LatestMysore

ಉಪನ್ಯಾಸಕರ ಶ್ರಮದಿಂದ ಮಕ್ಕಳು ಉತ್ತಮ ಫಲಿತಾಂಶ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

ಹುಣಸೂರು( ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ವೃಂದವು ತಾಳ್ಮೆ ಸಹನೆ ಹೊಂದಾಣಿಕೆ ಇದ್ದಾಗ ಸಂಸ್ಥೆಗಳು ಹೆಸರು ಗಳಿಸುವುದರ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸಿ ಉತ್ತಮ ಫಲಿತಾಂಶ ಬರಲು ಸಹಕಾರಿ ಯಾಗುತ್ತದೆ ಎಂದು ಸಿಡಿಸಿ ಉಪಾಧ್ಯಕ್ಷ, ಟಿಎಪಿಸಿ ಎಂಎಸ್ ಉಪಾಧ್ಯಕ್ಷ ಹೊನ್ನಪ್ಪರ ಕಾಳಿಂಗೆ ಹೇಳಿದರು.

ತಾಲೂಕಿನ ಗಾವಡಗೆರೆ ಪದವಿಪೂರ್ವ ಕಾಲೇಜಿನಲ್ಲಿ 2026- 27 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಹೊಂದಾಣಿಕೆ ಇಲ್ಲದಿದ್ದರೆ ಶಾಲಾ ಕಾಲೇಜುಗಳಲ್ಲಿ ಫಲಿತಾಂಶ ಕುಸಿಯುವುದರ ಜೊತೆಗೆ ಮಕ್ಕಳ ದಾಖಲಾತಿ ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಕಾಲೇಜು ಕಳೆದ 5 ವರ್ಷಗಳಿಂದ ಸರ್ಕಾರಿ ಕಾಲೇಜುಗಳ ಪೈಕಿ ಪ್ರತಿ ವರ್ಷ ಪ್ರಥಮ ಸ್ಥಾನದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ತಾಲೂಕಿಗೆ ಪ್ರಥಮ, ಗ್ರಾಮೀಣ ಭಾಗದ ಕಾಲೇಜಿಗೆ ಬೇರೆ ತಾಲೂಕಿನಿಂದ ವಿದ್ಯಾರ್ಥಿಗಳು ದಾಖಲಾಗುತ್ತಿರುವುದರ ಜೊತೆಗೆ ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿಯೂ ಕೂಡ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ

ಉಪನ್ಯಾಸಕರು ಕೂಡ ತಮ್ಮ ತಮ್ಮ ವಿಷಯಗಳವಾರು ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಉತ್ತೇಜನ ನೀಡುವುದರಿಂದ ಮಕ್ಕಳಿಗೆ ಮತ್ತಷ್ಟು ಪ್ರೇರಣೆ ಸಿಕ್ಕಿ ಕಾಲೇಜಿಗೆ ಫಲಿತಾಂಶ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಓದಿದ ಶಾಲೆ ತಮ್ಮ ಗ್ರಾಮದ ಹಾಗೂ ಪೋಷಕರಿಗೆ ಹೆಸರು ತರುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಆಗ ಗುರಿ ಮುಟ್ಟಲು ಸಾಧ್ಯ ಎಂದರು.

ಇದೇ ವೇಳೆ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕರು ತಮ್ಮ ತಮ್ಮ ವಿಷಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬಹುಮಾನ ನೀಡಿ ಗೌರವಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಜನಾರ್ಧನ್, ಉಪ ಪ್ರಾಂಶುಪಾಲ ಸಿದ್ದರಾಜು,, ಸಿಡಿಸಿ ಸದಸ್ಯರಾದ ಸ್ವಾಮಿಗೌಡ, ಶ್ರೀಕಂಠ, ನಟರಾಜು, ಉಷಾ, ಶೋಭ, ರಾಘವೇಂದ್ರ, ಹಿರಿಯ ಉಪನ್ಯಾಸಕ ಡಾ. ಚಂದ್ರು, ಸೇರಿದಂತೆ  ಕಾಲೇಜಿನ ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು

admin
the authoradmin

Leave a Reply