ಹಾರಂಗಿ ಹಿನ್ನೀರಿನಲ್ಲಿ ಬೋಟ್ ಮಗುಚಿ ಗುಜರಾತ್ ಮೂಲದ ದಂಪತಿಗಳು ಸಾವನಪ್ಪಿದ್ದಾರೆ ಸ್ಥಳೀಯರಿಗೆ ಏನಾದರೂ ಈ ದುರಂತವಾಗಿದ್ದರೆ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟನೆಗಳನ್ನು ಮಾಡಿ ಇಷ್ಟೊತ್ತಿಗಾಗಲೇ ದೊಡ್ಡ ರಾದ್ಧಾಂತವನ್ನೇ ಮಾಡುತ್ತಿದ್ದವು ಆದರೆ ದೂರದ ರಾಜ್ಯದ ದಂಪತಿಗಳು ಸಾವನಪ್ಪಿರುವುದರಿಂದ ಈ ಸಾವಿನ ಪ್ರಕರಣ ಹಾಗೇ….ನಿಧಾನವಾಗಿ ಮಾಸಿ ಹೋಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ
ಬೋಟ್ ಮೂಲಕ ನೀರಿಗೆ ಇಳಿಯುವಾಗ ಎಷ್ಟು ಎಚ್ಚರದಿಂದಿದ್ದರೂ ಕಡಿಮೆಯೆ ಕೆಲವು ನಿಯಮಗಳನ್ನು ಪಾಲಿಸದೆ ದುಡ್ಡು ಮಾಡುವ ದಂದೆಗೆ ಮುಂದಾಗಿರುವುದೇ ಈ ದುರ್ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಪ್ರಶ್ನಿಸಿ ಪ್ರತಿಭಟಿಸಬೇಕಾದ ಸಂಘಟನೆಗಳ ಮೌನವೇಕೆ.ಯಾವ ರಾಜ್ಯದ ಜೀವಗಳಾದರೂ ಜೀವವೇ ಅಲ್ಲವೇ?.

ಅಮಾಯಕ ದಂಪತಿಗಳ ಸಾವಿಗೆ ನ್ಯಾಯವೇ ಇಲ್ಲವೇ? 1)ಇಲ್ಲಿರುವ ಬೋಟ್ ಗಳಿಗೆ ಇನ್ಸೂರೆನ್ಸ್ ಇದೆಯೆ? 2)ಸೇಫ್ಟಿ ಅಡಿಟ್ ಇದೆಯೆ? 3)ಬೋಟ್ ಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ಇದೆಯೆ? 4)ಬೋಟ್ ಚಾಲಕನಿಗೆ ಪರವಾನಗಿ ಇದೆಯೆ? 5)ಬೋಟ್ ಚಾಲಕ ಏನಾದರೂ ಮದ್ಯ ಸೇವಿಸಿದ್ದನೆಯೇ? 6)ನಿಯಂತ್ರಣದಲ್ಲಿಡ ಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ಕಾರಣವೇ?
ಹೀಗೆ ಹತ್ತಾರು ಪ್ರಶ್ನೆಗಳು ಕಾಡ ತೊಡಗಿವೆ ಸ್ಥಳೀಯರಿಗೆ ಇಂತಹ ದುರ್ಘಟನೆಯಾಗಿದ್ದರೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದ್ದವು ಆದರೆ ದೂರದ ಊರಿನ ದಂಪತಿಗಳ ಸಾವು ಪ್ರಶ್ನಿಸುವವರ ಬಾಯಿಗೆ ಬೀಗ ಹಾಕಿಸಿದೆಯೆ? ನಿರ್ಲಕ್ಷದಿಂದ ದುರಂತಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮವಾಗಬೇಕಿದೆ ತಕ್ಷಣ ಅಮಾನತ್ತಿನಲ್ಲಿಟ್ಟು ಪರಿಶೀಲನೆ ನಡೆಯಬೇಕಿದೆ ಸಾವಿಗೆ ನ್ಯಾಯ ಒದಗಿಸಬೇಕಿದೆ ಕಠಿಣ ಕ್ರಮವಾಗಿ ಮುಂದೆ ಆಗುವ ದುರಂತವನ್ನು ತಪ್ಪಿಸಬೇಕಿದೆ.

ಅಧಿಕಾರಕ್ಕಿಂತ ಮಾನವೀಯತೆ ದೊಡ್ಡದು… ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಸಾಬೀತು ಮಾಡಿದ್ರು….








