LatestMysore

ಕೆ.ಆರ್.ನಗರ ಟಿಎಪಿಸಿಎಂಎಸ್ ಚುನಾವಣೆ… ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ.ನಿ (ಟಿಎಪಿಸಿಎಂಎಸ್) ಆಡಳಿತ ಮಂಡಳಿಯ ಒಟ್ಟು 12ಮಂದಿ ನಿರ್ದೇಶಕರ ಸ್ಥಾನಗಳಿಗೆ  ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಇದೀಗ ಎರಡು ಪಕ್ಷಗಳ ಜಿದ್ದಾಜಿದ್ದಿಗೆ ಅಖಾಡವಾಗಿ ಮಾರ್ಪಟ್ಟಿದೆ.

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರಾಗಿ ತಲಾ ಐದು ಮಂದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ (ಎ ತರಗತಿಯಿಂದ) ಹೆಚ್.ಎಸ್.ವೆಂಕಟೇಶ್, ಕೆ.ಬಿ.ನಟರಾಜು, ಶಂಕರನಾಯಕ, ಎನ್.ಎಸ್.ವಿಠಲ, ಎಂ.ಎಸ್.ಅನಂತು, ಮಂಜೇಗೌಡ, ಸುಶೀಲಮ್ಮ, ಚಂದ್ರಶೇಖರ್, ಹೆಚ್.ಕೆ.ಧನಂಜಯ, ಹೆಚ್.ಎಸ್.ಜಗದೀಶ್ ನಾಮಪತ್ರ ಸಲ್ಲಿಸಿದ್ದಾರೆ.

ಸಾಮಾನ್ಯ ವರ್ಗದಿಂದ ಟಿ.ಎಲ್.ಪರಶಿವಮೂರ್ತಿ, ಹಿಂದುಳಿದ ವರ್ಗ ಎ ಯಿಂದ ಕೋಳಿಪ್ರಕಾಶ್, ಜಯರಾಮ, ಎಸ್.ಸಿದ್ದೇಗೌಡ, ಡಿ.ಎಸ್.ಗಿರೀಶ್, ಬಿ ವರ್ಗದಿಂದ ವಿ.ಆರ್.ಮಹೇಶ್, ಹೆಚ್.ಹೆಚ್.ನಾಗೇಂದ್ರ, ಅರುಣ್‌ಕುಮಾರ್, ಸಿ.ಜೆ.ಧನಪಾಲ, ಬಾಲೂರುಗಿರೀಶ, ಮಹಿಳಾ ಮೀಸಲು  ಕ್ಷೇತ್ರದಿಂದ ಜಿ.ಆರ್.ಸ್ವರೂಪ, ಬಿ.ಸುಷ್ಮ, ಡಿ.ಕೆ.ವನಜಾಕ್ಷಿ, ಶೈಲಜಾ, ಪರಿಶಿಷ್ಟ ಜಾತಿಯಿಂದ ಡಿ.ಪಿ.ದಿನೇಶ, ಡಿ.ಜೆ.ಶಾಂತರಾಜು, ಪರಿಶಿಷ್ಟ ಪಂಗಡದಿಂದ ಎಂ.ಮಹದೇವನಾಯಕ, ಜಿ.ಕೆ.ತೋಟಪ್ಪನಾಯಕ ಆಯ್ಕೆ ಬಯಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಬೆಂಬಲಿತ  ಅಭ್ಯರ್ಥಿಗಳೊಂದಿಗೆ ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಸಾಲಿಗ್ರಾಮ ತಾಲೂಕು ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ಜಿ.ಪಂ. ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಮು, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್. ಕಾಂಗ್ರೆಸ್ ಎಸ್.ಟಿ. ಘಟಕದ ರಾಜ್ಯ ಉಪಾಧ್ಯಕ್ಷ ಹೊಸೂರುಕಲ್ಲಹಳ್ಳಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ತಿಪ್ಪೂರುಮಹದೇವನಾಯಕ  ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಜಿ.ಪಂ. ಮಾಜಿ ಸದಸ್ಯ ಎಂ.ಟಿ.ಕುಮಾರ್, ತಾಲೂಕು ಅಧ್ಯಕ್ಷ ಹೆಚ್.ಸಿ.ಕುಮಾರ್, ನಗರಾಧ್ಯಕ್ಷ ಸಂತೋಷ್‌ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂ.ಡಿ.ದ್ರಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷಿö್ಮ, ಯುವ ಘಟಕದ ಅಧ್ಯಕ್ಷ ಡಿ.ಎಸ್.ಯೋಗೇಶ್, ಮುಖಂಡರಾದ ಎಸ್.ಟಿ.ಕೀರ್ತಿ, ಹೆಚ್.ಆರ್.ರಮೇಶ್, ವಡ್ಡರಕೊಪ್ಪಲುಶ್ರೀಧರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಒಟ್ಟಾರೆ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ರಂಗೇರುವುದಂತು ನಿಜ.

admin
the authoradmin

Leave a Reply