Latest

ಹುಣಸೂರು ಪತ್ರಕರ್ತರು ರಾಜ್ಯಕ್ಕೆ ಮಾದರಿ: ಮಾಜಿ ಶಾಸಕ ಎಚ್. ಪಿ. ಮಂಜುನಾಥ್ ಪ್ರಶಂಸೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮಾಧ್ಯಮ ಕ್ಷೇತ್ರದಲ್ಲಿ ಪತ್ರಿಕಾ ಮಾಧ್ಯಮ ತನ್ನ ಪಾವಿತ್ರ್ಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ ಇದಕ್ಕೆ ಹುಣಸೂರು ತಾಲೂಕು ಪತ್ರಕರ್ತರ ಸಂಘದ  ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಹುಣಸೂರಿನ ಮಾಜಿ ಶಾಸಕ ಎಚ್. ಪಿ. ಮಂಜುನಾಥ್ ಪ್ರಶಂಸಿಸಿದರು.

ಹುಣಸೂರು  ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ,  ನಮ್ಮ ತಾಲೂಕಿನ ಪತ್ರಕರ್ತರು ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಪೈಪೋಟಿ ಮಾಡಿ    ತಾಲೂಕಿನ ಅಭಿವೃದ್ಧಿಗೂ ಕೂಡ ಇವರ ಸೇವೆ ಇದೆ   ಇದರಿಂದತಾಲೂಕಿನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು.

ಇತ್ತಿಚಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮ ಸಾಮಾಜಿಕ ಜಾಲತಾಣಗಳೊಂದಿಗೆ ಪೈಪೋಟಿ ನೀಡಲು ಕಷ್ಟ ಸಾಧ್ಯವಾಗಿದೆ.  ಆದರೆ ಇಂದಿಗೂ ಪ್ರಸ್ತುತ ಸತ್ಯವನ್ನು ಬಿತ್ತರಿಸಿ ಸಮಾಜವನ್ನು ಎಚ್ಚರಿಸುತ್ತಿರುವುದು  ಪತ್ರಿಕಾ ಮಾಧ್ಯಮ ಎಂದು ಹೇಳಿದರು.

ವಿ ಎಚ್ ಫೌಂಡೇಶನ್ ಅಧ್ಯಕ್ಷೆ ವರ್ಷ ಹರೀಶ್ ಗೌಡ ಮಾತನಾಡಿ ಸಮಾಜದ ಅಂಕು ಡೊಂಕುಗಳನ್ನು  ತಿದ್ದುವ ಕೆಲಸವನ್ನು ಮಾಧ್ಯಮ ಮಾಡುತ್ತಿದೆ.  ಎಲ್ಲಾ ಕ್ಷೇತ್ರಗಳನ್ನು ತಿದ್ದುವ ಶಕ್ತಿ ಇರುವುದು ಮಾಧ್ಯಮಕ್ಕೆ ಮಾತ್ರ.  ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ  ಆಸೆ, ಆಮಿಷಗಳಿಗೆ ಒಳಗಾಗದೆ ನಿಸ್ವಾರ್ಥವಾಗಿ ಪಕ್ಷಾತೀತವಾಗಿ ಸೇವೆಯನ್ನ ಸಲ್ಲಿಸುವುದು ಪತ್ರಿಕಾ  ಧರ್ಮ ಹಾಗೂ ಜವಾಬ್ದಾರಿಯಾಗಿದೆ.

ಎಲ್ಲಿ ದೌರ್ಜನ್ಯ ಅನ್ಯಾಯವಾಗುತ್ತಿದೆಯೋ ಅದನ್ನು ಗಮನಿಸಿ  ಸರಿಪಡಿಸುವಂತಹ ಪತ್ರಕರ್ತರು ಕೂಡ ಆರ್ಥಿಕವಾಗಿ ಸಬಲೀಕರಣವಾಗಬೇಕು ಪತ್ರಕರ್ತರಿಗೆ ಅನುಕೂಲ ಇರುವುದು ಕಡಿಮೆ ಅದನ್ನು ಗಮನಿಸಿದ ಶಾಸಕರಾದ ಜಿ ಡಿ ಹರೀಶ್ ಗೌಡ  ಪತ್ರಕರ್ತರಿಗೆ ವಿಮೆ ಮಾಡಿಸುವುದರ ಮೂಲಕ ಭದ್ರತೆ ಒದಗಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ   16  ವರ್ಷಗಳಿಂದ ಪತ್ರಕರ್ತರ ಜೊತೆ ಅವಿನಾಭಾವ ಸಂಬಂಧವಿದೆ.  ಇಂದಿನ ಪತ್ರಕರ್ತರಿಗೆ  ಸುಳ್ಳನ್ನು ಸತ್ಯ ಮಾಡುವ ಸತ್ಯವನ್ನು ಸುಳ್ಳು ಮಾಡುವ ಜಾಲತಾಣದ ಹಿಂದೆ ಹೋಗದೆ  ತಮ್ಮ ನೈಜ ಬರವಣಿಗೆಯ ಮೂಲಕ ಸತ್ಯ ಸತ್ಯತೆಯನ್ನ ಬಿತ್ತರಿಸುವ ದಿನಪತ್ರಿಕೆಯನ್ನು ನಾನು ನಂಬಿದ್ದೇನೆ.

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮಹಿಳಾ ರಾಜ್ಯ  ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಹುಣಸೂರಿನ ಪತ್ರಕರ್ತರ ಮಿತ್ರರು   ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.

ತಾಲೂಕು ಪತ್ರಕರ್ತರ ಸಂಘದ  ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಮೂರು ದಶಕಗಳಿಂದ ತಾಲೂಕು ಅಭಿವೃದ್ಧಿ, ಬರಹದ ಮೂಲಕ ಸಮಾಜ ತಿದ್ದುವ ನಿಟ್ಟಿನಲ್ಲಿ   ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ ನಮಗೆ ಒಂದು  ಭವನ ಇಲ್ಲದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದರು.

ಉದ್ಯಮಿಗಳಾದ ರಾಜು ಶಿವರಾಜೇಗೌಡ, ತರಿ ಕಾಲ್ ರಾಜು,  ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ನಾರಾಯಣ್, ಮಾತನಾಡಿದರು.  ನಂತರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ, ಪತ್ರಕರ್ತರ ಸಂಘದಿಂದ ವಿದ್ಯಾರ್ಥಿಗಳಿಗೆ  ನಡೆಸಿದ ಚರ್ಚಾ ಸ್ಪರ್ಧೆಯಲ್ಲಿವಿಜೇತರಾದವರಿಗೆ,  ನಾಲ್ಕು ಜನ ಸಮಾಜ ಸೇವಕರಿಗೆ ಹಾಗೂ ಹಿರಿಯ ಪತ್ರಕರ್ತರಾದ ನಂಜಾಪುರ ಮನು ಕುಮಾರ್, ಜಿ. ಜಗದೀಶ್ ರವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಉದ್ಯಮಿ ಕಾರ್ತಿಕ್ ವೆಂಕಟಪ್ಪ, ಎಲ್ಲಾ  ಪತ್ರಕರ್ತರಿಗೆ ಜರ್ಕಿನ್ ಕೊಡುಗೆಯಾಗಿ ನೀಡಿದರು.   ಶ್ರೀನಿವಾಸ್  ಪ್ರಶಸ್ತಿಯನ್ನು ಪಿರಿಯಾಪಟ್ಟಣ ತಾಲೂಕಿನ  ಬೆಟ್ಟದಪುರ ವರದಿಗಾರ ಪ್ರಸನ್ನ ರವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಸತೀಶ್ ಪಾಪಣ್ಣ, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ವೆಂಕಟಪ್ಪ, ಗ್ರಾಮಾಂತರ ಕಾರ್ಯದರ್ಶಿ ದಾ.ರಾ. ಮಹೇಶ್, ಕಾರ್ಯಕಾರಿ ಸಮಿತಿ ಸದಸ್ಯ ಹನಗೋಡು ನಟರಾಜ್, ತಾಲೂಕು ಉಪಾಧ್ಯಕ್ಷ ಚೆಲುವರಾಜು, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಹಿರಿಯ ಪತ್ರಕರ್ತರಾದ ಸಚ್ಚಿತ್, ಶಿವಕುಮಾರ್, ಕೆ ಕೃಷ್ಣ, ಸಂಪತ್ ಕುಮಾರ್, ಹಿರೀಕ್ಯಾತನಹಳ್ಳಿ ಸ್ವಾಮಿಗೌಡ, ಪ್ರತಾಪ್, ಗಜೇಂದ್ರ,ಯೋಗಾನಂದ, ಯೋಗೇಶ್, ದಯಾಕರ್, ದೀಪು, ಸೇರಿದಂತೆ ಹಲವಾರು ಪತ್ರಕರ್ತರು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ