LatestMysore

ಮಾಜಿ ಸಂಸದ ಪ್ರತಾಪ್ ಸಿಂಹರನ್ನು ವಿನಾಕಾರಣ ತೇಜೋವಧೆ  ಮಾಡಿದರೆ ಸಹಿಸಲ್ಲ

ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಹಳ್ಳದ ಕೊಪ್ಪಲು ನಾಗಣ್ಣ ಎಚ್ಚರಿಕೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ವಿನಾಕಾರಣ ತೇಜೋವಧೆ  ಮಾಡುವುದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಹಾಲಿ ನಿರ್ದೇಶಕ ಹಳ್ಳದ ಕೊಪ್ಪಲು ನಾಗಣ್ಣ ಎಚ್ಚರಿಸಿದರು.

ಹುಣಸೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಸೋಮವಾರ ಸುದ್ದಿಗೋಷ್ಠಿಯಲಿ ಮಾತನಾಡಿ ಪ್ರತಾಪ್ ಸಿಂಹ   ಯಾವುದೇ ಸಮಾಜವನ್ನು ಗುರಿಯಾಗಿಟ್ಟುಕೊಂಡು ಮಾತನಾಡಿಲ್ಲ ಅಂಬೇಡ್ಕರ್ ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಹೇಳಿದ್ದಾರೆ ಅದೇ ರೀತಿ ಹೃದಯ ಸ್ಫರ್ಶಿಯಾಗಿರುವಂತಹ  ಪ್ರತಾಪ್ ಸಿಂಹ, ಯಾವುದೇ ವ್ಯಕ್ತಿ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ.

ಅಂಬೇಡ್ಕರ್ ಅವರು ಕೇವಲ ಎಸ್ ಟಿ ಎಸ್ ಸಿ ಗೆ ಮೀಸಲಾತಿ ನೀಡಲಿಲ್ಲ ಸರ್ವ ಜನಾಂಗದವರಿಗೂ ಮೀಸಲಾತಿ ನೀಡಿ ಸಮಾನ ಬದುಕನ್ನು ನೀಡಿದ ಮಹಾನ್ ವ್ಯಕ್ತಿ  ಪ್ರತಾಪ್ ಸಿಂಹರವರು ರಾಷ್ಟ್ರಮಟ್ಟದಲ್ಲಿ ತಳವಾರ ಪರಿಹಾರ ಹೀಗೆ ಇದ್ದ ಜಾತಿಯನ್ನು ಎಲ್ಲಾ ಎಸ್‌ಟಿ ವರ್ಗಕ್ಕೆ ಸೇರಿಸಿ ಆ ಸಮಾಜಕ್ಕೆ ದೊಡ್ಡ ಕೊಡುಗೆ ಇದೆ  ಯಾವುದೇ ರಾಷ್ಟ್ರ ನಾಯಕರು ಒಂದೇ ಜಾತಿಗೆ ಸೀಮಿತರಾದವರಲ್ಲ ಅವರ ಮೇಲೆ ಜಾತಿ ನಿಂದನೆ ಮೋಕದ್ದಮೆಯನ್ನು ಹಿಂಪಡೆಯಬೇಕು.

10 ವರ್ಷಗಳ ಕಾಲ ಸಂಸದರಾಗಿ ಯಾವ ಜಾತಿ ನೋಡದೆ ಎಲ್ಲಾ ವರ್ಗದ ಅಭಿವೃದ್ಧಿಗೆ ಶ್ರಮಿಸಿದವರು ಟಿ ನರಸೀಪುರದ ಪೊಲೀಸ್ ಅಧಿಕಾರಿ ಧನಂಜಯ ರವರು ಪ್ರಚೋದನೆ ಮಾಡಿದಕ್ಕೆ ಇಷ್ಟೆಲ್ಲ ಆಗಿದೆ ಅವರ ಮೇಲೆ ಎಫ್ ಐ ಆರ್ ಹಾಕದೆ ಕೇವಲ ಅದನ್ನು ಪ್ರಶ್ನಿಸಿದಕ್ಕೆ ಇವರ ಮೇಲೆ ಜಾತಿ ನಿಂದನೆ ದಾಖಲಿಸಿರುವುದು ಖಂಡನೀಯ.  ಜೊತೆಗೆ ಮಾಜಿ ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮನೆಯ ಮೇಲೆ ದಾಳಿ ಮಾಡುವಂತವರ ಮೇಲೆ ಸುಮೊಟೊ  ಕೇಸ್ ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಬಿಳಿಕೆರೆ ಪ್ರಸನ್ನ ಮಾತನಾಡಿ ಪ್ರದೀಪ್ ಈಶ್ವರ ರವರು ಪ್ರತಾಪ್ ಸಿಂಹರವರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದರೆ ಪ್ರತಾಪ್ ಸಿಂಹರ ಅವಧಿಯಲ್ಲಿ ಅಭಿವೃದ್ಧಿ ಹಾಗೂ ನಿಮ್ಮ ಅವಧಿಯ ಅಭಿವೃದ್ಧಿಯನ್ನು ಕೆಲಸಗಳನ್ನು ಚರ್ಚಿಸೋಣ ಬನ್ನಿ ಕೇವಲ ಪ್ರಚಾರಕ್ಕೋಸ್ಕರ ಮಾತನಾಡುವುದು ಸೂಕ್ತವಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಸಮಾಜದ ಮುಖಂಡರಾದ ಹಿರೀಕ್ಯಾತನಹಳ್ಳಿ ಸತೀಶ್, ನಟೇಶ್, ನಿಲುವಾಗಿಲು ಶ್ರೀನಿವಾಸ್, ಸುರೇಗೌಡ  ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ