LatestMysore

ಹುಣಸೂರಲ್ಲಿ  ಕ್ರಿಕೆಟ್ ಆಡಿ ಸಂಭ್ರಮಿಸಿದ ಪತ್ರಕರ್ತರು, ವಕೀಲರು, ಶಿಕ್ಷಕರು, ಪೊಲೀಸರು

ಹುಣಸೂರು(ನಂಜಾಪುರ ಮನುಕುಮಾರ್): ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರ ಸಂಘದಿಂದ ಶಿಕ್ಷಕರು, ಪೊಲೀಸರು, ವಕೀಲರು ಒಳಗೊಂಡಂತೆ  ಹಮ್ಮಿಕೊಂಡಿದ್ದ  ಕ್ರಿಕೆಟ್  ಕ್ರೀಡಾಕೂಟವನ್ನು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಪಿ.ಅಮರನಾಥ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಿರಂತರ ಒತ್ತಡದ ಬದುಕಿನಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಕ್ರೀಡೆ ಮಾನಸಿಕವಾಗಿ ಶಕ್ತಿ, ಉಲ್ಲಾಸವನ್ನು ನೀಡುತ್ತದೆ. ನಿಮ್ಮ ಈ ಒಂದು ದಿನದ ಕ್ರೀಡೆ ಒಂದು ವರ್ಷವಿಡಿ ಜೀವನಕ್ಕೆ ಸ್ಪೂರ್ತಿ ನೀಡಲಿ. ಇಂತಹ ಕಾರ್ಯಕ್ರಮ ಪ್ರತಿ ವರ್ಷಕ್ಕೆ ನಡೆಯುವ ಬದಲಿಗೆ ಆಗಾಗ್ಗೆ ನಡೆಯಬೇಕು.

ಪ್ರತಿ ವರ್ಷ ಹೆಚ್.ಪಿ.ಎಲ್.ಕಪ್ ಅಂತ ಮಂಜಣ್ಣನವರ ಹೆಸರಿನಲ್ಲಿ ನಡೆಸುತ್ತ ಬರುತ್ತಿದ್ದವು. ಆಗ  ಕೂಡ ಪೊಲೀಸ್, ಕಂದಾಯ, ಕೆ.ಇ.ಬಿ, ಸೇರಿದಂತೆ ಇನ್ನು ಕೆಲವು ಇಲಾಖೆಗಳ ತಂಡಗಳನ್ನು ಸೇರಿಸಿ ಪ್ರೆಂಡ್ಲಿ ಪಂದ್ಯಗಳನ್ನು ನಡೆಸುವಾಗ ಪತ್ರಕರ್ತರಲ್ಲೂ ಕ್ರಿಕೆಟ್ ಟಿಮ್ ಇರುವುದು ಗಮನಕ್ಕೆ ಬಂದಿರಲಿಲ್ಲ, ಮುಂಬರುವ ಹೆಚ್.ಪಿ.ಎಲ್ ಕಫ್ ನಲ್ಲಿ ಪತ್ರಕರ್ತರ ತಂಡಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿ, ಪತ್ರಕರ್ತರಿಗೆ ಮಾಜಿ ಶಾಸಕರ ಹೆಸರಿನಲ್ಲಿ ಟೋಫಿಗಳನ್ನು ವಿತರಿಸಿದರು.

ಡಿ.ವೈ.ಎಸ್.ಪಿ.ರವಿರವರು ಮಾತನಾಡಿ, ಪೊಲೀಸ್, ಪತ್ರಕರ್ತರು, ಶಿಕ್ಷಕರು ವಕೀಲರನ್ನು ಒಳಗೊಂಡಿರುವ ಕ್ರೀಡೆಯಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಪ್ರತಿಯೊಬ್ಬರೂ ಜೀವನಕೊಸ್ಕರ ಬೇರೆ, ಬೇರೆ ಉದ್ಯೋಗವನ್ನು ಮಾಡುತ್ತಿರುತ್ತೇವೆ. ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಬೇರೆ, ಈ ರೀತಿಯಲ್ಲಿ ಎಲ್ಲರೂ ಒಂದೆಡೆ ಸೇರಿ ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸಿವುದು ಒಂದು ಉತ್ತಮ ಬೆಳವಣಿಗೆ ಎಂದರು.

ತಹಸಿಲ್ದಾರ್ ಮಂಜುನಾಥ್, ನಗರಸಭೆ ಆಯುಕ್ತೆ ಮಾನಸ ಮಾತನಾಡಿ  ಎಲ್ಲಾ ಇಲಾಖೆಯ ಸೇರಿರುವ ಕ್ರೀಡಾಕೂಟ ನಿಜಕ್ಕೂ ಶ್ಲಾಘನೀಯ, ನಾವೆಲ್ಲರೂ ಒಂದೇ ಎಂದು ತೋರಿಸಲು  ಹೊಟಿರುವ ಪತ್ರಕರ್ತರ ಹೆಜ್ಜೆ ಹುಣಸೂರಿನಲ್ಲಿ ಎಲ್ಲರಲ್ಲೂ ಅವಿನಾಭಾವ ಸಂಬಂಧವನ್ನು ಹುಟ್ಟುಹಾಕುತ್ತಿದೆ. ಅಧಿಕಾರಿಗಳು, ರಾಜಕಾರಣಿಗಳು, ಸೇರಿದಂತೆ ನಡೆಸುವ ಇಂತಹ ಚಟುವಟಿಕೆಗಳು ಯಾವುದೇ ಊರುಗಳಲ್ಲಿ ಸಿಗುವುದಿಲ್ಲ, ಇಂತಹ ಕ್ರೀಡೆಗಳು   ಪ್ರತಿವರ್ಷ ನಡೆಯಲಿ ಎಂದು ಆಶಿಸಿದರು.

ಪತ್ರಕರ್ತರ ಸಂಘದ ಅದ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಲು ಬಂದಿರುವ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಹೆಚ್‌.ಪಿ. ಅಮರನಾಥ್ ಪತ್ರಕರ್ತರಿಗೆ ಕ್ಯಾಪ್ ಹಾಗೂ ವಿ ಹೆಚ್ ಫೌಂಡೇಶನ್ ಅಧ್ಯಕ್ಷರಾದ ವರ್ಷ ಹರೀಶ್ ಗೌಡ  ಟೀಶರ್ಟ್ ನ್ನು ಪತ್ರಕರ್ತರಿಗೆ ಪೊಲೀಸ್, ವಕೀಲರಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ  ಸರ್ಕಲ್  ಇನ್ಸ್ ಪೆಕ್ಟರ್ ಸಂತೋಷ್ ಕಾಶಪ್ಪ,  ಎ ತಾಜುದ್ದೀನ್, ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ,  ಶಿಕ್ಷಣಾಧಿಕಾರಿ ಕಾಳನಾಯಕ, ಗ್ಯಾರಂಟಿ ಅನುಷ್ಠಾನ  ಯೋಜನೆ ತಾಲೂಕು ಅಧ್ಯಕ್ಷ ರಾಘು, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಕುಮಾರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಉಪಾಧ್ಯಕ್ಷ ವೆಂಕಟಪ್ಪ, ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹನಗೋಡು ನಟರಾಜ್,  ಹಿರಿಯ ಪತ್ರಕರ್ತರಾದ ಎಚ್, ಎಸ್ ಸಚಿತ್‌,   ಉಪಾಧ್ಯಕ್ಷರಾದ ಚೆಲುವರಾಜ್ ಕಾರ್ಯದರ್ಶಿ ನೆರಳಕುಪ್ಪೆ ಮಹದೇವ್,  ನಗರ ಕಾರ್ಯದರ್ಶಿ ಶಂಕರ್,  ಖಜಾಂಚಿ ಯೋಗೇಶ್,  ಪತ್ರಕರ್ತರಾದ ಸಂಪತ್ ಕುಮಾರ್, ಮನುಕುಮಾರ್, ಕೆ.ಕೃಷ್ಣ, ಸ್ವಾಮಿಗೌಡ,  ಹೆಚ್.ಕೆ. ಕೃಷ್ಣ,   ಯೋಗಾನಂದ, ಪ್ರತಾಪ್, ಪ್ರದೀಪ್, ದೀಪು,  ಗುರುಸ್ವಾಮಿ,  ಗಜೇಂದ್ರ, ರಾಘು, ಶ್ರೀಧರ್,  ಹಾಗೂ ಇನ್ನಿತರು ಹಾಜರಿದ್ದರು

admin
the authoradmin

ನಿಮ್ಮದೊಂದು ಉತ್ತರ