ArticlesLatest

‘ನಾನು’ ಎರಡಕ್ಷರದ ಪದವಲ್ಲ… ಒಂದೊಳ್ಳೆಯ ಬಾಳಹಾದಿಗೆ ಬೆಳಕು ತೋರುವ ಹಣತೆ…!

ನಾನು ಎಂಬುದು ಕೇವಲ ಎರಡು ಅಕ್ಷರಗಳಿಂದ ಕೂಡಿದ ಒಂದು ಪದವಲ್ಲ. ಅದು ಮಾನವನ ಅಸ್ತಿತ್ವದ ಆರಂಭ, ಆತ್ಮಜ್ಞಾನದ ಮೊದಲನೆಯ ಹೆಜ್ಜೆ ಅನುಭವಗಳ ಕೇಂದ್ರ, ಚಿಂತನೆಯ ಮೂಲ ಮತ್ತು ಜೀವನದ ಸಂಪೂರ್ಣ ಪಯಣದ ಪ್ರತೀಕವಾಗಿದೆ.

ಮನುಷ್ಯ  ಜನಿಸಿದ ಕ್ಷಣದಿಂದಲೇ ಅವನಿಗೆ ತನ್ನ ಬಗ್ಗೆ ಅರಿವು ಇರುವುದಿಲ್ಲ ಹೆತ್ತವರ ಆಸರೆಯಲ್ಲಿ ಬೆಳೆಯುವ ಅವನು ಮೊದಲು ಲೋಕವನ್ನು ನೋಡುತ್ತಾ ಕಲಿಯುತ್ತಾನೆ.. ನಂತರ ಸಂಬಂಧಗಳನ್ನು ಅರಿಯುತ್ತಾನೆ. ಕೊನೆಯಲ್ಲಿ ತನ್ನನ್ನು ತಾನು ಅರಿತುಕೊಳ್ಳುವ ಪಯಣವನ್ನು ಆರಂಭಿಸುತ್ತಾನೆ ಅರಿವಿನಲ್ಲಿ ಮೊದಲ ಶಬ್ದವೇ “ನಾನು” ಈ ಒಂದು ಪದದೊಳಗೆ ವ್ಯಕ್ತಿಯ ದೇಹ ಮನಸ್ಸು, ಬುದ್ಧಿ, ಭಾವನೆ, ನೆನಪು, ಕನಸು, ನೋವು, ಸಂತೋಷ, ಅಹಂಕಾರ, ವಿನಯ, ಭಯ, ಧೈರ್ಯ ಮತ್ತು ಆತ್ಮ ಸಾಕ್ಷಾತ್ಕಾರದ ಸಂಪೂರ್ಣ ಕಥೆ ಅಡಗಿದೆ.

ನಾನು ಎಂಬುದು ಸ್ವಾರ್ಥದ ಸಂಕೇತ.. ಮನುಷ್ಯನು ಇಂದಿನ ಕಲಿಯುಗದ 21ನೆಯ ಶತಮಾನದಲ್ಲಿ ನಾನು, ನನ್ನದು, ನಂದು, ನನ್ನಿಂದ ಎಂದು ಸ್ವಾರ್ಥದ ಅಹಂಕಾರದ ನಾನತ್ವಕ್ಕೆ ಒಳಗಾಗಿ ಒಂದು ಮಂಜು ಮುಸುಕಿದ ಜೀವನವನ್ನು ಮಾಡುತ್ತಿದ್ದಾನೆ. ಆದರೆ ಇದು ಕಾಲ್ಪನಿಕವಾಗಿರುವುದು ಅವನಿಗೆ ಅರಿವಿಲ್ಲ. ಎಲ್ಲರಿಗಿಂತಲೂ ದೇವರು ಸ್ವಾರ್ಥಿಯಾಗಿದ್ದು ಅವನು ಇಷ್ಟ ಬಂದ ಹಾಗೆ ಪ್ರತಿಯೊಬ್ಬರಿಗೂ ‘ನಾನು’ ಎಂಬ ಅಹಂಕಾರವನ್ನು ಮನುಷ್ಯನಲ್ಲಿ ಸೃಷ್ಟಿಸಿದ್ದಾನೆ.

ಮನುಷ್ಯನ ದೇಹ ಹಾಗು ಬುದ್ಧಿಯಲ್ಲಿ ನಾನು ಎಂಬ ಅಹಂಕಾರದ ಸೃಷ್ಟಿಗೆ  ದೇವರು ಕಾರಣವಾಗಿದ್ದಾನೆ. ಆದರೆ ದೇವರು ಕೆಲ  ಸಮಯದವರೆಗೂ ನೋಡಿ ಮುಂದೆ ನಾನು ಎಂಬ ಮನುಷ್ಯನ ದೇಹವನ್ನು ಮಣ್ಣಲ್ಲಿ ಮಣ್ಣಾಗಿಸುತ್ತಾನೆ. ಇದು ಮನುಷ್ಯನಿಗೆ ಅರಿವಿಲ್ಲದೆ ನಾನು ಎಂಬ ಅಹಂಕಾರಕ್ಕೆ ಹಾಗೂ ಹಣದ ಮೋಹಕ್ಕೆ, ಅಧಿಕಾರಕ್ಕೆ, ಆಸೆಗೆ ಒಳಗಾಗಿ ನಾನು ಎಂದು ಮೆರೆಯುತ್ತಾನೆ.

ಜೀವನದ ಪ್ರತಿಯೊಂದು ಹಂತದಲ್ಲೂ ನಾನು ಬದಲಾಗುತ್ತಾ ಬೆಳೆಯುತ್ತೇವೆ. ಬಾಲ್ಯದಲ್ಲಿ ಮುಗ್ಧತೆ ಯೌವನದಲ್ಲಿ ಕನಸು ಪ್ರೌಢಾವಸ್ಥೆಯಲ್ಲಿ ಜವಾಬ್ದಾರಿ ಮತ್ತು ಕೊನೆಯಲ್ಲಿ ಆತ್ಮ ಚಿಂತನೆಯಾಗಿ ರೂಪುಗೊಳ್ಳುತ್ತದೆ. ನಿಜವಾದ ‘ನಾನು’ ವನ್ನು ಅರಿತಾಗ ಮನುಷ್ಯನು ತನ್ನನ್ನು ಮಾತ್ರವಲ್ಲ ಸಮಾಜ ಮತ್ತು ಜೀವನದ ಅರ್ಥವನ್ನು ಅರಿಯಲು ಆರಂಭಿಸುತ್ತಾನೆ.

ನಾನು ಎಂಬುದು ಕೇವಲ ಸರ್ವನಾಮವಲ್ಲ ಅದು ತನ್ನನ್ನು ತಾನು ಅರಿಯುವ, ತಿದ್ದಿಕೊಳ್ಳುವ ಮತ್ತು ತನ್ನ ಜೀವನಕ್ಕೆ ಅರ್ಥ ನೀಡುವ ನಿರಂತರ ಪಯಣ… ಇದು ದೇವರ ಆಜ್ಞೆ… ಅವನ ಅಣತಿಯಂತೆ ನಾನತ್ವ ಬದಿಗಿಟ್ಟು ಮುನ್ನಡೆದರೆ ಜೀವನ ಪಯಣ ಸಾರ್ಥಕವಾಗುತ್ತದೆ…

ವಿಭಿನ್ನ,  ವಿಶಿಷ್ಟ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

admin
the authoradmin

Leave a Reply