LatestMysore

ಸೆ. 6, ಮಳವಳ್ಳಿಯ ಅಕ್ಷರದವ್ವ ಕವಿಗೋಷ್ಠಿಗೆ ಸರ್ವಾಧ್ಯಕ್ಷರಾಗಿ  ಹೆಚ್.ಆರ್.ಕನ್ನಿಕಾ

ಮಳವಳ್ಳಿ: ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತು ಹಾಗೂ ಯೂನಿವರ್ಸಲ್ ಸೇವಾಟ್ರಸ್ಟ್ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ‘ಅಕ್ಷರದವ್ವ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ’ ಕಾರ್ಯಕ್ರಮವು ಸೆ. 6 ಬೆಳಗ್ಗೆ 10 ಗಂಟೆಗೆ ಪಟ್ಟಣದ ಕೋಟೆ ಬೀದಿಯಲ್ಲಿರುವ ಯೂನಿವರ್ಸಲ್ ಸೇವಾಟ್ರಸ್ಟಿನ ಕಚೇರಿಯಲ್ಲಿ ನಡೆಯಲಿದೆ.

ದಿನವಿಡೀ ನಡೆಯುವ ಈ ರಾಜ್ಯಮಟ್ಟದ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಕವಯತ್ರಿ, ಸಮಾಜ ಸೇವಕಿ ಹಾಗೂ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹೆಚ್.ಆರ್. ಕನ್ನಿಕಾ ಅವರು ಆಯ್ಕೆಯಾಗಿದ್ದು, ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ರಾಜ್ಯ ಮಟ್ಟದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ ಪುರಸ್ಕೃತ ಖ್ಯಾತ ಸಾಹಿತಿ ಹಾಗೂ ಸಂಘಟಕರಾದ ಟಿ. ಸತೀಶ್ ಜವರೇಗೌಡ ಅವರನ್ನು ಜಿಲ್ಲೆಯ ಸಾಹಿತ್ಯ ಅಭಿಮಾನಿಗಳ ಪರವಾಗಿ ಅಭಿನಂದಿಸಲಾಗುವುದು.

ಯೂನಿವರ್ಸಲ್ ಸೇವಾಟ್ರಸ್ಟ ಅಧ್ಯಕ್ಷ ಟಿ.ಎಂ. ಪ್ರಕಾಶ್ ಉದ್ಘಾಟನೆ ನೆರವೇರಿಸಲಿದ್ದು, ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಚುಂಚಣ್ಣ ಬಿ. ಕಲ್ಲಾರೆಪುರ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ ಆಶಯ ನುಡಿಗಳನ್ನಾಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಣ್ಣೇದೊಡ್ಡಿ ಹರ್ಷ ಪ್ರಶಸ್ತಿ ಪ್ರದಾನ ಮಾಡುವರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್. ಚೇತನ್ ಕುಮಾರ್ ‘ಒಳಗಣ್ಣು ತೆರೆದು ನೋಡು’ ಕೃತಿ ಬಿಡುಗಡೆ ಮಾಡುವರು.  ಕವಯತ್ರಿ ಹಾಗೂ ಸಂಶೋಧಕಿ ನಾಗರತ್ನಮ್ಮ ಪಿ. ಮಳವಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ 80 ಕ್ಕೂ ಮಂದಿ ಕವಿಗಳು ಕವನ ವಾಚಿಸುವರು. ಇದೇ ಸಂದರ್ಭದಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಉತ್ತಮ ಶಿಕ್ಷಕರ ರತ್ನ ಪ್ರಶಸ್ತಿ ಹಾಗೂ ಅಕ್ಷರದವ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

admin
the authoradmin

ನಿಮ್ಮದೊಂದು ಉತ್ತರ