janamanakannada > Blog > Latest > Mysore > ಅಖಂಡ ಕರ್ನಾಟಕ ರಂಗಭೂಮಿ ಕಲಾವಿದರ ಟ್ರಸ್ಟ್ ನ ಕೆಬ್ಬೆ ಹುಂಡಿ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಕೆ
ಅಖಂಡ ಕರ್ನಾಟಕ ರಂಗಭೂಮಿ ಕಲಾವಿದರ ಟ್ರಸ್ಟ್ ನ ಕೆಬ್ಬೆ ಹುಂಡಿ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಕೆ
adminನವೆಂಬರ್ 11, 2026

ಮೈಸೂರು: ಅಖಂಡ ಕರ್ನಾಟಕ ರಂಗಭೂಮಿ ಕಲಾವಿದರ ಟ್ರಸ್ಟ್ ನ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಖ್ಯಾತ ರಂಗಭೂಮಿ ಕಲಾವಿದ ಮೈಸೂರು ಜಿಲ್ಲಾ ಬಿ ಜೆ ಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಟಿ ನರಸೀಪುರ ತಾಲೂಕು ಕೆಬ್ಬೆ ಹುಂಡಿ ಶಿವಕುಮಾರ್ ರವರನ್ನು ಮೈಸೂರಿನಲ್ಲಿ ಮಹಾ ಸಂಗಮ ಸೇವಾ ಟ್ರಸ್ಟ್ ರಿ ವತಿಯಿಂದ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ಮಹಾ ಸಂಗಮ ಸೇವಾ ಟ್ರಸ್ಟ್ ನ ಅಧ್ಯಕ್ಷರು ಮತ್ತು ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ಕೇಂದ್ರ ಸರ್ಕಾರದ RITES ಸಂಸ್ಥೆಯ ಜನರಲ್ ಮ್ಯಾನೇಜರ್ ಸುದೀಪ್ ಮತ್ತು ಕಿರಗಸೂರು ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ಮಹದೇವಸ್ವಾಮಿ ಮತ್ತು ಇನ್ನಿತರರು ಉಪಸ್ಥಿತರಿದ್ದರು
Tags:kalmalli nataraj
admin







