ಮೈಸೂರು: ಜೆ.ಪಿ. ನಗರದ ಹಿಂದೂಸ್ತಾನ್ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗವು ಆಯೋಜಿಸಿದ್ದ ಟೆಕ್-ಕನೆಕ್ಟ್ ಕ್ಲಬ್” (Tech-Connect Club) ಉದ್ಘಾಟನಾ ಸಮಾರಂಭ ಮತ್ತು “ಬ್ಲಾಕ್ಚೈನ್ ತಂತ್ರಜ್ಞಾನಗಳಲ್ಲಿನ ಉದಯೋನ್ಮುಖ ಪ್ರವೃತ್ತಿಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಬೆಂಗಳೂರು ಮೂಲದ ಕಾರ್ಪೋರೇಟ್ ತರಬೇತುರಾದ ಮಿ. ನಿತಿನ್ ಮತ್ತು ಮಿ. ತನುಷ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉದ್ಯಮದ ಜೋಡಣೆ, ಶೈಕ್ಷಣಿಕ ಜ್ಞಾನ ಮತ್ತು ಐಟಿ ಉದ್ಯಮದ ನೈಜ ಪದ್ಧತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಜ್ಞಾನದ ವರ್ಧನೆ, ಬ್ಲಾಕ್ಚೈನ್ ತಂತ್ರಜ್ಞಾನದ ಇತ್ತೀಚಿನ ಪ್ರಗತಿಗಳು, ನಾವೀನ್ಯತೆಗೆ ಪ್ರೇರಣೆಯನ್ನು ಒದಗಿಸುವ, ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವ ಕುರಿತು ಮಾಹಿತಿ ಒದಗಿಸಿದರು.
ಇದೇ ಸಂದರ್ಭದಲ್ಲಿ “ಟೆಕ್ ಜೋನ್” ಚತುರ್ಮಾಸ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜೆ.ಪ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಸವಿತ ಕೆ. ವಿ, ಸಹ ಪ್ರಾಧ್ಯಾಪಕರಾದ ಹೇಮಂತ್ ಕುಮಾರ್ ಬಿ.ಎನ್, ಇತರ ಸಹಾಯಕ ಪ್ರಾಧ್ಯಾಪಕರಾದ ವಿನಂತಿ ಎಸ್. ಸೂಕ್ಷ್ಮ ಆರ್.ಡಿ, ಸಹನ ಕೆ.ಎನ್., ಸ್ಮಿತ ಎಂ. ಆರ್., ರಶ್ಮಿ ಆರ್., ಅಶ್ವಿನಿ ಪಿ.ಎನ್, ವಿನೋದ್ ಆರ್, ವಿನಯ್ ಕುಮಾರ್ ವಿ.ಪಿ., ಟೆಕ್ ಕನೆಕ್ಟ್ ನ ಸಂಚಾಲಕರಾದ ತೃತೀಯ ಬಿಸಿಎ ನಿತೀನ್ ಇತರರು ಉಪಸ್ಥಿತರಿದ್ದರು.








