LatestNews

ಬಿಳಿಗಿರಿರಂಗನ ಬೆಟ್ಟದಲ್ಲಿ ರೋಟರಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಗಳು

ಯಳಂದೂರು(ನಾಗರಾಜ ವೈ.ಕೆ.ಮೋಳೆ): ಬಿಳಿಗಿರಿರಂಗನ ಬೆಟ್ಟದಲ್ಲಿ ರೋಟರಿ ಸಂಸ್ಥೆ ವತಿಯಿಂದ ಪೌರಕಾರ್ಮಿಕರಿಗೆ ಸನ್ಮಾನ, ಹೊಸಪೋಡು, ಬಂಗ್ಲೆಪೋಡು ಅಂಗನವಾಡಿ ಮಕ್ಕಳಿಗೆ ಚೇರ್-ಟೇಬಲ್ ವಿತರಣೆ ಹಾಗೂ ಕ್ಲಬ್ ಅಸೆಂಬ್ಲಿ ಮೀಟಿಂಗ್ ಕಾರ್ಯಕ್ರಮ ನಡೆಯಿತು.

ಯಳಂದೂರು ರೋಟರಿ ಕ್ಲಬ್ ಅಧ್ಯಕ್ಷ ರೊ. ರಿತೀಶ್ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರೋಟರಿ ಜಿಲ್ಲಾ ಗವರ್ನರ್ ರೊ. ಸತೀಶ್ ಬೋಳಾರ್, ಸಹಾಯಕ ಗವರ್ನರ್ ರೊ. ಹನುಮಂತೇಗೌಡ, ಜಿಲ್ಲಾ ಕಾರ್ಯದರ್ಶಿ ರೊ. ಜಯಪ್ರಕಾಶ್ ದಿವಾನ್ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ದೇವಸ್ಥಾನ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಹೊಸಪೋಡು ಮತ್ತು ಬಂಗ್ಲೆಪೋಡು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಚೇರ್-ಟೇಬಲ್ ವಿತರಿಸಲಾಯಿತು.

‘ಐ ಲವ್ ಯಳಂದೂರು’ 3D ನಾಮಫಲಕಕ್ಕೆ ಚಾಲನೆ:ಯಳಂದೂರು ಪಟ್ಟಣದ ಭೂಲಕ್ಷ್ಮೀ ವರಾಹಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ರೋಟರಿ ಸಂಸ್ಥೆಯಿಂದ ಅಳವಡಿಸಲಾದ ‘ಐ ಲವ್ ಯಳಂದೂರು’  3D ಅಕ್ರಿಲಿಕ್ ನಾಮಫಲಕವನ್ನು ಉದ್ಘಾಟಿಸಲಾಯಿತು. ಈ ನಾಮಫಲಕ ಪಟ್ಟಣದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದು, ಪಟ್ಟಣದ ಮೆರಗನ್ನು ಹೆಚ್ಚಿಸಿದೆ.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೊ. ಸತೀಶ್ ಬೋಳಾರ್ ರವರು ಮಾತನಾಡಿ, “ಯಳಂದೂರು ರಾಜ್ಯದಲ್ಲಿಯೇ ತುಂಬಾ ಚಿಕ್ಕ ತಾಲ್ಲೂಕು ಆಗಿದೆ. ಆದರೆ ಸಮೃದ್ಧಿಯಿಂದ ಕೂಡಿದೆ, ಕೆರೆ-ಕಟ್ಟೆ ಹೆಚ್ಚಾಗಿರುವ ತಾಲ್ಲೂಕು ಆಗಿದೆ. ದಿವಾನ್ ಪೂರ್ಣಯ್ಯ, ಸಂಚಿ ಹೊನ್ನಮ್ಮ, ಷಡಕ್ಷರಿ ದೇವ ಅವರಂತಹ ಮಹಾನ್ ಪುಣ್ಯಾತ್ಮರು ಹುಟ್ಟಿದ ಊರು ಇದು. ಇಂತಹ ಪುಣ್ಯಭೂಮಿಯಲ್ಲಿ ಜಿಲ್ಲೆಗಳಲ್ಲಿಯೇ ಪ್ರಥಮವಾಗಿ ಸಂಸ್ಥೆಯಿಂದ 3D ಆರ್ಕಲಿಕ್ ‘ಐ ಲವ್ ಯಳಂದೂರು’ ಫಲಕ ಉದ್ಘಾಟನೆ ಮಾಡಿರುವುದು ಹಾಗೂ ಸಮಾಜಮುಖಿ ಕಾರ್ಯ ಮಾಡಿರುವುದು ನನ್ನ ಸೌಭಾಗ್ಯ” ಎಂದು ಖುಷಿ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ನಾಗರಾಜು ವೈ.ಕೆ.ಮೋಳೆ, ನಿಕಟಪೂರ್ವ ಅಧ್ಯಕ್ಷ ರೊ. ವೈ.ಜಿ.ನಿರಂಜನಸ್ವಾಮಿ, ನಿಕಟಪೂರ್ವ ಕಾರ್ಯದರ್ಶಿ ರೊ. ಪುಟ್ಟರಾಜು ವೈ.ಡಿ., ರೊ. ಸೂರ್ಯ ನಾರಾಯಣ್, ಪ್ರಕಾಶ್, ನಟರಾಜ್, ವೈ.ಬಿ.ನಟರಾಜ್, ನಾಗರಾಜು, ವೆಂಕಟೇಶ್, ಎಂ.ದೇವರಾಜ್, ಆರ್.ಬಂಗಾರಸ್ವಾಮಿ, ರವಿ ಗೌಡಳ್ಳಿ, ಅನಿಲ್, ಶಿವಕುಮಾರ್, ಮಹದೇವ, ಬಿ.ಟಿ.ಶ್ರೀನಿವಾಸ್ ಸೇರಿದಂತೆ ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ