಿಮ್ಮ ಆದ್ಯತೆಗಳನ್ನು ಬದಲಾಗಬಹುದು. ಹಣ ಹೂಡಿಕೆಯ ವಿಚಾರದಲ್ಲಿ ಗೊಂದಲವಿರಬಹುದು. ಜೀವನ ಸಂಗಾತಿಯಾಗುವವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ದುಃಖವು ಕ್ಷಣಿಕವಾಗಿರಲಿದೆ. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು.

ಕರ್ಕಾಟಕ

ಅಪರಿಚಿತರ ವಾಹನದಲ್ಲಿ ಪ್ರಯಾಣ ಮಾಡುವಿರಿ. ಹಣಕಾಸಿನ ಬಗ್ಗೆ ತೊಂದರೆ ತೆಗೆದುಕೊಳ್ಳುವುದು ಪ್ರಿಯವಾಗಲಿದೆ. ಭಯದ ಮನಸ್ಸು ನಿಮ್ಮನ್ನು ಕೆಲಸದಲ್ಲಿ ಹಿಂದೇಟು ಹಾಕುವಂತೆ ಮಾಡಬಹುದು. ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಮನೆಯವರ ಅತಿಯಾದ ಪ್ರೀತಿಯಿಂದ ಬಂಧಿತರಾಗಬಹುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು.

ಸಿಂಹ

ಇಂದು ನೀವು ತುಂಬಾ ಆರೋಗ್ಯಕರವಾದ ಪ್ರಜ್ಞೆ ಹೊಂದಿರುತ್ತೀರಿ ನಿಮ್ಮ ಕೆಲಸದಲ್ಲಿ ಸಾವಧಾನತೆ ಅಧಿಕವಾಗಿರುವುದು. ಉದ್ಯಮವನ್ನು ಬಿಡುವಂತಹ ಪರಿಸ್ಥಿತಿ ಬರಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಎಲ್ಲ ಕ್ಷಣಗಳೂ ನಿಮಗೆ ಅನುಕೂಲವಾಗಿರಬೇಕು ಎಂಬುದನ್ನು ನಿರೀಕ್ಷಿಸಲಾಗದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಮಾಡಿ ಕೊಡಬಹುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ.

ಕನ್ಯಾ

ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಇಡಿಯ ದಿನವನ್ನು ಸಂತೋಷದಿಂದ ಕಳೆಯುವ ಯೋಜನೆಯನ್ನು ರೂಪಿಸಿಕೊಂಡಿರುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ಹಠವಿರಲಿದೆ. ಗೃಹನಿರ್ಮಾಣದ ಕಾರ್ಯವನ್ನು ಪುನಃ ಆರಂಭಿಸಲು ನಿಮ್ಮ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿಯು ನಿಮಗೆ ಸಿಗಬಹುದು. ದೈವವನ್ನು ನಂಬಿ, ನಿಮ್ಮ ಪ್ರಯತ್ನವನ್ನು ಮಾಡಿ.

ತುಲಾ

ಇಂದು ಮಾಡುವ ಕೆಲಸಗಳು ಸುಲಲಿತವಾಗಿ ಆರಂಭವಾದರೂ ಅಂತ್ಯವು ಬಹಳ ಗೊಂದಲದಿಂದ ಇರಬುಹುದು. ಅತಿಯಾದ ಧನಾತ್ಮಕ ಚಿಂತನೆಗಳು ನಿಮ್ಮನ್ನು ವಂಚನೆಗೆ ಸಿಕ್ಕಿಸಬಹುದು. ಎದುರಿನಿಂದ ಬೆಂಬಲಿಸಿ ಹಿಂದಿನಿಂದ ನಿಮ್ಮವರೇ ಕಾಲು ಎಳೆಯುವರು. ನಿರ್ಮಾಣದ ವಿಚಾರದಲ್ಲಿ ಅನ್ಯರಿಂದ ಹಿನ್ನಡೆ ಆಗಬಹುದು. ಅದು ಬೇಸರ ಬಂದರೂ ಬಿಡದೇ ಮುಂದುವರಿಸುವುದು ಜೀವನಕ್ಕೆ ಅನಿವಾರ್ಯ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ.

ವೃಶ್ಚಿಕ

ಇಂದು ನೀವು ಯಾವ ಕಾರ್ಯವನ್ನು ಒಪ್ಪಿಕೊಳ್ಳುವಾಗಲೂ ಒಪ್ಪಿಕೊಳ್ಳುವ ಮೊದಲು ನಿಮ್ಮ ಒತ್ತಡವನ್ನು ಗಮನಿಸಿಕೊಳ್ಳಿ. ಸಂಗಾತಿಯ ಕಡೆಯಿಂದ ಕಾಳಜಿ ಇಲ್ಲದಂತೆ ಅನ್ನಿಸುವುದು. ಗಣ್ಯರ ಸಂಪರ್ಕವು ಹಲವು ತಿರುವುಗಳನ್ನು ಪಡೆದುಕೊಂಡೀತು. ನಿಮ್ಮ‌ ತಾಳ್ಮೆಯನ್ನು ಪರೀಕ್ಷಿಸುವ ಸಮಯವೂ ಬರಬಹುದು.‌ ದುಃಸ್ವಪ್ನಗಳು ನಿಮ್ಮನ್ನು ಕಾಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಉತ್ತಮ.

ಧನು

ನೀವು ಎಂದಿಗಿಂತಲೂ ನಿಮ್ಮ ಸಂಗಾತಿಗೆ ಹತ್ತಿರವಾಗುವ ಹಾಗೆ ನಡೆದುಕೊಳ್ಳುವಿರಿ. ಶಿಸ್ತುಬದ್ಧ ಜೀವನದಿಂದ ಹೊರಬರುವುದು ನಿಮಗೆ ಕಷ್ಟವಾದೀತು. ಹೊಸ ಬದುಕಿಗೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವಿರಿ. ತೆರಿಗೆಯಿಂದ ನಿಮಗೆ ಲಾಭವಾಗಲಿದೆ. ನಿಮ್ಮವರ ಜೊತೆ ಸಂತೋಷದ ಕ್ಷಣವನ್ನು ಕಳೆಯುವಿರಿ. ಅನುಚಿತ ವರ್ತೆನೆಯನ್ನು ಅಧಿಕಾರಿಗಳ ಎದುರು ತೋರಿಸುವಿರಿ. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು.

ಮಕರ

ಕೊನೆಯ ಕಾಲದಲ್ಲಿ  ಹಿರಿಯರ ಅಭಿಪ್ರಾಯವನ್ನು ಕಡೆಗಾಣಿಸುವುದು ಬೇಡ. ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ. ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಗುಂಪುಗಾರಿಕೆಯಿಂದ ನೀವು ಪ್ರತ್ಯೇಕ ಎನಿಸುವಿರಿ. ಕಾರ್ಯದಿಂದ ಕೆಲಕಾಲ ವಿಶ್ರಾಂತಿಯನ್ನು ಪಡೆಯಿರಿ. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ.

ಕುಂಭ

ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಮಕ್ಕಳಲ್ಲಿ ಯಾವ ಪ್ರಗತಿಯನ್ನು ಕಾಣದೇ ಖರ್ಚು ಮಾಡುವುದಾಗಿ ಅನ್ನಿಸುವುದು. ಕುಟುಂಬದಲ್ಲಿ ಶಾಂತತೆ ಇದ್ದರೂ ಒಳಗೆ ಜ್ವಾಲಾಮುಖಿಯು ಸ್ಫೋಟಿಸಲು ಕಾಯುತ್ತಿರಬಹುದು. ಎಂದೋ‌ ಮಾಡಿದ ಸಹಾಯಕ್ಕೆ ಇಂದು ಪ್ರತಿಫಲ ಸಿಗುವ ಸಾಧ್ಯತೆ ಇದೆ. ಅನಗತ್ಯ ಅಲೆದಾಟವು ನಿಮಗೆ ಕಷ್ಟವಾದೀತು. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌ ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು.

ಮೀನ

ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ನೂತನ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಕಛೇರಿಯಲ್ಲಿ ನಿಮ್ಮ ಮೇಲೆ‌ ಸಾರ್ವಜನಿಕರಿಂದ ವಾಗ್ವಾದ ನಡೆಯುವುದು.‌ ಶುಭ ಸಮಾಚಾರವು ನಿಮಗೆ ಗೊತ್ತಾಗಬಹುದು.‌ ಇಂದು ಆಗುವ ಬದಲಾವಣೆಯನ್ನು ಸಂತೋಷದಿಂದ ಸ್ವಾಗತಿಸಿ.

admin
the authoradmin

Leave a Reply