LatestSports

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚುಗಾರಕೊಪ್ಪಲಿನ ಶಿಲ್ಪಾಗೆ ಕಂಚಿನ ಪದಕ.. ಇವರ ಸಾಧನೆ ಅಮೋಘ!

ಕೆ.ಆ‌ರ್.ನಗರ(ಸಂಘಟನೆ ಮಂಜುನಾಥ್): ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ  ಎಂಬುದನ್ನು ಕೆ.ಆರ್.ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಕೆ.ಜಿ.ಶೈಲ ಮತ್ತು ಶಾಂತಾ ದಂಪತಿ ಪುತ್ರಿ ಕೆ.ಎಸ್.ಶಿಲ್ಪಾ ದೇಶದ ಜನತೆಗೆ ತೋರಿಸಿಕೊಟ್ಟಿದ್ದಾರೆ.

ನಮ್ಮಿಂದ ಆಗಲ್ಲ ಎಂದು ಕೈಕಟ್ಟಿ ಕೂರುವವರಿಗೆ  ಸಾಧಿಸುವ ಛಲ, ಆತ್ಮಸ್ಥೈರ್ಯ ಮತ್ತು ಪರಿಶ್ರಮವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶಿಲ್ಪಾ ಸಾಕ್ಷಿಯಾಗುತ್ತಾರೆ. ಬಾಲ್ಯದ ದಿನದಲ್ಲಿ ಒಂದು ಕೆಟ್ಟಗಳಿಗೆಯಲ್ಲಿ ಅಪಘಾತಕ್ಕೀಡಾಗಿ ಎಡಕಾಲು ಕಳೆದು ಕೊಂಡ ಶಿಲ್ಪಾ ಅದಕ್ಕಾಗಿ ಕೊರಗುತ್ತಾ ಮೂಲೆ ಸೇರಲಿಲ್ಲ. ಬದಲಿಗೆ ಏನಾದರೊಂದು ಮಾಡುತ್ತೇನೆ ಎಂದು ಟೊಂಕ ಕಟ್ಟಿ ನಿಂತರು ಪರಿಣಾಮ ಕಠಿಣ ಪರಿಶ್ರಮದಿಂದ  ಶಿಕ್ಷಕಿಯಾಗಿ ಹಾಗೂ ಕ್ರೀಡಾಪಟುವಾಗಿ ಹೊರಹೊಮ್ಮಿದರು.

ಅವರ ಸಾಧನೆ ಅವರನ್ನು ಕಾಮನ್ ವೆಲ್ತ್ ಕ್ರೀಡಾಕೂಟದ ತನಕ ಕೊಂಡೊಯ್ದಿದಲ್ಲದೆ  ದೇಶವನ್ನು ಪ್ರತಿನಿಧಿಸುವ ಅವಕಾಶ ಮಾಡಿಕೊಟ್ಟಿತು. 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಎಫ್-57 ಶಾಟ್‌ಪುಟ್ (ಗುಂಡು ಎಸೆತ) ವಿಭಾಗದಲ್ಲಿ ಎಫ್-57 ಶಾಟ್‌ಪುಟ್ (ಗುಂಡು ಎಸೆತ) ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಊರಿಗೆ ಜಿಲ್ಲೆ, ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ಹೆ್ಮ್ಮೆ ತಂದಿರುವುದು ಖುಷಿಪಡುವ ವಿಚಾರವಾಗಿದೆ. ಇದೀಗ ಹುಟ್ಟೂರಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಾಯಿ ಶಾಂತಾ ಅವರು,. ನಮ್ಮೂರಿನಲ್ಲೇ ವಿದ್ಯಾಭ್ಯಾಸ ಮಾಡಿದ್ದಾಳೆ. ಶಾಲೆ, ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ದ್ದಾಳೆ. ಜತೆಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಪಾಲ್ಗೊಂಡು ಹಲವು ಪದಕಗಳನ್ನು ಗಳಿಸಿದ್ದಾಳೆ. ಈಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿರುವುದು ಸಂತೋಷವಾಗಿದೆ. ನಮ್ಮೊಂದಿಗೆ ಪೋನ್‌ನಲ್ಲಿ ಶಿಲ್ಪಾ ಮಾತನಾಡಿದ್ದು, ಅವಳು ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವಯಸ್ಸಿನಲ್ಲಿ ಬೇಕಾ ಎಂದು ಹಿಯಾಳಿಸಿದವರಿಗೆ ಸಾಧನೆಯಿಂದಲೇ ಉತ್ತರ ಕೊಟ್ಟ ಜಮ್ಮಡ ಪ್ರೀತ್‌ ಅಪ್ಪಯ್ಯ

admin
the authoradmin

Leave a Reply