CrimeLatest

ಕೊಳ್ಳೇಗಾಲದಲ್ಲಿ ಉಡ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳಿಬ್ಬರ ಬಂಧನ… ಉಡಾ ರಕ್ಷಣೆ

ಚಾಮರಾಜನಗರ: ವನ್ಯ ಪ್ರಾಣಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದಿಸುವವರ ದೊಡ್ಡ ಜಾಲವೇ ಅಡಗಿದ್ದು, ಇವರು ಎಷ್ಟೇ ಕ್ರಮ ವಹಿಸಿದರೂ ತಮ್ಮ  ಅಕ್ರಮ ಚಟುವಟಿಕೆಯನ್ನು ಮಾತ್ರ ಬಿಡುತ್ತಿಲ್ಲ. ಇಡೀ ಉಡಾವನ್ನು ಹಿಡಿದು ಅದನ್ನು ಮಾರಾಟಕ್ಕೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದ್ದು ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ಉಡಾವನ್ನು ರಕ್ಷಿಸಿದ್ದಾರೆ.

ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದ ಜಮೀರುಲ್ಲ ಶರೀಫ್, ಆನೆಕಲ್ ತಾಲ್ಲೂಕಿನ ಶಿಕಾರಿಪಾಳ್ಯ ಗ್ರಾಮದ ಶೇಕ್ ರಫೀಕ್ ಬಂಧಿತರು. ಇವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹೊಸ ಅಣಗಳ್ಳಿ ಗ್ರಾಮದ ಪಾಪನ ಕೆರೆ ಬಳಿ ಉಡವನ್ನು ಹಿಡಿದು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ವರ್ತಮಾನದ ಮೇರೆಗೆ  ಪೊಲೀಸ್ ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿ ಉಡಾ ಸಹಿತ ಬಂಧಿಸಿದ್ದಾರೆ. ಬಂಧಿತರ ವಿರುದ್ಧ   ವನ್ಯಜೀವಿ ಸಂರಕ್ಷಾಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ. ಬಂಧಿತರಿಂದ ಜೀವಂತವಾದ ಉಡವನ್ನು ರಕ್ಷಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಅವಿನಾಶ್ ಹಾಗೂ ಸಿಬ್ಬಂದಿ ಬಸವರಾಜು ಎಂ, ಸಯದ್ ಜಮೀಲ್ ಅಹಮ್ಮದ್, ರಾಮಚಂದ್ರ, ಸಯ್ಯದ್ ಮು?ರಪ್, ಲತಾ, ಪ್ರಭಾಕರ್ ಮತ್ತು ಬಸವರಾಜು ಭಾಗವಹಿಸಿದ್ದರು.

admin
the authoradmin

Leave a Reply