CinemaLatest

‘ಅಂಚೆಗೆ ಹೋಗದ ಪತ್ರ’ ಶೀಘ್ರದಲ್ಲಿ ತೆರೆಗೆ…  ಬೆಳಗಾವಿಯಲ್ಲಿ ಚಲನಚಿತ್ರ ಟ್ರೈಲರ್ ಬಿಡುಗಡೆ…

ಬೆಳಗಾವಿ: ನವಗ್ರಹ ಮತ್ತು ವರ್ಚಸ್ ಸಹಯೋಗದ ‘ಅಂಚೆಗೆ ಹೋಗದ ಪತ್ರ’ ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಬೆಳಗಾವಿಯ ಕನ್ನಡ ಭವನದಲ್ಲಿ ನೆರವೇರಿತು.

ಅತಿಥಿಗಳಾಗಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಕೆಪಿಸಿಸಿ ಸದಸ್ಯೆ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಪ್ರವೀಣ ಸುತಾರ ಮಾತನಾಡಿ, ಜಿಲ್ಲೆಯ ಕಲಾವಿದರು, ತಂತ್ರಜ್ಞರಲ್ಲದೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಕಥಾವಸ್ತು, ನಿರ್ಮಾಣದ ಹಿಂದಿನ ಪ್ರಯತ್ನಗಳು, ಚಿತ್ರತಂಡದ ಪರಿಶ್ರಮ, ಹೊಸ ಪ್ರತಿಭೆಗಳ ಸಹಕಾರದೊಂದಿಗೆ ರೂಪುಗೊಂಡಿರುವ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಹಿತಿ ಯ.ರು.ಪಾಟೀಲ, ಚಿತ್ರದ ನಿರ್ಮಾಪಕರಾದ ಮಂಜುನಾಥ ಹುಲಮನಿ, ನಿರ್ಮಾಣ ತಂಡದ ಮಹಾಂತೇಶ ಹಲಗಿಮರ್ಡಿ, ಪ್ರಕಾಶ ಮುಂಗುರವಾಡಿ, ಬಸವರಾಜ ಹಿರೇಮಠ ಹಾಗೂ ಭರ್ಮಾ  ಮೊಟ್ರೆ , ಯುವ ಮುಖಂಡ ಸಚಿನ ಪಾಟೀಲ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಿಕೇರಿ, ಆರ್.ಸಿ.ಪಾಟೀಲ, ಬಾಳಾಸಾಹೇಬ ದೇಸಾಯಿ, ವೀಣಾ ಮುಂಗರವಾಡಿ, ಬಸವರಾಜ ತಿಗಡಿ, ಚೇತನ ಹಿರೇಮಠ, ಸಿದ್ದಯ್ಯ ಧಾರವಾಡ, ನಾಯಕಿಯರಾದ ಸಹನಾ ಪ್ರಕಾಶ ಮತ್ತು ಸೌಮ್ಯ ಉಪಸ್ಥಿತರಿದ್ದರು.

ನಾಯಕಿಯಾಗಿ ಸಹನಾ ಪ್ರಕಾಶ ಜೊತೆಗೆ “ರಕ್ಕಸಪುರದೊಳ” ಖ್ಯಾತಿಯ ಸೌಮ್ಯ ಅಮರಪೂರಕರ್ ಮತ್ತು “ಮಹಾನಟಿ ರನ್ನರ್ ಆಫ್” ವರ್ಷಾ ದಿಗ್ರೆಜೆ ಪ್ರಮುಖ ಪಾತ್ರಗಳಲ್ಲಿದ್ದು , ಚಿತ್ರಕ್ಕೆ ದಿವಾಕರ ಎಂ ಅವರ ಸಂಗೀತ , ಮಂಜು ಬಸವರಾಜ ಛಾಯಾಗ್ರಹಣ, ಸಂಕಲನ ಶಿವ ಗಂಗಾಧರ ರಂಜಿತ ಪಾಂಡೆ ವಿ.ಎಫ್.ಎಕ್ಸ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹ ನಿರ್ದೇಶಕರಾಗಿ ವೀಣಾ ಮತ್ತು ವಿಶಾಲ ಕೆಲಸ ಮಾಡಿದ್ದು, ಪ್ರವೀಣ ತಾನಾಜಿ ಸುತಾರ, ಮಂಜುನಾಥ ಹುಲಮನಿ, ವರ್ಚಸ್ ಮತ್ತು ಪರದಿಶೆ ನಿರ್ಮಾಪಕರಾಗಿದ್ದಾರೆ.

‘ಅಂಚೆಗೆ ಹೋಗದ ಪತ್ರ’ ಚಿತ್ರದ ಟ್ರೈಲರ್ ಇದೀಗ ‘ವೇದಸ್ಯ ಮ್ಯೂಸಿಕ್’ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವದಾಗಿ ನಿರ್ದೇಶಕ ಸುತಾರ  ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ