ಮೈಸೂರು: ಮೈಸೂರಿನ ಕೇವಲ 11 ವರ್ಷದ ಬಾಲಕಿ ಧನ್ಯಶ್ರೀ ಎಸ್ ಕೇವಲ 15 ದಿನಗಳಲ್ಲಿ ಮಕ್ಕಳಿಗಾಗಿ 36 ಪುಟಗಳ ಮಕ್ಕಳ ರಾಮಾಯಣ ಕೈಬರಹ ಪುಸ್ತಕ ರಚನೆಯ ಮಾಡುವ ಮೂಲಕ ತಮ್ಮ ಅಪರೂಪದ ಸಾಧನೆಯನ್ನು ಗುರುತಿಸಿ ಹೆಬ್ಬಾಳಲ್ಲಿರುವ ಶ್ರೀ ಜ್ಞಾನೇಶ್ವರಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧನ್ಯಶ್ರೀ ಗೌರವಿಸಿ ಅಭಿನಂದಿಸಲಾಯಿತು
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಬಾಲ ಪ್ರತಿಭೆ ಧನ್ಯಶ್ರೀ ಸಾಧನೆ ಅನನ್ಯವಾದುದು 2ನೇ ಶತಮಾನದ ಶ್ರೀ ಶಂಕರಾಚಾರ್ಯರ 8ನೇ ವರ್ಷದ ಸಾಧನೆ ನೆನಪಿಗೆ ಬರುತ್ತದೆ, ಮಕ್ಕಳಿಂದ ಪೋಷಕರಿಗೆ ಹೆಸರು ಬರುವಂತಹ ವಿಶೇಷ ಪ್ರಸಂಗವಾಗಿದೆ ಎಂದು ಹೇಳಿದರು
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಬರವಣಿಗೆ ಮತ್ತು ಭಾರತೀಯ ಮಹಾಕಾವ್ಯಗಳ ಬಗ್ಗೆ ಆಸಕ್ತಿ ಮೂಡಿಸಲು ಈ ಕೃತಿ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಲಿಂಗರಾಜು ಬಾಲಕಿಯ ಸಾಧನೆಯಿಂದ ಪೋಷಕರಿಗೂ ಹಾಗೂ ಶಾಲೆಗೂ ಮತ್ತು ನಮ್ಮ ಮೈಸೂರಿಗೆ ಕೀರ್ತಿ ತಂದಕೊಟ್ಟ ಬಾಲಕಿಯ ಸಾಧನೆಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಮಾಜಸೇವಕರಾದ ರಘುರಾಮ್ ವಾಜಪಾಯಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಎಸ್ಎನ್ ರಾಜೇಶ್, ಮಹಾನ್ ಶ್ರೇಯಸ್,ಪ್ರಾಂಶುಪಾಲರಾದ ನಂಜುಂಡಸ್ವಾಮಿ, ಆಡಳಿತ ಅಧಿಕಾರಿ ಗಿರೀಶ್, ತಂದೆ ಡಾ. ಶ್ರೀರಾಮ್, ತಾಯಿ ಸಮತ ಶ್ರೀರಾಮ್, ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು







