ಕುಮಾರಕವಿ ಬಿ.ಎನ್. ನಟರಾಜರವರು ರಚಿಸಿದ “ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳು ಬಿಡುಗಡೆ
ಕೆನರಾಬ್ಯಾಂಕ್ ಉದ್ಯಾನವನ ಚಪ್ಪಾಳೆ ಗುಂಪಿನ ಗೆಳೆಯರ ಬಳಗದಿಂದ ಪುಸ್ತಕ ಲೋಕಾರ್ಪಣೆ

ಬೆಂಗಳೂರು: ಚಂದನವನದ ನಟ, ನಟಿಯರು ಕಲಾವಿದರು ಸೇರಿದಂತೆ ಸಮಗ್ರ ವಿಚಾರಗಳನ್ನು ಅರಿತಿರುವ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಈಗಾಗಲೇ ಚಂದನವನಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಅವು ಪತ್ರಿಕೆ ಸೇರಿದಂತೆ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ ಇದೀಗ ಎಲ್ಲವನ್ನು ಒಂದುಗೂಡಿಸಿ ಕೊಡುವ ಪ್ರಯತ್ನ ಮಾಡಿದ್ದು ಅದರ ಪ್ರತಿಫಲವೇ ಇವತ್ತಿನ “ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳಾಗಿವೆ. ಓದುಗರು ಕೊಂಡು ಓದಬಹುದಾಗಿದೆ..

ಈ ಸಂಬಂಧ ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳ ಲೋಕಾರ್ಪಣೆಯಾಗಿದೆ. ಮಾ.13ರ ಶುಕ್ರವಾರ ಬೆಳಗ್ಗೆ ನಗರದ ಪ್ರತಿಷ್ಠಿತ ಕೆನರಾಬ್ಯಾಂಕ್ ಉದ್ಯಾನವನ ಚಪ್ಪಾಳೆ ಗುಂಪಿನ ಗೆಳೆಯರ ಬಳಗದ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ.

ಕರ್ನಾಟಕ ರಾಜ್ಯದ ಹಿರಿಯ ಬರಹಗಾರರಾದ ಮೈಸೂರು ಮೂಲದ ಕುಮಾರಕವಿ ಬಿ.ಎನ್. ನಟರಾಜರವರು ರಚಿಸಿದ “ಚಂದನವನ ಚರಿತ್ರೆ” ಎಂಬ ಕೃತಿಯ 5 ಸಂಪುಟಗಳು ಏಕ ಕಾಲಕ್ಕೆ ಲೋಕಾರ್ಪಣೆಗೊಂಡಿರುವುದು ಖುಷಿ ತಂದಿದೆ. ಈ ಕಾರ್ಯಕ್ರಮಕ್ಕೆ ನೂರಾರು ಗಣ್ಯರು ಮಹಿಳೆಯರು ಮಕ್ಕಳು ಸಾಕ್ಷಿಯಾದರು.

ಮೊದಲಿಗೆ ಉಮಾಪತಿ ಅವರಿಂದ ಪ್ರಾರ್ಥನೆಯ ನಂತರ ಗಂಗಾಧರ್ ರವರು ಸ್ವಾಗತ ಕೋರಿದರು. ನಿವೃತ್ತ ಐ.ಪಿ.ಎಸ್. ಅಧಿಕಾರಿಯೂ ಚಪ್ಪಾಳೆಗುಂಪಿನ ಗುರೂಜಿಯೂ ಆದ ಸನ್ಮಾನ್ಯ ಸಿದ್ದಲಿಂಗಯ್ಯ ನವರು ಚಂದನವನ ಚರಿತ್ರೆಯ ಐದು ಸಂಪುಟಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಗುರೂಜಿ ಜತೆಗೂಡಿದ ಶ್ರೀಮತಿ ಪ್ರಭಾವತಿ, ಶ್ರೀಮತಿ ಗಾಯತ್ರಿ ಹಾಗೂ ಶ್ರೀ ಗಂಗಾಧರ್ ಅವರುಗಳೂ ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಸಹಕಾರ ನೀಡುವ ಮೂಲಕ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ವರ್ಣರಂಜಿತವಾಗಿ ನೆರವೇರಲು ಅನುವು ಮಾಡಿಕೊಟ್ಟರು.

ಕೃತಿಗಳನ್ನು ಕುರಿತು ಸಿದ್ಧಲಿಂಗಯ್ಯನವರು ಅಮೋಘವಾಗಿ ಮಾತನಾಡುತ್ತಾ, ಬಿ.ಎನ್. ನಟರಾಜರವರು ಬರೆದಿರುವ ಚಂದನವನ ಚರಿತ್ರೆಯ 5 ಸಂಪುಟಗಳಲ್ಲಿ: 1930 ರಿಂದ 2025 ವರೆಗಿನ ಇಡೀ ಕನ್ನಡ ಚಿತ್ರರಂಗದ ಇತಿಹಾಸ, 5000ಕ್ಕು ಹೆಚ್ಚು ಸಿನಿಮಗಳ ಬಗ್ಗೆ, 2000ಕ್ಕೂ ಹೆಚ್ಚಿನ ನಟ,ನಟಿ,ತಾಂತ್ರಿಕವರ್ಗ, ಮುಂತಾದವರ ಬಗ್ಗೆ, ರೀಮೇಕ್, ಡಬ್ಬಿಂಗ್, ರಾಜ್ಯ,ರಾಷ್ಟ್ರ,ಸೈಮ,ಫಿಲಂಫೇರ್, ಫಾಲ್ಕೆ, ಆಸ್ಕರ್, ಇತ್ಯಾದಿ ಪ್ರಶಸ್ತಿ, ಸನ್ಮಾನದ ಬಗ್ಗೆ ಮಾತ್ರವಲ್ಲದೇ ಇನ್ನು ಅನೇಕ ಅದ್ಬುತ ಆಶ್ಚರ್ಯ ಮಾಹಿತಿಗಳಿಂದ ತುಂಬಿತುಳುಕುತ್ತಿದೆ.

ಹೇಳುತ್ತ ಹೋದರೆ ದಿನವೇ ಸಾಲದು. ಈ ಅಪರೂಪದ ಅಪೂರ್ವದ ಉಪಯುಕ್ತ ರಚನೆಗೆ ಕಾರಣ ಕರ್ತರಾದ ರಾಜ್ಯದ ಹಿರಿಯಕವಿ ನಟರಾಜರ 55 ವರ್ಷ ಧೀರ್ಘಕಾಲದ ಪರಿಶ್ರಮಕ್ಕೆ ಇಂದು ಪ್ರತಿಫಲ ದೊರಕಿದೆ ಎಂದು ಶ್ಲಾಘನೀಯ ನುಡಿಯಾಡಿದರು

ಇಂತಹ ಸಂಗ್ರಹಯೋಗ್ಯ ಪುಸ್ತಕಗಳನ್ನು ಕನ್ನಡಿಗರೆಲ್ಲರೂ, ವಿಶೇಷವಾಗಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬರೂ ಕೊಂಡು ಓದುವ ಮೂಲಕ ಸಿನಿಜ್ಞಾನ ಪಡೆವುದರ ಜತೆಗೆ ಲೇಖಕರನ್ನು ಪ್ರೋತ್ಸಾಹಿಸಿದಂತಾಗುವುದು ಎಂದು ಸಿದ್ಧಲಿಂಗಯ್ಯ ಸಲಹೆ ಮಾರ್ಗದರ್ಶನ ನೀಡಿದರು. ನಾಡಿನ ಸತ್ಸಂಪ್ರದಾಯದಂತೆ ಎಲ್ಲರ ಸಮ್ಮುಖದಲ್ಲಿ ಕುಮಾರಕವಿ ನಟರಾಜರಿಗೆ ಗೌರವ ಪೂರ್ವಕವಾಗಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಕೊನೆಯಲ್ಲಿ ಲೇಖಕರ ಕೃತಜ್ಞತಾಪೂರ್ಣ, ಭಾವಪೂರ್ಣ ಮಾತುಗಳಾಡಿದ ನಂತರ ಶ್ರೀಮತಿ ಪ್ರಭಾವತಿಯವರ ವಂದನಾರ್ಪಣೆ ಯೊಡನೆ ಕಾರ್ಯಕ್ರಮ ಮುಗಿಯಿತು. ಇನ್ನು ಈ ಕೃತಿಗಳಿಗೆ “ಮುನ್ನುಡಿ” ಎಸ್.ವಿ.ರಾಜೇಂದ್ರಸಿಂಗ್ ಬಾಬು ಬರೆದಿದ್ದರೆ, “ಬೆನ್ನುಡಿ” ಎಸ್.ಕೆ.ಭಗವಾನ್ (ಖ್ಯಾತ ದೊರೆ-ಭಗವಾನ್ ಜೋಡಿಯಲ್ಲೊಬ್ಬರು) ಅವರು ಬರೆದುಕೊಟ್ಟಿರುವುದು ವಿಶೇಷವಾಗಿದೆ. ಓದುಗರು ಕೃತಿಗಳಿಗಾಗಿ – ಕುಮಾರಕವಿ ಬಿ.ಎನ್.ನಟರಾಜ್ 9036976471 ಅವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.








Congrats Dear Sri B.N.Nataraju (KUMARAKAVI) for bringing such valuable Books. All the best wishes in your journey.
Prof.K.NARAYAN GOWDA, former VICE CHANCELLOR, UNIVERSITYOFAGRICULTURALSCIENCE, HEBBAL, BENGALURU
Congrats Dear Sri B.N.Nataraju (KUMARAKAVI) for bringing such valuable Books. All the best wishes in your journey.
Prof.K.NARAYAN GOWDA, former VICE CHANCELLOR, UNIV. OF AGRICULTURAL SCIENCE, HEBBAL, BENGALURU
Heartiest Congratulations to dear B N Nataraj! Monumental work on Kannada Cinema!
PROF.K.C.BELLIYAPPA, (FORMER VICE CHANCELLOR, Central University, ARUNACHAL PRADESH)resident of JAYAPRAKASH NAGAR, MYSORE SOUTH, MYSURU
Heartiest Congratulations to dear B N Nataraj! Monumental work on Kannada Cinema!
PROF.K.C.BELLIYAPPA, Rtd.Professor and Chairman, DOS in ENGLISH, UOM, MGM-570006(FORMER VICE CHANCELLOR, Central University, ARUNACHAL PRADESH)resident of JAYAPRAKASH NAGAR, MYSORE SOUTH, MYSURU
ನಾಡಿನ ಖ್ಯಾತ ಲೇಖಕರಾಗಿದ್ದ ದಿವಂಗತ ಸಿದ್ದವನಹಳ್ಳಿ ಕೃಷ್ಣಶರ್ಮರ ಮಗಳು ರಾಧಿಕಾ ರವರಿಂದ ಅಭಿನಂದನೆ Whatsapp ಮೂಲಕ…)
“ಕುಮಾರಕವಿಯವರಿಗೆ ವಂದನೆ, ಚಂದನವನ ಚರಿತ್ರೆಯ ಐದು ಸಂಪುಟಗಳು ಏಕಕಾಲದಲ್ಲಿ ಲೋಕಾರ್ಪಣೆ ಕಂಡದ್ದು ಬಹಳ ಸಂತೋಷದ ವಿಷಯ ಸರ್. ಹಾರ್ದಿಕ ಅಭಿನಂದನೆಗಳು.”
[13/03, 18:12] ರಾಧಿಕಾ d/o ಸಿದ್ದವನಹಳ್ಳಿ ಕೃಷ್ಣಶರ್ಮ Tekal: 👏👏
ನಾಡಿನ ಖ್ಯಾತ ಲೇಖಕರಾಗಿದ್ದ ದಿವಂಗತ ಸಿದ್ದವನಹಳ್ಳಿ ಕೃಷ್ಣಶರ್ಮರ ಮಗಳು ರಾಧಿಕಾ Tekal ರವರಿಂದ ಅಭಿನಂದನೆ Whatsapp ಮೂಲಕ…)
“ಕುಮಾರಕವಿಯವರಿಗೆ ವಂದನೆ, ಚಂದನವನ ಚರಿತ್ರೆಯ ಐದು ಸಂಪುಟಗಳು ಏಕಕಾಲದಲ್ಲಿ ಲೋಕಾರ್ಪಣೆ ಕಂಡದ್ದು ಬಹಳ ಸಂತೋಷದ ವಿಷಯ ಸರ್. ಹಾರ್ದಿಕ ಅಭಿನಂದನೆಗಳು.”
[13/03, 18:12] ರಾಧಿಕಾTekal d/o ಸಿದ್ದವನಹಳ್ಳಿ ಕೃಷ್ಣಶರ್ಮ : 👏👏
Congratulations ,👍🌹🧁👑👌 kumarakavi nataraja sir 👏 ❤
*Prabhakar Rao, Rtd.P.A.to REGISTRAR EVALUATION, UNIV. OF MYSORE, residing at Sharada Devi Nagara, Mysore
ಬಿ.ಎನ್.ನಟರಾಜ ಕುಮಾರಕವಿಯವರಿಗೆ ನಮಸ್ಕಾರ. ನಿಮ್ಮ 55 ವರ್ಷದ
ತಪಸ್ಸಿಗೆ ಕಡೆಗೂ ದೇವರು ವರವನ್ನ ನೀಡಿದ್ದು ನನಗೆ ತುಂಬ ಸಂತೋಷ ಆಗಿದೆ. ಹೃದಯಪೂರ್ವಕ ಅಭಿನಂದನೆಗಳು ಸರ್ 👌👌👌👌 🙏🙏🙏🙏🙏🌹🌹🌹🌹🌹👏👏👏👏👏, PRUTHVI, SHIRKE
ಬಿ.ಎನ್.ನಟರಾಜ ಕುಮಾರಕವಿಯವರಿಗೆ ನಮಸ್ಕಾರ. ನಿಮ್ಮ 55 ವರ್ಷದ
ತಪಸ್ಸಿಗೆ ಕಡೆಗೂ ದೇವರು ವರವನ್ನ ನೀಡಿದ್ದು ನನಗೆ ತುಂಬ ಸಂತೋಷ ಆಗಿದೆ. ಹೃದಯಪೂರ್ವಕ ಅಭಿನಂದನೆಗಳು ಸರ್ 👌👌👌👌 🙏🙏🙏🙏🙏🌹🌹🌹🌹🌹👏👏👏👏👏, PRUTHVI, SHIRKE, BENGALURU
ಮೈಸೂರಿನ ಶಿವರಾಂಪೇಟೆ ಈವನಿಅಂಗ್ ಬಜಾರ್ ನ ಪ್ರತಿಷ್ಠಿತ “ವರ್ತಮಾನ್” ಸಂಜೆ ದಿನಪತ್ರಿಕೆಯ ಮಾಜಿ ಸಂಪಾದಕ ಪ್ರಕಾಶಕ ಮಾಲೀಕ ಪತ್ರಿಕೋದ್ಯಮ ಹಿರೀಕ ದಿವಂಗತ ಎಂ.ಎನ್.ತಿಮ್ಮಯ್ಯನವರ ಜೇಷ್ಠಪುತ್ರ ಎಂ.ಟಿ.ಜಯರಾಂ ರವರಿಂದ Congratulations Mr. B.N.N., from MTJ Mysore.
ಬೃಂದಾವನ ಬಡಾವಣೆ 2ನೇ ಹಂತ, ಮೈಸೂರು.
ಮೈಸೂರಿನ ಶಿವರಾಂಪೇಟೆ ಈವನಿಅಂಗ್ ಬಜಾರ್ ನ ಪ್ರತಿಷ್ಠಿತ “ವರ್ತಮಾನ್” ಸಂಜೆ ದಿನಪತ್ರಿಕೆಯ ಮಾಜಿ ಸಂಪಾದಕ ಪ್ರಕಾಶಕ ಮಾಲೀಕ ಪತ್ರಿಕೋದ್ಯಮ ಹಿರೀಕ ದಿವಂಗತ ಎಂ.ಎನ್.ತಿಮ್ಮಯ್ಯನವರ ಜೇಷ್ಠಪುತ್ರ ಎಂ.ಟಿ.ಜಯರಾಂ ರವರಿಂದ “Congratulations Mr. B.N.N., from MTJ Mysore.”
ಬೃಂದಾವನ ಬಡಾವಣೆ 2ನೇ ಹಂತ, ಮೈಸೂರು.
(Whatsapp ಮೂಲಕ, 13ನೇ ಮಾರ್ಚ್ 2026)
ನಮ್ಮಂಥ ಕಿರಿಯರಿಗೆ ಸಕಲರೀತಿ ಪ್ರೋತ್ಸಾಹ ಬೆಂಬಲ ಹಾಗೂ ಮಾರ್ಗದರ್ಶನ
ನೀಡುತ್ತಿರುವ ಹಿರಿಯಣ್ಣ ಗೌರವಾನ್ವಿತ ಕುಮಾರಕವಿ ನಟರಾಜರವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಬಹುಶಃ ಇವರ ಪ್ರಕಟಿತ ಕೃತಿಗಳು 50 ದಾಟಿರಬಹುದು ಎಂದು ನನ್ನ ಪಕ್ಕಾ ಲೆಕ್ಕಾಚಾರದ ಅನಿಸಿಕೆ ಅಭಿಪ್ರಾಯ, ನಮಸ್ಕಾರ ಧನ್ಯವಾದ
ಡಾ.ಅನಸೂಯ, SJCE, Manasa gangotri, Mysuru
ನಮ್ಮಂಥ ಕಿರಿಯರಿಗೆ ಸಕಲರೀತಿ ಪ್ರೋತ್ಸಾಹ ಬೆಂಬಲ ಹಾಗೂ ಮಾರ್ಗದರ್ಶನ
ನೀಡುತ್ತಿರುವ ಹಿರಿಯಣ್ಣ ಗೌರವಾನ್ವಿತ ಕುಮಾರಕವಿ ನಟರಾಜರವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಚಂದನವನ ಚರಿತ್ರೆಯ 5 ಸಂಪುಟಗಳು
ಸೇರಿಸಿದರೆ ಬಹುಶಃ ಇವರ ಪ್ರಕಟಿತ ಕೃತಿಗಳು 50 ದಾಟಿರಬಹುದು ಎಂದು ನನ್ನ ಲೆಕ್ಕಾಚಾರದ ಅನಿಸಿಕೆ-ಅಭಿಪ್ರಾಯ. ನಮಸ್ಕಾರ ಧನ್ಯವಾದ. ಡಾ.ಅನಸೂಯ, SJCE, Manasa gangotri, Mysuru
ನಮ್ಮಂಥ ಕಿರಿಯರಿಗೆ ಸಕಲರೀತಿ ಪ್ರೋತ್ಸಾಹ ಬೆಂಬಲ ಹಾಗೂ ಮಾರ್ಗದರ್ಶನ
ನೀಡುತ್ತಿರುವ ಹಿರಿಯಣ್ಣ ಗೌರವಾನ್ವಿತ ಕುಮಾರಕವಿ ನಟರಾಜರವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಚಂದನವನ ಚರಿತ್ರೆಯ 5 ಸಂಪುಟಗಳು ಸೇರಿಸಿದರೆ ಬಹುಶಃ ಇವರ ಪ್ರಕಟಿತ ಕೃತಿಗಳು 50 ದಾಟಿರಬಹುದು ಎಂದು ನನ್ನ ಲೆಕ್ಕಾಚಾರದ ಅನಿಸಿಕೆ-ಅಭಿಪ್ರಾಯ. ನಮಸ್ಕಾರ ಧನ್ಯವಾದ. ಡಾ.ಅನಸೂಯ, SJCE, Manasa gangotri, Mysuru
ಶ್ರೀ ವಿದ್ಯಾಗಣಪತಿಯ ಪರಮಭಕ್ತರಾದ ನಿಮಗೆ ನಮಸ್ಕಾರ. ಚಂದನವನ ಚರಿತ್ರೆಯ ಸಂಪುಟಗಳು ಬಿಡುಗಡೆಯಾದ ಬಗ್ಗೆ ಅಭಿನಂದನೆ. ಗಣೇಶ ದೇವರ ಕೃಪೆಯಿಂದ ನಿಮಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪುಸ್ತಕ ಬರೆಯುವ ಶಕ್ತಿದೊರಕಿ ಶುಭವಾಗಲಿ. ಅನಂತು, ಅರ್ಚಕರು, ಶ್ರೀದೇವರುಗಳ ತಾರೇಮರ ದೇವಾಲಯ, ಹೆಚ್.ಬ್ಲಾಕ್, ರಾಮಕೃಷ್ಣನಗರ, ಮೈಸೂರು.
ಶ್ರೀ ವಿದ್ಯಾಗಣಪತಿಯ ಪರಮಭಕ್ತರಾದ ನಿಮಗೆ ನಮಸ್ಕಾರ. ಚಂದನವನ ಚರಿತ್ರೆಯ ಸಂಪುಟಗಳು ಬಿಡುಗಡೆಯಾದ ಬಗ್ಗೆ ಅಭಿನಂದನೆ. ಗಣೇಶ ದೇವರ ಕೃಪೆಯಿಂದ ನಿಮಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪುಸ್ತಕ ಬರೆಯುವ ಶಕ್ತಿದೊರಕಿ ಶುಭವಾಗಲಿ. ಅನಂತು, ಅರ್ಚಕರು, ಶ್ರೀ ತಾರೇಮರ ದೇವಾಲಯ, ಹೆಚ್.ಬ್ಲಾಕ್, ರಾಮಕೃಷ್ಣನಗರ, ಮೈಸೂರು.
Amazing and excellent work on Kannada film industry SANDALWOOD 👏 👌 👍. 5 volumes of chandanavana charitre is really a milestone for any author to complete and release at once, rather at a time. So, my heartfelt congratulations 🎊 👏 to you sir 🙏 ❤
HEMALATHA, senior officer, ITDC, Pune, MAHARASHTRA
Amazing and excellent work on Kannada film industry SANDALWOOD 👏 👌 👍. 5 volumes of chandanavana charitre is really a milestone for any author to complete and release at once, rather at a time. So, my heartfelt congratulations 🎊 👏 to you sir 🙏 ❤ HEMALATHA, Former senior administration officer, ITDC, Pune, MAHARASHTRA
ಚಂದನವನ ಚರಿತ್ರೆಯ ಐದು ಸಂಪುಟ ಲೋಕಾರ್ಪಣೆ ಸುದ್ದಿಯನ್ನು ಓದಿದ ನಂತರ whatsapp ಮೂಲಕ ಕುಮಾರಕವಿಯವರಿಗೆ ಕಳಿಸಿದ್ದೇನೆ……
“Wow sir God bless you 👏🏼👏🏼🤗” ಶ್ರೀಮತಿ ಫ್ಯಾನ್ಸಿ ಮುತ್ತಣ್ಣ
ಲೇಖಕಿ ಮತ್ತು ನಿಕಟಪೂರ್ವ ಕ.ಸಾ.ಪ.ಅಧ್ಯಕ್ಷೆ
ಚಂದನವನ ಚರಿತ್ರೆಯ ಐದು ಸಂಪುಟ ಲೋಕಾರ್ಪಣೆ ಸುದ್ದಿಯನ್ನು ಓದಿದ ನಂತರ whatsapp ಮೂಲಕ ಕುಮಾರಕವಿಯವರಿಗೆ ಕಳಿಸಿದ್ದೇನೆ ಹೀಗೆ:-
“Wow sir God bless you 👏🏼👏🏼🤗” ಶ್ರೀಮತಿ ಫ್ಯಾನ್ಸಿ ಮುತ್ತಣ್ಣ
ಲೇಖಕಿ ಮತ್ತು ನಿಕಟಪೂರ್ವ ಕ.ಸಾ.ಪ.ಅಧ್ಯಕ್ಷೆ
ನನ್ನ ಆತ್ಮೀಯ ಸ್ನೇಹಿತ ಕುಮಾರಕವಿ ನಟರಾಜ ರವರ ಚಂದನವನ ಚರಿತ್ರೆಯ ಐದು ಸಂಪುಟಗಳು ಏಕಕಾಲದಲ್ಲಿ ಲೋಕಾರ್ಪಣೆ ಆಗಿರುವುದು ವಿಶೇಷ. ಅವರ ದಶಕಗಳ ಪರಿಶ್ರಮವು ಕಡೆಗೂ ಫಲ ನೀಡಿರುವುದು ಸಂತಸದ ಸಂಗತಿ,
ನಾಡಿನ ಓರ್ವ ಹಿರಿಯ ಸಾಹಿತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಪ್ರೊ.ಕೆ.ವಿ.ಸೀತಾರಾಮಯ್ಯ, ನಿವೃತ್ತ ಪ್ರಾಂಶುಪಾಲ, ಕೌಂಡಿನ್ಯ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು.
ನನ್ನ ಆತ್ಮೀಯ ಸ್ನೇಹಿತ ಕುಮಾರಕವಿ ನಟರಾಜ ರವರ ಚಂದನವನ ಚರಿತ್ರೆಯ ಐದು ಸಂಪುಟಗಳು ಏಕಕಾಲದಲ್ಲಿ ಲೋಕಾರ್ಪಣೆ ಆಗಿರುವುದು ವಿಶೇಷ. ಅವರ ದಶಕಗಳ ಪರಿಶ್ರಮವು ಕಡೆಗೂ ಫಲ ನೀಡಿರುವುದು ಸಂತಸದ ಸಂಗತಿ,
ನಾಡಿನ ಓರ್ವ ಹಿರಿಯ ಸಾಹಿತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಪ್ರೊ.ಕೆ.ವಿ.ಸೀತಾರಾಮಯ್ಯ,ನಿವೃತ್ತ ಪ್ರಾಂಶುಪಾಲರು, ಕೌಂಡಿನ್ಯ ಪ್ರಥಮ ದರ್ಜೆ ಕಾಲೇಜ್, ಬೆಂಗಳೂರು.
Kumarakavi B.N.Nataraj ravaru barediruva(Sandalwood Story) chandanavana charitre 5 volumes release at a time nanage ascharya mattu santosha eradoo agide. Because, Pustakavannu kolluvavaroo mattu oduvavaroo bahala durlabhya aguttiruva ee kaaladalli lekhakara ee dhairya mattu sahasada prayatna success agali endu manasaare haaraisuttene, all the very best Natraj sir.
Sathyanarayana, rtd. Supdt. Mysore University,
Kumarakavi B.N.Nataraj ravaru barediruva(Sandalwood Story) chandanavana charitre 5 volumes release at a time nanage ascharya mattu santosha eradu agide. Because, Pustakavannu kolluvavaroo mattu oduvavaroo bahala durlabha agiruva ee kaaladalli lekhakara dhairya mattu sahasa mechchabekadde. Ivara uttama prayatna success agali endu manasare haraysuttene, all the very best Natraj sir.
Sathyanarayana, Rtd. Supdt. Mysore University, Mysuru