ಹಾಡಿಗಳಿಗೆ ಭೇಟಿ ನೀಡಿ ಎಸ್ ಐಆರ್ ಸಮಸ್ಯೆ ಆಲಿಸಿದ ಎಸಿ ಕೆ.ವಿ.ಕಾವ್ಯಾರಾಣಿ.. ಎಸ್ ಐಆರ್ ಫಾರಂ ಭರ್ತಿಗೆ ಸೂಚನೆ

ಹುಣಸೂರು(ಮನುಕುಮಾರ್): ಸರಕಾರಿ ಸವಲತ್ತುಗಳನ್ನು ಹಾಗೂ ಮತದ ಹಕ್ಕು ಪಡೆಯಲು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಫಾರಂನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ತುಂಬಬೇಕು ಎಂದು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ತಿಳಿಸಿದರು.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನಾಗಪುರ, ವೀರನ ಹೊಸಹಳ್ಳಿ ಹಾಗೂ ಬಿಬಿಸಿ ಕಾಲೋನಿಯ ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದವರು, ನಂತರ ಮಾತನಾಡಿ 2002ರ ಮತ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ವಾಸಸ್ಥಳ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಇರಬೇಕು, ನೋಟೀಸ್ ಬಂದಾಗ ಕಡ್ಡಾಯವಾಗಿ ತಮ್ಮ ದಾಖಲೆಗಳನ್ನು ನೀಡಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು. ದಾಖಲೆಗಳು ಇಲ್ಲದಿದ್ದರೆ ಸೇರಿಸಲು ಸಾಧ್ಯವಿಲ್ಲವೆಂದರು.

ತುಂಬಾ ಹಾಡಿಯ ಜನರು 2002ರ ನಂತರ ಬಂದು ದಾಖಲೆಗಳನ್ನು ಮಾಡಿಸಿಕೊಂಡಿದ್ದರೆ ಆಧಾರ್ ಕಾರ್ಡ್ ವಾಸಸ್ಥಳ ನೀಡಬೇಕು ಎಂದು ಎಸಿ ಯವರು ತಿಳಿಸಿದಾಗ ಬಿ.ಎಲ್.ಓ. ಮಾನಸ ಹಾಗೂ ಬಿಎಲ್ಎ2 ಜೆ.ಕೆ ಪ್ರಕಾಶ್ ಮಾಹಿತಿ ನೀಡಿ ನಾಗಪುರ 1 ನೇ ಬ್ಲಾಕ್ ನಿಂದ 6 ನೇ ಬ್ಲಾಕ್ ರವರಗೆ 1062 ಮತದಾರರು ಇದ್ದು ಈಗಾಗಲೇ 600 ಜನರನ್ನು ನೊಂದಾಯಿಸಲಾಗಿದೆ. 181 ಜನರು ಮರಣ ಹೋಂದಿದ್ದಾರೆ. 135 ಜನರ ಅಪ್ ಲೋಡ್ ಮಾಡುವುದು ಬಾಕಿ ಇದ್ದು 230 ಜನರು 6 ಬ್ಲಾಕ್ ಕಿಂದ ಮಡಿಕೇರಿ, ಕೊಡಗು ನಾಗರಹೊಳೆ, ವಲಸೆ ಹೊರಹೋಗಿದ್ದಾರೆ.
ಹೆಬ್ಬಾಳ ಪುನರ್ವಸತಿ ಕೇಂದ್ರದಿಂದ 16 ಜನ, ಭರತವಾಡಿ ಹಾಡಿಯಿಂದ 18 ಜನರು ಬಿಬಿಸಿ ಕಾಲೋನಿಯ , 2 ನೇ ಪಕ್ಷಿ ರಾಜಪುರ, ಸಿ.ಪುರ ಹಾಡಿಗಳಲ್ಲಿ ಮತದಾರರು ಗೋವ, ಕೇರಳ, ಕೆ.ಆರ್.ಪೇಟೆ ಗೆ ವಲಸೆ ಹೋಗಿದ್ದಾರೆ ಎಂದು ಅಲ್ಲಿನ ಬಿ.ಎಲ್.ಓ ಗಳಾದ ಪ್ರೇಮಿಳಾ, ಮಾನಸ, ಪಿ.ಕೆ.ಶಾರದ, ಬಿ.ಎಲ್.ಎ2 ಗಳಾದ ಪ್ರಕಾಶ್, ಕುಮಾರ್, ತಿಳಿಸಿದಾಗ ಹುಡಾ ಅಧ್ಯಕ್ಷರಾದ ಹೆಚ್.ಪಿ.ಅಮರ್ ನಾಥ್ ವಾಹನ ವ್ಯವಸ್ಥೆ ಮಾಡಿ ಹಾಡಿ ಮುಖಂಡರಾದ ರಾಜಪ್ಪ, ಚಂದ್ರುರವರನ್ನು ಕಳುಹಿಸಿ ಶೀಘ್ರವಾಗಿ ಎಲ್ಲರನ್ನೂ ಇದೇ ತಿಂಗಳ 29 ರ ಒಳಗೆ ಕರೆತಂದು ಮತದಾರರ ಪರಿಷ್ಕರಣೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದರು.
ತಹಸಿಲ್ದಾರ್ ಮಂಜುನಾಥ್ ಎಸ್.ಐ.ಆರ್ ಕುರಿತು ಸಾರ್ವಜನಿಕರಲ್ಲಿ ಆತಂಕ ಬೇಡ, ಚುನಾವಣಾ ಸ್ಮರಣೆಯ ಅವಧಿಯನ್ನು ಜು.29ರಿಂದ ಅ.8ರವರೆಗೆ ವಿಸ್ತರಿಸಿದೆ. ತಾಲೂಕಿನಲ್ಲಿ ಒಟ್ಟು 2,53,248 ಮತದಾರರಾగి, ತಾಲೂಕಿನಲ್ಲಿ ಶೇ.100ರ ಪ್ರಮಾಣದಲ್ಲಿ ಮತದಾರರ ಗಣತಿ ನಮೂನೆ (ಎನ್ಯುಮರೇಷನ್ ಫಾರ್ಮ)ಯನ್ನು ವಿತರಿಸಲಾಗಿದ್ದು, ಈ ಪೈಕಿ ಶೇ.60ರಷ್ಟು ಭರ್ತಿ ಮಾಡಿದ ನಮೂನೆಗಳನ್ನು ಮತದಾರರಿಂದ ಪಡೆದು ಅವುಗಳನ್ನು ಡಿಜಿಟಲ್‌ಲೇಷನ್ ಮಾಡಲಾಗಿದೆ ಎಂದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ಹಾಡಿ ಜನರಿಗೆ ನೀವೆಲ್ಲರೂ ಹೆದರಿಕೊಳ್ಳುವ ಅಗತ್ಯವಿಲ್ಲ, ಹಾಡಿಯಿಂದ ಕೆಲಸಕ್ಕಾಗಿ ವಲಸೆ ಹೋಗಿರುವವರನ್ನು ಗುರುತಿಸಿ ಕರೆದುಕೊಂಡು ಬರಲು ವಾಹನ ಸೇರಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು, ಪ್ರತಿಯೊಬ್ಬರೂ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಆಗಸ್ಟ್ 8ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ನೊಂದಾಯಿಸಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಎಸ್ ಐಆರ್ ನ ಮೂಲ ಉದ್ದೇಶವೇ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳುವುದು ಮತ್ತು ಅನರ್ಹ ಮತದಾರರನ್ನು ಹೊರಗಿಡುವುದು ಆಗಿದ್ದು, ಸಂವಿಧಾನಾತ್ಮಕವಾಗಿ ನಿಮಗೆ ದತ್ತವಾಗಿರುವ ಹಕ್ಕನ್ನು ಉಳಿಸಿಕೊಳ್ಳಿರಿ ಎಂದರು.
ಸಭೆಯಲ್ಲಿ ಆರ್.ಐ ನಂದೀಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಮಲ್ಲೇಶ್, ಕರಿಬಸಪ್ಪ, ಗಿರಿಜನರ ಮುಖಂಡರಾದ ಜೆ.ಟಿ.ರಾಜಪ್ಪ, ಹೆಬ್ಬಾಳ ಚಂದ್ರು, ಅಯ್ಯನಕೆರೆ ಹಾಡಿ ಶಿವಣ್ಣ, ಕೊಳವಿಗೆ ಹಾಡಿಯ ಗಣೇಶ್, ತಾ.ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಎಲ್.ಗಂಗಾಧರ್, ಸಹಾಯಕ ರವೀಶ್, ಗ್ಯಾರಂಟಿ ತಾಲ್ಲೂಕು ಅಭಿವೃದ್ಧಿ ಅದ್ಯಕ್ಷ ರಾಘು, ಅಕ್ರಮ- ಸಕ್ರಮ ಸಮಿತಿ ಸದಸ್ಯ ಕುಮಾರ್, ಸೇರಿದಂತೆ ಅನೇಕರು ಹಾಜರಿದ್ದರು.







