ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹುಣಸೂರು ತಾಲ್ಲೂಕು ಕರ್ಣಕುಪ್ಪೆ ವಲಯದ ಯಶೋದರಪುರ ಕಾರ್ಯಕ್ಷೇತ್ರದಲ್ಲಿ ಕೃಷಿ ಪೂರಕ ಸ್ವ_ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಕೃಷಿ ಅಧಿಕಾರಿಗಳಾದ ವೆಂಕಟೇಶ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈತರು ಕೃಷಿಗೆ ಪೂರಕವಾಗಿ ಕೃಷಿಯೇತರ ಉಪಕಸುಬು ಉದ್ಯಮಗಳಾದ ಕುರಿ ಸಾಕಾಣಿಕೆ. ಕೋಳಿ ಸಾಕಾಣಿಕೆ. ಜೇನು ಸಾಕಾಣಿಕೆ. ಮೀನು ಸಾಕಾಣಿಕೆ. ಹಪ್ಪಳ ತಯಾರಿಕೆ. ಉಪ್ಪಿನಕಾಯಿ ತಯಾರಿಕೆ. ಕರೆಕುಶಲ ವಸ್ತುಗಳ ತಯಾರಿಕೆ. ಹೀಗೆ ಕೃಷಿಯೇತರ ಉಪಕಸಬನ್ನಾಗಿ ರೈತರು ಅಳವಡಿಸಿಕೊಳ್ಳುವುದರ ಮೂಲಕ ರೈತರು ತಮ್ಮವಾದ ರೀತಿಯ ಲಾಭವನ್ನು ಪಡೆಯಲು ಸಹಾಯವಾಗುತ್ತದೆ ಎಂದರು.

ಹೈನುಗಾರಿಕೆಯ ಜೊತೆಗೆ ಇತರೆ ಆರ್ಥಿಕವಾಗಿ ಸ್ವಾವಲಂಬನೆಗೆ ಅನುಕೂಲವಾಗುವ ಉದ್ಯಮವನ್ನು ಮಾಡುವುದರಿಂದ ಜೊತೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದರ ಜೊತೆಯಲ್ಲಿ ರೈತರಿಗೆ ಸಿಗುವಂತಹ ಸರ್ಕಾರಿ ಸೌಲಭ್ಯಗಳಾದ ಪಿಎಂ ಕಿಸಾನ್ ಯೋಜನೆ ಈಕೆ ವೈ ಸಿ ನೋಂದಾವಣೆ ಬಗ್ಗೆ ಸಲಹೆಯನ್ನ ನೀಡಿದರು ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ವಿಜಯಲಕ್ಷ್ಮಿ. ಗ್ರಾಮದ ಮುಖಂಡರಾದ ಗೋವಿಂದರಾಜು ವಲಯ ಮೇಲ್ವಿಚಾರಕರಾದ ಶ್ರೀನಾಥ್, ಮೇಲ್ವಿಚಾರಕರಾದ ಅಣ್ಣಪ್ಪ ಹಾಗೂ ಸೇವಾ ಪ್ರತಿನಿಧಿ ರಾಧಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸೆ.12, ಗಾವಡಗೆರೆ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ
ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ. ಡಿ. ಹರೀಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ ಹಾಗೂ ಇತರೆ ಎಲ್ಲಾ ಇಲಾಖೆಗಳ ಸಾರ್ವಜನಿಕ ಕುಂದು ಕೊರತೆ ಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಗಾವಡಗೆರೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಸೆಪ್ಟೆಂಬರ್ 12 ರ ಬೆಳಿಗ್ಗೆ 10 ಗಂಟೆಯಿಂದ ಗಾವಡಗೆರೆ ಮರಾಠ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಯಾವುದೇ ಇಲಾಖೆಯ ಕುಂದು ಕೊರತೆಗಳಿದ್ದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಗದಿತ ಕೌಂಟರ್ಗಳಲ್ಲಿ ನೋಂದಾಯಿಸಿಕೊಂಡು ಲಿಖಿತವಾಗಿ ಅಹವಾಲು ಅರ್ಜಿಗಳನ್ನು ಸಲ್ಲಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳು ವಂತೆ ಗಾವಡಗೆರೆ ನಾಡಕಚೇರಿ ಉಪ ತಹಸಿಲ್ದಾರ್ ಅರುಣ್ ಕುಮರ್ ತಿಳಿಸಿದ್ದಾರೆ.








