LatestMysore

ಭಾವಪೂರ್ಣ ಶ್ರದ್ಧಾಂಜಲಿ – ಮಡ್ಡಿಕೆರೆ ಗೋಪಾಲ್ ಸರ್… ಇದು ಅತೀವ ದುಃಖದ ಸುದ್ದಿ

ನನ್ನೊಂದಿಗೆ ಅತ್ಯಂತ ಆತ್ಮೀಯವಾಗಿ ಇರುತ್ತಿದ್ದ, ಸದಾ ಹಸನ್ಮುಖಿ, ಸೌಮ್ಯ ಸ್ವಭಾವದ, ಸಹಕಾರ ಮನೋಭಾವದ ಹಿರಿಯ ವ್ಯಕ್ತಿತ್ವದ, ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಮಡ್ಡಿಕೆರೆ ಗೋಪಾಲ್ ರವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ.

ಕೆಲವೊಂದು ಸಮಾರಂಭಗಳಲ್ಲಿ ಅವರ ಜೊತೆ ಒಡನಾಡುವ, ಅವರ ಮಾತುಗಳನ್ನು ಕೇಳುವ, ಅವರ ಪ್ರೀತಿ-ವಿಶ್ವಾಸಕ್ಕೆ ಪಾತ್ರನಾಗುವ ಸೌಭಾಗ್ಯ ನನಗೆ ದೊರಕಿತ್ತು. ಅವರು ತೋರುತ್ತಿದ್ದ ಪ್ರೀತಿ, ಕನ್ನಡ ನಾಡು-ನುಡಿಯ ಬಗ್ಗೆ ಅವರಿಗಿದ್ದ ಕಾಳಜಿ ಎಂದಿಗೂ ಮರೆಯಲಾಗದು.

ಅವರನ್ನು ಕಳೆದುಕೊಂಡಿರುವುದು ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟವಾದರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ. ಕನ್ನಡಕ್ಕಾಗಿ ದುಡಿದ ನಿಜವಾದ ಕನ್ನಡ ಸೇವಕನನ್ನು ನಾವು ಕಳೆದುಕೊಂಡಿದ್ದೇವೆ.

ಮಹಾನ್ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿ ಬಳಗಕ್ಕೆ ಆ ಭಗವಂತ ಕರುಣಿಸಲಿ.

ಓಂ ಶಾಂತಿ… ಹೋಗಿ ಬನ್ನಿ ಗೋಪಾಲ್ ಸರ್, ನಿಮ್ಮೊಂದಿಗಿನ ನೆನಪುಗಳು ಸದಾ ನನ್ನ ಮನದಲ್ಲಿರುತ್ತವೆ. ನಿಮಗೊಂದು ಮನದಾಳದ ಸಲಾಮ್

admin
the authoradmin

ನಿಮ್ಮದೊಂದು ಉತ್ತರ