LatestMysore

ಮೈಸೂರಿನ ಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಅರ್ಥಪೂರ್ಣ ಕಾರ್ಯಕ್ರಮ

ಮೈಸೂರು: ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ದಿನದ ಅಂಗವಾಗಿ  ಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮವು  ಅರ್ಥಪೂರ್ಣವಾಗಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರುದ್ಧದ ದಿನದ ಮಹತ್ವದ ಕುರಿತಂತೆ ಮಾತನಾಡಿದ  ವಕೀಲರಾದ  ವಂದನೀಯ ಸಿಸ್ಟರ್ ಜನೀಫರ್ ರವರು ಮಾನವ ಕಳ್ಳ ಸಾಗಣಿಕೆಯ ಅಪಾಯಗಳು ಅದರ ತಡೆಗಟ್ಟುವಿಕೆ ,ಮಕ್ಕಳ ಹಕ್ಕುಗಳು, ಸುರಕ್ಷಿತ ಕ್ರಮಗಳು ಹಾಗೂ ಕಾನೂನುಗಳ ಕುರಿತಂತೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಮಾತೆ ಜುಡಿತಾರವರ ಸ್ಮರಣೆಯಲ್ಲಿ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 20 ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭಹಾರೈಸಲಾಯಿತು. ಕಾರ್ಯಕ್ರಮದಲ್ಲಿ  ವಿದ್ಯಾ ಜ್ಯೋತಿ ಶಾಲೆಯ 9ನೇ ತರಗತಿಯ ಸುಮಾರು 140 ವಿದ್ಯಾರ್ಥಿಗಳು ಭಾಗವಹಿಸಿದ್ದರು

ಜ್ಯೋತಿ ನಿಲಯ ಸಮುದಾಯದ ಮುಖ್ಯಸ್ಥರಾದ ಸಿಸ್ಟರ್ ತೆರೆಸಾ, ವಿದ್ಯಾ ಜ್ಯೋತಿ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಗ್ರೇಟಾ, ಜ್ಯೋತಿ ಸಮಾಜ ಕಲ್ಯಾಣ ಕೇಂದ್ರದ ಕೋ ಆರ್ಡಿನೇಟರ್ ಸಿಸ್ಟರ್ ಶಾಂತಿ, ಸಿಸ್ಟರ್ ಸೌಜನ್ಯ, ಹೊಲಿಗೆ ತರಬೇತಿಯ ಶಿಕ್ಷಕಿ  ಶ್ರೀಮತಿ ಪುಟ್ಲಿಂಗಮ್ಮ ಮತ್ತು ಶ್ರೀಮತಿ ಕಲಾ ಉಪಸ್ಥಿತರಿದ್ದರು.

ಸಂಸ್ಥೆಯ ಸಂಸ್ಥಾಪಕರಾದ ಮಾತೆ ಜುಡಿತಾರವರ ಸ್ಮರಣೀಯ ದಿನದ ಹಿನ್ನಲೆಯಲ್ಲಿ  ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

admin
the authoradmin

Leave a Reply