ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಅಖಿಲ ಭಾರತ ವೀರಶೈವ ಮಹಾಸಭಾ(ರಿ)ದ ಕೆ.ಆರ್.ನಗರ ತಾಲೂಕು ವೀರಶೈವ ಯುವ ಘಟಕದ ಅಧ್ಯಕ್ಷರಾಗಿ ಕಾಮನಹಳ್ಳಿ ಯತಿರಾಜ್ ಕೆ.ಎಸ್ ಅವರನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾ(ರಿ) ಕೃಷ್ಣರಾಜನಗರ ತಾಲೂಕು ಅಧ್ಯಕ್ಷರಾದ ಸಿ.ಪಿ ರಮೇಶ್ ಕುಮಾರ್ ಹಾಗೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜ್ಞಾನಾನಂದ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಿ ಆದೇಶ ಪತ್ರವನ್ನು ವಿತರಿಸಲಾಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಘಟನೆಯ ಹಿತದೃಷ್ಟಿಯಿಂದ ಹಾಗೂ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಯುವ ಘಟಕದ ಅವಶ್ಯಕತೆಯಿದ್ದು, ಕೆ ಆರ್ ನಗರ ತಾಲ್ಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿಕೊಳ್ಳಲಾಗಿದೆ.
ತಾವು ಇಂದಿನಿಂದಲೇ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಘದ ಯಶಸ್ವಿಗೆ ಸಂಪೂರ್ಣವಾಗಿ ಸಹಕರಿಸುವುದು ಮತ್ತು ಕ್ರಿಯಾಶೀಲರಾಗಿ ತೊಡಗಿಕೊಳ್ಳುವ ಯುವಕರಿಗೆ ಆದ್ಯತೆ ನೀಡಿ ಯುವ ಘಟಕದ ಸಮಿತಿ ರಚಿಸಿಕೊಳ್ಳಲು ಈ ಮೂಲಕ ತಮಗೆ ಸೂಚಿಸಲಾಗಿದೆ. ಅದರಂತೆ ಕೂಡಲೇ ಸಮಿತಿ ರಚಿಸಿ ಪಟ್ಟಿಯನ್ನು ನೀಡುವಂತೆ ಸೂಚಿಸಲಾಗಿದೆ.








