ArticlesLatest

ಕೊಡಗಿನ ಎಸ್.ಎ ಮನೋಹರ ರವರಿಗೆ  2026ನೇ ಸಾಲಿನ ರಾಷ್ಟಪತಿ ಶ್ಲಾಘನೀಯ ಸೇವಾ ಪದಕ

 ಹುಣಸೂರು( ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಎ. ಮನೋಹರ ರವರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ 2026ನೇ ಸಾಲಿನ ರಾಷ್ಟಪತಿ  ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೋಕಿನ ಶಿರಂಗಾಲ ಗ್ರಾಮದ ಬಡರೈತ ಕುಟುಂಬದ ದಿವಂಗತ ಎಸ್.ಪಿ.ಅಪ್ಪಣ್ಣ ಮತ್ತು ಶ್ರೀಮತಿ ರತ್ನಮ್ಮ ರವರ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ ದಿನಾಂಕ 12.12.1979 ರಲ್ಲಿ ಹುಟ್ಟಿದ ಇವರು,  ತಮ್ಮ ಸ್ವಗ್ರಾಮದಲ್ಲಿ 1986ನೇ ಸಾಲಿನಿಂದ 1996ನೇ ಸಾಲಿನವರೆಗೆ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ,   1997 ರಿಂದ 1998ನೇ ಸಾಲಿನವರೆಗೆ ಪಿಯುಸಿಯವರೆಗೆ  ಸರ್ಕಾರಿ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿರುತ್ತಾರೆ.

2002ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಥಮ ಬಾರಿಗೆ ಸಿ.ಇ.ಟಿ ಪರೀಕ್ಷೆ ಮೂಲಕ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಹುದ್ದೆಗೆ ಭರ್ತಿ ಮಾಡಲು ಸರ್ಕಾರವು ಆದೇಶ ಹೊರಡಿಸಿದ್ದನ್ನು ತಿಳಿದುಕೊಂಡು  ಸಿವಿಲ್ ಕಾನ್ಸ್ ಟೇಬಲ್ ಹುದ್ದೆಗೆ ಪರೀಕ್ಷೆ ಬರೆದು ಕೊಡಗು ಜಿಲ್ಲೆಯಲ್ಲಿ ಆಯ್ಕೆಯಾಗಿ, ದಿನಾಂಕ 03.10.2002ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ಅಲ್ಲಿಂದ  09 ತಿಂಗಳು ಬೆಳಗಾಂ ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರ ದಲ್ಲಿ ಬುನಾದಿ ತರಬೇತಿ ಮುಗಿಸಿ, ನಂತರ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ 2003-2009ನೇ ಸಾಲಿನವರೆಗೆ, 2010ನೇ ಸಾಲಿನಲ್ಲಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಉನ್ನತ ಹುದ್ದೆಗೆ ಸೇರಿ ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡುವ ಬಯಕೆಯಿಂದ ಉದ್ಯೋಗ ಮಾಡುತ್ತಾ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಯನ್ನು ಗಳಿಸಿದ್ದರು. ಆದರೆ ಕಾಯಕವೇ ಕೈಲಾಸ ಎಂಬಂತೆ ನಿರ್ವಹಿಸುತ್ತಿದ್ದ ಕಾನ್ಸ್ ಟೇಬಲ್ ಹುದ್ದೆಯಲ್ಲಿ ಹೆಚ್ಚಿನ ಸಮಯ ಕರ್ತವ್ಯದಲ್ಲಿ ನಿರತನಾಗಿದ್ದರಿಂದ  ಪ್ರತಿಕೆಲಸದಲ್ಲೂ ಮೇಲಾಧಿಕಾರಿಗಳ ಪ್ರಶಂಸನೆಯಿಂದ ತೃಪ್ತಿಗೊಂಡು ಉನ್ನತ ಹುದ್ದೆಗೆ ಸೇರುವ ಸಮಯ ಮತ್ತು ಅವಕಾಶ ದೊರೆಯಲ್ಲಿಲ್ಲ. ತಾನು  ಮಾಡುವ ಕೆಲಸವನ್ನು ಪ್ರೀತಿ, ಗೌರವದಿಂದ ಮಾಡಿಕೊಂಡು ಬಂದಿರುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ 2010ನೇ ಸಾಲಿನಲ್ಲಿ ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡು  ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ, ಹುಣಸೂರು ವೃತ್ತ  ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಹಾಲಿ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರರಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಅಸಾಧಾರಣ ಸೇವೆ ಸಲ್ಲಿದ್ದಕ್ಕಾಗಿ ಹೆಚ್ಚು-ಹೆಚ್ಚು ನಗದು ಪುರಸ್ಕಾರ, ಪೊಲೀಸ್ ಆಪ್ ದಿ ಮಂತ್, ಕಾಫ್ ಆಪ್ ದಿ ಮಂತ್, ರೋಟರಿ ಕ್ಲಬ್ ನ ಸಾಧಕರ ಪುರಸ್ಕಾರ, 2025-2026ನೇ ಸಾಲಿನ ಮಾನ್ಯ ಡಿ.ಜಿ ಮತ್ತು ಐಜಿಪಿ ರವರ ಕಮಾಂಡೇಷನ್ ಡಿಸ್ಕ್ ಪದಕವನ್ನು ಪಡೆದಿರುತ್ತಾರೆ.  ಇವರ ಸೇವೆಯನ್ನು ಮೇಲಾಧಿಕಾರಿಗಳು ಪ್ರಂಶಸನೆ ವ್ಯಕ್ತಪಡಿಸಿರುತ್ತಾರೆ.

ಪ್ರಶಸ್ತಿ ಪುರಸ್ಕೃತರಾದ ಮನೋಹರ್ ಹೇಳುವುದೇನು?

ಮೊದಲನೆಯದಾಗಿ ತನ್ನ ತಾಯಿ, ಹೆಂಡತಿ, ಮಕ್ಕಳಲ್ಲಿ ಕ್ಷಮೆಯಾಚಿಸುತ್ತೇನೆ ಏಕೆಂದರೆ ಇವರೊಂದಿಗೆ ಹೆಚ್ಚಿನ ಸಮಯ ಕಳೆಯದೆ ಕರ್ತವ್ಯದಲ್ಲಿ ನಿರತನಾಗಿ ಇವರುಗಳ ಯೋಗಕ್ಷೇಮದ ಕಡೆ ಗಮನಹರಿಸದೇ ಇರುವುದಕ್ಕೆ ಮತ್ತು ನನಗೆ ತೊಂದರೆ ನೀಡದೆ ನನ್ನ ಕರ್ತವ್ಯಕ್ಕೆ ಪ್ರೋತ್ಸಾಯಿಸಿದಕ್ಕೆ ಮತ್ತು ಮೊದಲ ಬಾರಿಗೆ ಕೆಳಹಂತದ ಸಿಬ್ಬಂದಿಗೆ ಈ ಉನ್ನತ ಪ್ರಶಸ್ತಿ ನೀಡಲು ಪರಿಗಣಿಸಿದ ಪೊಲೀಸ್ ಇಲಾಖೆಗೆ, ಸರ್ಕಾರಗಳಿಗೆ  ಹಾಗೂ ಕರ್ತವ್ಯ ನಿರ್ವಹಿಸಿಲು ಪ್ರೋತ್ಸಾಹಿಸಿ ಸಹಕಾರ ನೀಡಿದ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳುತ್ತಾರೆ…

admin
the authoradmin

Leave a Reply