LatestMysore

ಕೆ ಆರ್ ನಗರ ಟಿಎಪಿಎಸ್ಎಂಎಸ್ ನಿರ್ದೇಶಕರಿಂದ ಯತೀಂದ್ರ, ತನ್ವೀರ್ ಸೇಠ್ ರವರಿಗೆ ಸನ್ಮಾನ

ಕೆ. ಆರ್. ನಗರ(ಸಂಘಟನೆ ಮಂಜುನಾಥ್): ತಾಲೂಕು  ವ್ಯವಸಾಯೋತ್ಪನ   ಮಾರಾಟ ಸಹಕಾರ ಸಂಘದ ( ಟಿಎಪಿಎಸ್ಎಂಎಸ್ ) ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಂಘದ  ಎಲ್ಲಾ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದ್ದರು. ಆ ಮೂಲಕ ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸಲಾಗಿತ್ತು.

ಈ ಗೆಲುವಿನ ಹಿಂದೆ ಶಾಸಕ ಡಿ.ರವಿಶಂಕರ್ ಮತ್ತು ಕಾಂಗ್ರೆಸ್ ಮುಖಂಡರ  ಶ್ರಮವಿದ್ದು ಈ  ಗೆಲುವಿನ ಹಿನ್ನಲೆಯಲ್ಲಿ ನೂತನ ನಿರ್ದೇಶಕರು  ಮೈಸೂರು ಚಾಮರಾಜನಗರ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತಿಂದ್ರ ಸಿದ್ರಾಮಯ್ಯ ಹಾಗೂ ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರನ್ನು ಸನ್ಮಾನಿಸಿದರು.

ಈ ವೇಳೆ ಶಾಸಕರಾದ ಡಿ ರವಿಶಂಕರ್, ಟಿಎ ಪಿಎಸ್ಎಂ ಎಸ್ ನಿರ್ದೇಶಕರಾದ ಎಸ್. ಸಿದ್ದೇಗೌಡ, ಹೆಬ್ಬಾಳು  ನಾಗೇಂದ್ರ, ಎಚ್ ಪಿ ಪ್ರಶಾಂತ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಚೀರನ್ನಳ್ಳಿ  ಉಮೇಶ್ ಹಾಗೂ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

admin
the authoradmin

Leave a Reply