LatestMysore

ವೀರಶೈವ ಲಿಂಗಾಯತ ಸಮಾಜ ಒಂದು ಧರ್ಮವೇ ಹೊರತು ಜಾತಿ ಅಲ್ಲ: ರುದ್ರೇಶ್

 ಕೆ.ಆರ್.ನಗರ(ಜಿಟೆಕ್ ಶಂಕರ್): ವೀರಶೈವ ಲಿಂಗಾಯತ ಸಮಾಜ ಒಂದು ಧರ್ಮವೇ ಹೊರತು ಅದು ಜಾತಿ ಅಲ್ಲ ಅದನ್ನು ಸಮಾಜದ ಸಹೋದರರು ಅರಿತು ಮಾತ ನಾಡಬೇಕು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯೂ ಆದ ವೀರಶೈವ ಮುಖಂಡ ರುದ್ರೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲ ಸಮಾಜದ ಸಹೋದರರು ಮೊದಲು ವೀರಶೈವ ಸಮಾಜದಲ್ಲಿ ಎಷ್ಟು ಉಪಜಾತಿಗಳಿವೆ ಎಂದು ತಿಳಿದು ಮಾತನಾಡಬೇಕು ಎಂದರು.

ವೀರಶೈವ ಸಮಾಜದಲ್ಲಿ 104 ಉಪ ಜಾತಿಗಳಿದ್ದು ಲಿಂಗಾಯತ, ಬೇಡರ ಜಂಗಮ, ಬಳೆಲಿಂಗಾಯತ, ಶೆಟ್ಟಿಲಿಂಗಾಯತ ಸೇರಿದಂತೆ ಇನ್ನಿತರರ ಉಪ ಪಂಗಡಗಳಿವೆ ಎಲ್ಲವೂ ಸೇರಿ ವೀರಶೈವ ಲಿಂಗಾಯತವಾಗಿದೆ ಎಂದು ತಿಳಿಸಿದ ಅವರು ನಾನು ಬೇಡರ ಜಂಗಮ ಪ್ರಮಾಣ ಪತ್ರ ಪಡೆದಿದ್ದೇನೆ ಅದು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು ಇದು ಸರ್ಕಾರದ ಸವಲತ್ತಿಗಾಗಿಯೇ ಹೊರತು ಬೇರಾವುದಕ್ಕೂ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸ್ಪಷ್ಟನೆ ನೀಡಿದರು.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಲಿಂಗಾಯತರನ್ನು ವೀರಶೈವ ಮತ್ತು ಲಿಂಗಾಯತ ಎಂದು ಎರಡು ಪಂಗಡಗಳನ್ನಾಗಿ ವಿಂಗಡಿಸಿ ನಮ್ಮ ಸಮಾಜದವನ್ನು ಹೊಡೆಯು ಹಾಕಿದರೂ ಅದೇ ರೀತಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಸಮಾಜದ ಕೆಲ ಮುಖಂಡರು ಲಿಂಗಾಯತ ಮತ್ತು ಬೇಡರ ಜಂಗಮ ಬೇರೆ ಬೇರೆ ಎಂದು ವಿಗಂಡಿಸುತ್ತಿದ್ದೀರಿ ಎಂದು ಆರೋಪಿಸಿದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರನ್ನು ವೇದಿಕೆಯ ಮೇಲೆ ಕರೆಯದೆ ಅವರಿಗೆ ಅಮಾನಿಸಿದ್ದೀರಿ ಎಂದರಲ್ಲದೆ ನಾವು ಸಮಾಜಕ್ಕೆ ಡಿ.ರವಿಶಂಕರ್ ಅವರ ಕೊಡುಗೆ ಏನು ಎಂದು ಕೇಳಿದ್ದೇವೆಯೇ ಹೊರತು ಸಮಾಜದ ಮುಖಂಡರಿಗೆ ಏನು ಅನುಕೂಲ ಮಾಡಿದ್ದಾರೆ ಎಂದು ಕೇಳಿಲ್ಲ ಮೊದಲು ಪ್ರಶ್ನೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದ ರುದ್ರೇಶ್ ಬಸವ ಜಯಂತಿಗೆ ಯಾರು ಎಷ್ಟು ಹಣ ನೀಡಿದ್ದಾರೆ ಎಂಬುದು ನಿಮಗೆ ಮುಖ್ಯವಾಗಿದೆಯೇ ಹೊರತು ಸಮಾಜದ ಹೆಸರು ಮುಖ್ಯವಾಗಿಲ್ಲ ಎಂದು ಜರಿದರಲ್ಲದೆ ಧರ್ಮ ಮತ್ತು ಜಾತಿ ವಿಚಾರ ಬಂದಾಗ ಪರವಿರೋಧ ಮಾಡದೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಅಖಿಲ ವೀರಶೈವ ಮಹಾ ಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಕರ್ತಾಳುಮಧು ಮಾತನಾಡಿ ಸಾ.ರಾ.ಮಹೇಶ್ ಅವರು ಶಾಸಕರಾಗಿದ್ದಾಗ ವೀರಶೈವ ಲಿಂಗಾಯತರು ಇರುವ ಎಲ್ಲಾ ಗ್ರಾಮಗಳಿಗೂ ಸರ್ಕಾರದ ಅನುದಾನದ ಜತೆಗೆ ವೈಯುಕ್ತಿಕವಾಗಿಯು ಸಹಕಾರ ನೀಡಿರುವುದಲ್ಲದೆ ಕ್ಷೇತ್ರದಲ್ಲಿರುವ ಲಿಂಗಾಯತ ಮಠ ಮಾನ್ಯಗಳ ಉದ್ದಾರಕ್ಕೆ ದುಡಿದ್ದಾರೆ ಹಾಗೂ ಕೆಲ ಮಠಾಧೀಶರಿಗೆ ವಾಹನದ ವ್ಯವಸ್ಥೆಯನ್ನು ಸಹಾ ಮಾಡಿದ್ದಾರೆ ಎಂದ ಅವರು ಪ್ರಸ್ತುತ ಶಾಸಕರಾಗಿರುವ ಡಿ.ರವಿಶಂಕರ್ ಅವರ ಕೊಡುಗೆ ಸಮಾಜಕ್ಕೆ ಏನು ಎಂದು ಪ್ರಶ್ನಿಸಿದರು.

ಸಾ.ರಾ.ಮಹೇಶ್ ಅವರ 15 ವರ್ಷ ಅಧಿಕಾರವಧಿಯಲ್ಲಿ ಸಮಾಜದ ಹಲವು ಮುಖಂಡರುಗಳಿಗೆ ಸ್ಥಳಿಯ ಸಂಸ್ಥೆಯ ಜತೆಗೆ ರಾಜ್ಯ ಮಟ್ಟದ ನಿಗಮದಲ್ಲೂ ಅಧಿಕಾರ ನೀಡಿದ್ದರು ಎಂದ ಅವರು ಅಧಿಕಾರದಲ್ಲಿದ್ದಾಗ ಅಭಿವೃದ್ದಿ ಕೆಲಸಗಳನ್ನು ಮಾಡುವುದು ಅವರ ಕರ್ತವ್ಯ ಎಂಬುದನ್ನು ಶಾಸಕರ ಬೆಂಬಲಿಗರು ಅರಿಯಬೇಕು ಎಂದು ಹೇಳಿದರು.

ಬಸವ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಕಾರ್ಯಕ್ರಮ ಮಾಡಿರುವುದಕ್ಕೆ ನಾವು ಸಹ ಸ್ವಾಗತ ಮಾಡುತ್ತೇವೆ ಆದರೆ ಕಾರ್ಯಕ್ರಮದ ವೇದಿಕೆಯಲ್ಲಿ ರಾಜಕಾರಣ ಮಾಡಿರುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಸರಗೂರುಶಿವು, ಆರ್ದಶ, ಬಿಜೆಪಿಪುನೀತ್, ಚಂದ್ರಪ್ಪ, ರಾಜಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

 

admin
the authoradmin

ನಿಮ್ಮದೊಂದು ಉತ್ತರ