LatestNews

ಕೂಡಿಗೆ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಕುಶಾಲನಗರ (ಆರ್ ಹೆಚ್ ) : ಸಮೀಪದ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಡಾ.ಮಂತರ್ ಗೌಡ  ಉದ್ಘಾಟಿಸಿದರು.

ಕೂಡಿಗೆ ಪಂಚಾಯತಿಯ ಹುಣುಸೆಪಾರೆ ಗ್ರಾಮದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ  ಪಂಗಡದ ಕಾಲೋನಿಯ ಕಾಂಕ್ರೀಟ್ ರಸ್ತೆ ಅಭಿವೃದ್ಧಿ,ಜೇನುಕಲ್ಲುಬೆಟ್ಟ ಗ್ರಾಮದಲ್ಲಿ ರೂ.44.60 ಲಕ್ಷ  ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ಸೀಗೆಹೊಸೂರು ಕಾಲೋನಿಗೆ ಹೋಗುವ ರಸ್ತೆ ರೂ. 25 ಲಕ್ಷ ವೆಚ್ಚದ ಅಭಿವೃದ್ಧಿ ಪಡಿಸಲಾಗಿದ್ದು, ಪೂರ್ಣಗೊಂಡಿರುವ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು ಕೂಡಿಗೆ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ತೀವ್ರ ಹದಗೆಟ್ಟಿದ್ದ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂಬ ಈ ಭಾಗದ ಜನರ ಹಾಗೂ ರೈತರ ಬೇಡಿಕೆಯಾಗಿತ್ತು.ಕಳೆದ ಅನೇಕ ವರ್ಷಗಳಿಂದಲೂ ಗ್ರಾಮಸ್ಥರು ಹಾಗೂ ರೈತರು ರಸ್ತೆ ಅವ್ಯವಸ್ಥೆಯಿಂದ  ತುಂಬಾ ತೊಂದರೆ ಅನುಭವಿಸುತ್ತಿದ್ದರು. ಈ ಭಾಗದ ಜನರ ಬೇಡಿಕೆಯನ್ನು ಪರಿಗಣಿಸಿ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗಿದೆ.

ಇದರಿಂದ ಗ್ರಾಮದ ಜನರಿಗೆ ಹಾಗೂ ರೈತರಿಗೆ ತುಂಬ ಅನುಕೂಲವಾಗಿದೆ.ಇನ್ನು ಉಳಿದ ಅಲ್ಪ ರಸ್ತೆಯನ್ನು ‌ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಈ ಭಾಗದ ರೈತರ ಸಮಸ್ಯೆ ಹಾಗೂ 57 ಅರ್ಜಿ ಕುರಿತು ಚರ್ಚಿಸಲು ಮುಂದಿನ ದಿನಗಳಲ್ಲಿ ಕಂದಾಯ ಅಧಿಕಾರಿಗಳ ಸಭೆಯನ್ನು ಸೀಗೆಹೊಸೂರು ಗ್ರಾಮದಲ್ಲಿ ಆಯೋಜಿಸಿ ರೈತರ ಅನೇಕ ವರ್ಷಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಸಕ್ರಮ ಅರ್ಜಿದಾರರು ತಮ್ಮ ಜಮೀನು ಸಕ್ರಮಕ್ಕೆ ಸಂಭಂದಿಸಿದಂತೆ  ಯಾರಿಗೂ ಒಂದು ರುಪಾಯಿ ಕೂಡ ನೀಡಬಾರದು ಎಂದು ಶಾಸಕರು ರೈತರಿಗೆ ಮನವಿ ಮಾಡಿದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಜೇನುಕೊಲ್ಲು ಮೀಸಲು ಅರಣ್ಯ ಪ್ರದೇಶದ‌ ಅಂಚಿನಲ್ಲಿರುವ ಗ್ರಾಮಗಳ ರಸ್ತೆ ಸೇರಿದಂತೆ ಮೂಲ ಭೂತ ಸೌಕರ್ಯ ಒದಗಿಸಲು ಶಾಸಕರು ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಜೊತೆಗೆ ಈ ಭಾಗದ ರೈತರ ಸಮಸ್ಯೆ ಬಗರಹರಿಸಲು ಶಾಸಕರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ,ಎಂಜಿನಿಯರ್ ವಿಜಯ್,ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ,ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪೇಮಾಲೀಲಾ,ಮಾಜಿ ಸದಸ್ಯಆನಂತ,ಗಿರೀಶ್, ಶಿವಣ್ಣ,ದೇವಾಲಯ ಸಮಿತಿ ಅಧ್ಯಕ್ಷ ಚಂದ್ರು, ಕರವೇ ಅಧ್ಯಕ್ಷ ರಾಜಣ್ಣ, ಗುತ್ತಿಗೆದಾರ ಅರುಣ್ ಕೂಗೂರು, ಗುರುಪ್ರಸಾದ್ ಶುಂಠಿ, ಯೋಗೇಶ್, ಕುಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

admin
the authoradmin

Leave a Reply