LatestMysore

ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪ್ರತಿ  ತಾಲೂಕಿಗೆ 1 ಕೋಟಿ ರೂ. ಅನುದಾನ ಬಿಡುಗಡೆ  

ಹುಣಸೂರು(ಮನುಕುಮಾರ್): ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪ್ರತಿ  ತಾಲೂಕಿಗೆ 1 ಕೋಟಿ ರೂ. ಅನುದಾನ ಬಿಡುಗಡೆ  ಮಾಡಲಾಗಿದೆ ಎಂದು ಉಸ್ತುವಾರಿ ಹಾಗೂ  ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ  ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ  ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ  ಅಧಿಕಾರಿಗಳ ಸಭೆ ನಡೆಸಿದ ಬರ ಪರಿಹಾರ  ಕಾಮಗಾರಿಗಳ ಕುರಿತು ಮಾಹಿತಿ ಪಡೆದು  ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು  ನೀಡಿದರು.

ಸಭೆಯ ನಂತರ ಮಾಧ್ಯಮದವರೊಂದಿಗೆ  ಮಾತನಾಡಿದ ಅವರು, ಈಗಾಗಲೇ ತಾಲೂಕಿನಲ್ಲಿ 35 ಹೊಸ ಬೋರ್ ವೆಲ್ ಗಳನ್ನು ಕೊರೆಸಲಾಗಿದೆ.  ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು  ಪ್ರತಿದಿನ ಕಡ್ಡಾಯವಾಗಿ ಗ್ರಾಮ  ಪಂಚಾಯಿತಿಗಳಿಗೆ ಭೇಟಿ ನೀಡಬೇಕು ಮತ್ತು  ಎಲ್ಲಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಇದೇ ವೇಳೆ ರೈತರ ರಾಗಿ ಬೆಂಬಲ ಬೆಲೆ  ಯೋಜನೆಯಡಿ ೭ ಕೋಟಿ ರೂ. ಬಾಕಿ ಹಣ  ಪಾವತಿಸಬೇಕಿದ್ದು, ಸಂಬAಧಪಟ್ಟ  ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಕ್ರಮ  ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಯದಿರುವ  ಕುರಿತು ಮಾಧ್ಯಮದವರ ಪ್ರಶ್ನೆಗೆ  ಉತ್ತರಿಸಿದ ಅವರು, ತಾಲೂಕು ಮಟ್ಟದ ಕೆಡಿಪಿ  ಸಭೆಗಳನ್ನು ಸ್ಥಳೀಯ ಶಾಸಕರೇ  ನಡೆಸಬೇಕಿದ್ದು, ಜಿಲ್ಲಾ ಮಟ್ಟದಲ್ಲಿ ಸಚಿವರು  ನಡೆಸುತ್ತಾರೆ.

ಆದಾಗ್ಯೂ, ಸಾರ್ವಜನಿಕರ  ಹಿತದೃಷ್ಟಿಯಿಂದ ತಾವೇ ಖುದ್ದಾಗಿ ಆಗಸ್ಟ್  ಕೊನೆಯ ವಾರದಲ್ಲಿ ತಾಲೂಕು ಕೆಡಿಪಿ ಸಭೆ  ನಡೆಸುವುದಾಗಿ ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಎಚ್.ಪಿ.  ಅಮರ್ ನಾಥ್, ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಗ್ಯಾರಂಟಿ  ಯೋಜನೆಗಳ ತಾಲೂಕು ಅಧ್ಯಕ್ಷ ರಾಘು, ಅಕ್ರಮ_ಸಕ್ರಮ ಸಮಿತಿ ಸದಸ್ಯ ಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರು  ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಹುಣಸೂರಿನ ಸ್ನೇಹ ಜೀವಿ ಎಚ್ ಪಿ ಮಂಜುನಾಥ್ ರವರು ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹುಣಸೂರಿನ ಲಕ್ಷ್ಮಣ ತೀರ್ಥ ನದಿ,  ಶುದ್ಧೀಕರಣ ಮುಂದಾಗಬೇಕು, ಇದಲ್ಲದೆ  ಹುಣಸೂರು ನಗರದಲ್ಲಿ ನಿರ್ಮಾಣಗೊಂಡಿರುವ  250 ಹಾಸಿಗೆ ಸಾಮರ್ಥ್ಯವುಳ್ಳ ಸಾರ್ವಜನಿಕ  ಆಸ್ಪತ್ರೆಯನ್ನು ಡಿಸೆಂಬರ್ ತಿಂಗಳಲ್ಲಿ  ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್  ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ  ಸಿದ್ದರಾಮಯ್ಯನವರಿಂದ ಉದ್ಘಾಟನೆ ಮಾಡಿಸಿ  ಲೋಕಾರ್ಪಣೆ ಗೊಳಿಸಬೇಕು ಹಾಗೂ ಲಕ್ಷ್ಮಣ  ತೀರ್ಥ ನದಿ ತುಂಬಿ ಹರಿಯುತ್ತಿರುವುದರಿಂದ  ಹುಣಸೂರು ತಾಲೂಕಿನ ಎಲ್ಲಾ  ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ  ಕೈಗೊಳ್ಳಬೇಕು.

ಜತೆಗೆ ನಗರಸಭಾ  ವ್ಯಾಪ್ತಿಗೆ ಬರುವ ಸೆತುವೆ ಚಿತ್ರಮಂದಿರ  ಸ್ಥಗಿತಗೊಂಡಿದ್ದು ಅದನ್ನು ಉಪನೊಂದಣಿ  ಅಧಿಕಾರಿಗಳ ಹಾಗೂ ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆ P್ಪಛೇರಿಯಾನ್ನಾಗಿ ನಿರ್ಮಿಸಿ ಅಲ್ಲಿನ ಸ್ಥಳೀಯ ಜನರ ಅರ್ಥಿಕವಾಗಿ ಅಭಿವೃದ್ದಿ ಹೊಂದಲು ಒತ್ತುನೀಡಬೇಕು  ಎಂದು ಮಾನ್ಯ ಸಚಿವರಾದ ಯತೀಂದ್ರ  ಸಿದ್ದರಾಮಯ್ಯನವರಲ್ಲಿ  ವಿನಂತಿಸಿಕೊಂಡರು.

admin
the authoradmin

Leave a Reply