CinemaLatest

ಶ್ರೀ ವರದರಾಯಸ್ವಾಮಿ  ಭಕ್ತಿಗೀತೆ ವಿಡಿಯೋ ಸಾಂಗ್  ಬಿಡುಗಡೆ.. ನೀವೊಮ್ಮೆ ಕೇಳಿ…

ಮಂಡ್ಯ: ಶ್ರೀ ಕ್ಷೇತ್ರ ಡಂಡಿಗನಹಳ್ಳಿ ಶ್ರೀ ವರದರಾಯಸ್ವಾಮಿಯ ಭಕ್ತಿ ಗೀತೆಯ ಧ್ವನಿಸುರಳಿ ಭಕ್ತಿ ಗಾನ ಸುಧೆ  ಶ್ರೀ ವರದರಾಯಸ್ವಾಮಿ ಅಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಧ್ವನಿಸುರಳಿ ಇತ್ತೀಚೆಗೆ  ಬಿಡುಗಡೆ  ಆಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಡಂಡಿಗನಹಳ್ಳಿ ಊರಲ್ಲಿ. ಶ್ರೀ ಕ್ಷೇತ್ರ ಡಂಡಿಗನಹಳ್ಳಿ ಶ್ರೀ ವರದರಾಯಸ್ವಾಮಿ ದೇವಸ್ಥಾನವಿದೆ. ಶ್ರೀ ವರದರಾಯಸ್ವಾಮಿ ಮತ್ತು  ಶ್ರೀ ಮಾಯಮ್ಮ  ಶ್ರೀ ದೈತಮ್ಮ ದೇವತೆಗಳ  ಜಾತ್ರೆ ವಿಜ್ರಂಭಣೆಯಿಂದ ಚೈತ್ರ ಮಾಸದಲ್ಲಿ  ನಡೆಯುತ್ತದೆ. ಜಾತ್ರೆ  ರಥೋತ್ಸವಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಬಂದಂತಹ ಎಲ್ಲಾ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥಯೂ ಇರುತ್ತದೆ.

ಚಿಕ್ಕ ತಿರುಪತಿ ಎಂದೇ  ಪ್ರಸಿದ್ಧವಾಗಿರುವ ಶ್ರೀ ಕ್ಷೇತ್ರ. ಇಲ್ಲಿ ದಾಸರ ಹಬ್ಬ ಅಥವಾ ನಾಗನಕೆರೆ  ಗಿಡದ ಜಾತ್ರೆ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಶ್ರೀ ಕ್ಷೇತ್ರ ಡಂಡಿಗನಹಳ್ಳಿ ಶ್ರೀ ವರದರಾಯಸ್ವಾಮಿಯ ಭಕ್ತಿ ಗೀತೆಯ ಧ್ವನಿಸುರಳಿ ಭಕ್ತಿ ಗಾನ ಸುಧೆ  ಶ್ರೀ ವರದರಾಯಸ್ವಾಮಿ ಅಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಧ್ವನಿಸುರಳಿ  ಬಿಡುಗಡೆ  ಆಗಿದೆ.

ಡಂಡನ್ನು ತಡೆದೂರು ಡಂಡಿಗನಹಳ್ಳಿಯ ಗಿಡದ ಜಾತ್ರೆಗೆ ಬನ್ನಿ ಬನ್ನಿ ತಿರುಪತಿ ತಿಮ್ಮಪ್ಪನ ದಾಸನು ದಾಸರಾಗಿ ಯಾತ್ರೆಯ ಮಾಡೋಣ ಬನ್ನಿ ಬನ್ನಿ.. ಭಕ್ತಿಗೀತೆಗೆ  ಸಾಹಿತ್ಯ ವಿ.ಎಂ.ಎಸ್.ಗೋಪಿ  ಬರೆದಿದ್ದಾರೆ. ಸಂಗೀತ ದಿವಾಕರ್, ಗಾಯಕರು ಗುರುಪ್ರಸಾದ್, ಪಿ.ಆರ್.ಓ, ಸಾಹಿತ್ಯ, ನಿರ್ದೇಶನ  ವಿ.ಎಂ.ಎಸ್.ಗೋಪಿ ಮಾಡಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ