LatestMysore

ಚಿಬುಕಹಳ್ಳಿ  ಹಾಲು ಉತ್ಪಾದಕರ  ಸಂಘದ ಅಧ್ಯಕ್ಷರಾಗಿ ಸಿ. ಪಿ ಸೋಮಶೇಖರ್  ಅವಿರೋಧ ಆಯ್ಕೆ

ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ  ಹಾಲು ಉತ್ಪಾದಕರ  ಸಹಕಾರ ಸಂಘದ ಅಧ್ಯಕ್ಷರಾಗಿ ಸಿ. ಪಿ ಸೋಮಶೇಖರ್  ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿದ್ದ ಸಿ. ಬಿ ಬೀರೇಗೌಡ  ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸೋಮಶೇಖರ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ಸಿಡಿಓ ಎಸ್ ರವಿ  ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಚುನಾವಣಾ ಸಭೆಯಲ್ಲಿ ಜವರಯ್ಯ ಸಿ ಕೆ, ರವೀಶ್ ಸಿ ಆರ್, ಶಿವರಾಜ್ ಸಿ ಟಿ, ವೆಂಕಟೇಶ್ ಸಿ ಜೆ, ಶಿವರಾಜ್, ಮೋಹನ್ ಕುಮಾರ್, ಪ್ರೇಮಮ್ಮ, ಅನುಪಮ ಹಾಜರಿದ್ದರು.

ಅಧ್ಯಕ್ಷರ ಆಯ್ಕೆ ಪ್ರಕಟಗೊಂಡ ನಂತರ ಗ್ರಾಮಸ್ಥರು ಮತ್ತು ಸೋಮಶೇಖರ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ್  ಮಾತನಾಡಿ ರೈತರು  ಗುಣಮಟ್ಟದ ಹಾಲು ಹಾಕಿ ಸಂಘದ ಬೆಳವಣಿಗೆಗೆ ಸಹಕಾರ ಕೊಡಬೇಕು ಎಂದು  ಹೇಳಿದರು.

ಸಂಘದ ಸಿಇಓ ಲೋಕೇಶ್ ಸಿ. ಕೆ, ಹಾಲು ಪರೀಕ್ಷಕ ಮಂಜೇಶ್ ಸಿ ಎಂ, ಸಹಾಯಕ ಜಗದೀಶ್ ಸಿ ಎಸ್,  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವರಾಜ್, ಮಾಜಿ ಗ್ರಾ ಪಂ ಅಧ್ಯಕ್ಷ  ಸಿ ಕೆ ಬಸವರಾಜ್, ಮಾಜಿ ಗ್ರಾ ಪಂ ಅಧ್ಯಕ್ಷ ಮಹದೇವ್, ಊರಿನ ಮುಖಂಡರಾದ ರಾಮೇಗೌಡ್ರು, ಬಾಲಸುಂದರ್, ರಂಗಸ್ವಾಮಿ, ಸಿ.ವಿ. ರಾಜಪ್ಪ, ಸತೀಶ್, ಸಿ ಸಿ  ಸೋಮಶೇಖರ್, ಚೆಲುವರಾಜು, ಶ್ರೀನಿವಾಸ್, ಸತೀಶ್, ನಿಂಗಯ್ಯ ಹಾಗೂ ಊರಿನ ಗ್ರಾಮಸ್ಥರು   ಹಾಜರಿದ್ದರು.

admin
the authoradmin

Leave a Reply