Cinema

“ಅಮೃತವಾಣಿ” ಕಿರುಚಿತ್ರದಲ್ಲಿ ಕಾಣಿಸಿದ ಹುಚ್ಚ ವೆಂಕಟ್! ಈ ಚಿತ್ರದಲ್ಲಿ ಅವರ ಪಾತ್ರವೇನು?

ಹುಚ್ಚವೆಂಕಟ್ ಎಲ್ಲಿ ಎಂದು ಕೇಳುತ್ತಿದ್ದವರಿಗೆ  ವಿಶೇಷ ಪಾತ್ರದಲ್ಲಿ ‘ಅಮೃತವಾಣಿ’ ಕಿರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಹೇಗಿದೆ ಕಥೆ ಏನು ಎಂಬುದನ್ನು ನೋಡಿದ ಮೇಲೆ ಗೊತ್ತಾಗಲಿದೆ. ಆದರೂ ಈ ಚಿತ್ರ ಮುದ್ದು ಮಕ್ಕಳಿಗೆ ಪೋಷಕರ ಕಷ್ಟಗಳ ಬಗ್ಗೆ ತಿಳಿಹೇಳುವ ಕಥಾ ಹಂದರದೊಂದಿಗೆ ಮುಂದುವರೆಯಲಿದೆ..

ಇವತ್ತಿನ ಪರಿಸ್ಥಿತಿಯಲ್ಲಿ ಕಿರುಚಿತ್ರಗಳೆಂದರೆ ವಿಚಿತ್ರವಾಗಿರುತ್ತವೆ. ಅದರಲ್ಲೂ ದ್ವಂದ್ವಾರ್ಥಗಳಿಂದ ಕೂಡಿದ ಚಿತ್ರಗಳದ್ದೇ ಅಬ್ಬರವಾಗಿದ್ದು, ಅಂತಹ ಕಿರುಚಿತ್ರಗಳ ನಡುವೆ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ಕಿರು ಚಿತ್ರವನ್ನು ನವಿಲುಗರಿ ಸಿನಿಮಾಸ್ ನ ಪಿಬಿಎನ್ ಬ್ರದರ್ಸ್ ಮಾಡಿದ್ದಾರೆ. ಇವರು ನಿರ್ಮಿಸಿರುವ ಅಮೃತವಾಣಿ ಇದೀಗ ಎಲ್ಲರ ಗಮನಸೆಳೆಯುತ್ತಿದೆ.

ಈ ಕಿರುಚಿತ್ರದಲ್ಲಿ ಮುದ್ದು ಮಕ್ಕಳಿಗೆ ಪೋಷಕರ ಕಷ್ಟಗಳ ಬಗ್ಗೆ ತಿಳಿಹೇಳುವ ವಿಷಯದ ಬಗ್ಗೆ ಡಾ. ನಿರಂಜನ ಪಿ ಬಿ ಅವರು ಸುಂದರವಾಗಿ ಕಥೆ ಹೇಳಿದ್ದಾರೆ. ಈ ಚಿತ್ರಕ್ಕೆ ನವಿಲುಗರಿ ನವೀನ್ ಪಿ. ಬಿ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ  ಫೈರಿಂಗ್ ಸ್ಟಾರ್ ಹುಚ್ಚು ವೆಂಕಟ್  ಬುದ್ಧಿ ಹೇಳುವ ವಿಶೇಷ ಪಾತ್ರದಲ್ಲಿ ತುಂಬಾ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಸೋಂಬೇರಿ ಹುಡುಗ ಪಾತ್ರದಲ್ಲಿ ಯಶ್ವಿನ್ ಆರ್ ನೈಜವಾಗಿ ನಟಿಸಿದ್ದಾನೆ. ಇನ್ನೂ ಚಿತ್ರದಲ್ಲಿ ಬರುವ ಉಳಿದ ಪಾತ್ರಗಳೆಲ್ಲ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಪ್ರಣವ್ ಸತೀಶ್ ಸಂಗೀತ,ಛಾಯಾಗ್ರಹಣ ಗೌತಮ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರದಿದೆ. ಈ ಚಿತ್ರ ನಿತ್ಯ ಜೀವನ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಯಶಸ್ವಿ ವೀಕ್ಷಣೆ ಪಡೆಯುತ್ತಿರುವುದು ವಿಶೇಷವಾಗಿದೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want