LatestMysore

ಖಾಸಗಿ ಶಾಲೆಗಳಿಗೆ ಮೊರೆ ಹೋಗುತ್ತಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ: ವರ್ಷ ಹರೀಶಗೌಡ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಇಂದಿನ ಕಾಲದಲ್ಲಿ ಅವಿದ್ಯಾವಂತರಿಗಿಂತ, ವಿದ್ಯಾವಂತರು ತಮ್ಮ ಶ್ರೀಮಂತಿಕೆ ಹಾಗೂ ದೊಡ್ಡಸ್ಥಿಕೆಯನ್ನು ಇನ್ನೊಬ್ಬರಿಗೆ ತೋರಿಸಿಕೊಳ್ಳಲು ಹಾಗೂ ಖಾಸಗಿ ಶಾಲೆಗಳ ಅಂದ-ಚಂದಕ್ಕೆ ಮರುಳಾಗಿರುವುದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ವರ್ಷ ಹರೀಶಗೌಡ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಅಸರೆ ಸೇವಾ ಟ್ರಸ್ಟ್‌ ವತಿಯಿಂದ ಉಚಿತ ನೋಟ್‌ ಬುಕ್‌ ವಿತರಿಸಿ ಮಾತನಾಡಿದವರು.  ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಹಾಲು ಹಾಗೂ ಬಸ್ ಪಾಸ್ ಮುಂತಾದ ಅನೇಕ ಮೂಲಭೂತ ಮತ್ತು ಕಲ್ಯಾಣ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.

ಇದರ ಜೊತೆಗೆ ಅಸರೆ ಟ್ರಸ್ಟ್‌ ನಂತ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಿ ಶಾಲೆಗಳ ಉಳಿಯುವಿಕೆಗಾಗಿ ಹಾಗೂ ಗ್ರಾಮೀಣ ಭಾಗದ ಬಡಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕೆಂದು ಮುಂದೆ ಬಂದು ಶ್ರಮಿಸುತ್ತಿದ್ದಾರೆ. ಈಗಾಲಾದರು ಪೋಷಕರು ಖಾಸಗಿ ಶಾಲೆಗಳ ವ್ಯಾಮೊಹ ಬಿಟ್ಟು, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ ಶಾಲೆಗಳನ್ನು ಉಳಿಸಿ- ಬೆಳೆಸಿ ಸರ್ಕಾರಿ ಶಾಲೆಗಳಿಗೆ ಜೀವ ನೀಡಬೇಕೆಂದು ಕಿವಿ ಮಾತು ಹೇಳಿದರು.

ಅಸರೆ ಸೇವಾ ಟ್ರಸ್ಟ್‌ ಅಧ್ಯಕ್ಷ ಎ. ಜೋಸೆಪ್‌ ಮರಿ ಮಾತನಾಡಿ ನಮ್ಮ ಸಂಸ್ಥೆಯು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಉಳಿಯುವಿಕೆಗಾಗಿ ಮತ್ತು ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು. ಸರ್ಕಾರ ನೀಡುವ ಸೌಲಭ್ಯ ಜೊತೆಗೆ ನಾವು ಕೂಡ ಕೈಜೊಡಿಸಿ ಅದರಲ್ಲೂ ಹನಗೋಡು ಹೋಬಳಿಯಲ್ಲಿ ಹೆಚ್ಚಾಗಿ ಆದಿವಾಸಿ ಹಾಡಿಗಳು ಇದ್ದು, ಆದಿವಾಸಿಗಳು ಕೂಲಿಯನ್ನು ಅರಸಿ ವಲಸೆ ಹೋಗಿ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುವುದನ್ನು ತಡೆಗಟ್ಟಿ ಉಳ್ಳವರ ಮಕ್ಕಳಂತೆ ಈ ಮಕ್ಕಳಿಗೂ ಕೂಡ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಕೆಲ ಆದಿವಾಸಿ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳು ದೊರಕದೆ ಮಕ್ಕಳು ಶಾಲೆಯಿಂದ ಹೊರ ಉಳಿಯುತ್ತಿದ್ದಾರೆ. ಇದನ್ನು ಮನಗಂಡು ಈ ಮಕ್ಕಳು ಕೂಡ ಉಳ್ಳವರ ಮಕ್ಕಳಂತೆ ಉತ್ತಮ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯವಾಹಿನಿ ಬಂದು ತಮ್ಮ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ದಾರಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.

ಉದ್ಯಮಿ ಹರವೆ ಶ್ರೀಧರ್‌ ಮಾತನಾಡಿ ಅಸರೆ ಸೇವಾ ಟ್ರಸ್ಟ್‌ ಜೊತೆ ನಾವು ಕೂಡ ಮುಂದಿನ ದಿನಗಳಲ್ಲಿ ಕೈಜೊಡಿಸಿ ಹನಗೋಡು ಭಾಗದ ಸರ್ಕಾರಿ  ಶಾಲೆಗಳನ್ನು ದತ್ತು ಪಡೆದುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಮಕ್ಕಳು ಶಾಲೆಯಿಂದ ಹೊರ ಉಳಿಯದಂತೆ ಮಾಡಿ, ಗುಣಮಟ್ಟ ಶಿಕ್ಷಣವನ್ನು ಪಡೆಯುವುದು ಮಕ್ಕಳ ಹಕ್ಕಾಗಿದ್ದು ಇದನ್ನು  ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆಂದರು.

ಈ ಸಂದರ್ಭದಲ್ಲಿ ಕರ್ಣಕುಪ್ಪೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪಾಪಣ್ಣ, ಕಣಗಾಲು,ಕರ್ಣಕುಪ್ಪೆ ಗ್ರಾ.ಪಂ.ಕಾರ್ಯದರ್ಶಿ ಶಿವರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುಟ್ಟರಾಜೇಗೌಡ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀನಿವಾಸ್‌, ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ, ಉಪಾಧ್ಯಕ್ಷರಾದ ವೀಣಾ ರಾಜಕಾಯಕ,  ಅಸರೆ ಸೇವಾ ಟ್ರಸ್ಟ್‌ ಸಂಘಟನಾ ಕಾರ್ಯದರ್ಶಿ ಕೆ.ಪಿ.ರಾಘವೇಂದ್ರ, ಮುಖಂಡರಾದ ಮಹೇಶಕುಮಾರ್‌, ಆಶೋಕ್‌, ವೆಂಕಟೇಶ,  ಹರೀನಹಳ್ಳಿ ಆನಂದ, ಸಹಶಿಕ್ಷಕರಾದ ಹರೀಶ, ಧರ್ಮಾರಾಜ್‌, ಸುಮಾ, ಮಮತ, ಭವಾನಿ, ಶೋಭ.ಹೆಚ್.ಆರ್. ಶಾಲಾ ಮಕ್ಕಳು ಹಾಗೂ ಪೋಷಕರು ಇದ್ದರು.

admin
the authoradmin

Leave a Reply