ArticlesLatest

ಅಧಿಕಾರಕ್ಕಿಂತ ಮಾನವೀಯತೆ ದೊಡ್ಡದು… ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್  ಸಾಬೀತು ಮಾಡಿದ್ರು….

ಗುಮ್ಮನಕೊಲ್ಲಿಯಲ್ಲಿ ಕಾರಿನಲ್ಲಿ ಕುಳಿತ್ತಿದ್ದೆ ಏಕೋ ಒಮ್ಮೇ ಮುಖುಪುಟದ ಕಡೆ ಗಮನ ಹರಿಸಿದೆ ಒಂದು ವೀಡೀಯೋ ಫೋಟೋಗಳನ್ನು ನೋಡಿದೆ ಒಂದು ಮಗು ಓರ್ವ ಪೊಲೀಸ್ ಅಧಿಕಾರಿಯ ವೀಡಿಯೋ ಅದಾಗಿತ್ತು. ಅಧಿಕಾರಿ ಒಂದು ಮಗುವಿಗೆ ಬಟ್ಟೆ ಕೇಕನ್ನು ನೀಡುತ್ತಿರುವ ದೃಶ್ಯ  ಶೀರ್ಷಿಕೆಯೊಂದಿಗೆ H T ಅನಿಲ್ ರವರು ಬರೆದಿರುವ  ವಿಷಯವನ್ನು ಓದಿದೆ.

ಇತ್ತೀಚೆಗೆ ಗುಹ್ಯ ಗ್ರಾಮದಲ್ಲಿ ಕಾರು ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿ ದಂಪತಿ ಮತ್ತು 4 ವರ್ಷದ ಮಗು ಸಾವು ಬದುಕುಳಿದಿದ್ದು ಒಂದು ಮಗು ಮಾತ್ರ ಆ ಮಗುವೇ ದೀಕ್ಷಾ.. ಈ ಮಗು ತನ್ನ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾಳೆ ಮಗುವಿನ ಜನುಮ ದಿನಾಚರಣೆ  ಆಚರಿಸಲು ಮಗವಿನ ಮನೆಗೆ ಅಧಿಕಾರಿಯೊಬ್ಬರು ತೆರಳಿರುವುದು ಒಂದು ನಿಮಿಷ ಅಚ್ಚರಿಗೊಂಡೆ ನನಗರಿವಿಲ್ಲದೇ ಕಣ್ಣಿನಲ್ಲಿ ನೀರು ಹರಿಯಲು ಆರಂಭಿಸಿತು ಬಿಕ್ಕಳಿಸಿ ಅತ್ತೆ….

ಗೂಗಲ್ ಗೆ ತೆರಳಿ ಆ ಅಧಿಕಾರಿಯ ಮೊಬೈಲ್ ಸಂಖೈ ಹುಡುಕಿ ಕರೆಮಾಡಿದೆ ಅವರ ಬಳಿ ‌ಮಾತನಾಡಲಾಗದಷ್ಟು ದುಃಖ ಸಹಿಸದಾಯ್ತು ಅಳು ಮಾತ್ರ ನಿಲ್ಲಿಸಲು ಸಾಧ್ಯವಾಗಲೇ ಇಲ್ಲ ಇಂತಹ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ರವರ ನಡೆ. ನನಗೆ ಅಪ್ಪ ಇದ್ದಿದ್ರೆ…. ಅಮ್ಮ ಇದ್ದಿದ್ರೆ…..

ನನ್ನ ಬರ್ತ್ ಡೇ ಮಾಡ್ತಾ ಇದ್ರು ಕೇಕ್ ಕಟ್ ಮಾಡ್ತಾ ಇದ್ರು ಬಟ್ಟೆ ಕೊಡಿಸ್ತಾ ಇದ್ರು ಶಾಲೆಯಲ್ಲಿ ಫ್ರೆಂಡ್ಸ್ ಗೆ ಚಾಕ್ ಲೇಟ್ ಕೊಡಲಿಕ್ಕೆ ಕೊಡಿಸ್ತಾ ಇದ್ರು  ಆದರೆ ನನಗೆ ಈ ವರ್ಷ ಇವರಿಬ್ಬರೂ ಇಲ್ಲ ನನ್ನ ಬರ್ತ್ ಡೇ ಆಚರಿಸುವವರೇ ಇಲ್ಲ ಎಂಬ ಕೊರಗು ಮಗುವಿಗೆ ಇತ್ತೇನೋ ಶೋಕ ಸಾಗರದಲ್ಲಿ ಮುಳುಗಿದ್ದ ಆ ಮಗುವಿನ ಕೊರಗು ನೀಗಿಸಲು ಅಪ್ಪ ಅಮ್ಮನ ರೂಪದಲ್ಲಿ ಆ ಮಗುವಿನ ಮನೆಗೆ ಬಂದವರು ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ರವರು

ಮೊದಲು ನಾವು ಮನುಷ್ಯರು ನಂತರ ಅಧಿಕಾರ ಎಂಬುದನ್ನು ಸಾಬೀತು ಮಾಡಿದವರು ಮಗುವಿನ ಜನುಮ ದಿನಾಚರಣೆ ಆಚರಿಸಿ ಸಂಭ್ರಮಿಸಿದವರು ಮತ್ತೊಬ್ಬರಿಗೆ ಮಾದರಿಯಾದವರು ಖಾಕೀ ಎಂದರೆ ಕೇವಲ ಭಯವಲ್ಲ ಪ್ರೀತಿಯ ಸಂಕೇತ ಎಂದು ಸಾಕ್ಷಿ ಸಮೇತ ಸಮಾಜಕ್ಕೆ ಸಂದೇಶ ರವಾನಿಸಿದವರು. ಮಂಜುನಾಥ್ ರವರ ಈ ಗುಣ ಪೊಲೀಸ್ ಇಲಾಖೆಯ ಮೇಲೆ ಮತ್ತಷ್ಟು ಗೌರವ ಹೆಚ್ಚಿಸಿದಂತಾಗಿದೆ ನಾವು ಎಷ್ಟು ವರ್ಷ ಬದುಕ್ಕಿರುತ್ತೇವೋ ಎಂಬುದು ಮುಖ್ಯವಲ್ಲ ಹೇಗೆ ಬದುಕುತ್ತೇವೋ ಎಂಬುದಷ್ಟೆ ಇಲ್ಲಿ ಮುಖ್ಯ.

ತನ್ನ ತಂದೆ ತಾಯಿಯನ್ನು ಕಳೆದುಕ್ಕೊಂಡ ಮಗುವಿಗೆ ಸಮವಸ್ತ್ರದಾರಿ ಅಧಿಕಾರಿಯೊಬ್ಬರು ಈ ಮೂಲಕ ಸಾಂತ್ವಾನ ಸಮಾಧಾನ ಹೇಳಿದ್ದಾರೆ ನಿನ್ನ ಜೊತೆ ನಾನೀದ್ದೇನೆ ಎಂಬ ಧೈರ್ಯ ತುಂಬಿದ್ದಾರೆ ಇಂತಹ ನಿಷ್ಕಲ್ಮಶ ಮಗುವಿನ ಮನಸ್ಸಿನಲ್ಲಿ ಬದುಕುವ ಛಲ ಹುಟ್ಟಿಸಿದ್ದಾರೆ. ಪೊಲೀಸ್ ಇಲಾಖೆ ಎಂದರೆ ಗದರುವುದು ಬೆದರಿಸುವುದಷ್ಟೆ ಅಲ್ಲ ಮಾನವೀಯತೆಯೂ ಇದೆ.ಎಂಬುದನ್ನು ತಿಳಿಸಿದ್ದಾರೆ. ಮಂಜುನಾಥ್ ರವರಂತಹ ಮಾನವೀಯ ಗುಣ ಉಳ್ಳಂತಹ ಅಧಿಕಾರಿಗಳು ಮತ್ತು ಮನುಷ್ಯರ ಸಂಖೈ ಹೆಚ್ಚಲಿ ಎಂಬುದಷ್ಟೇ ಹಾರೈಕೆ.

admin
the authoradmin

ನಿಮ್ಮದೊಂದು ಉತ್ತರ