LatestMysore

ಕೇಂದ್ರ ಸರ್ಕಾರದಿಂದ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಮಂಡನೆ

ಮೈಸೂರು: ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಮಂಡಿಸಿದೆ ಎಂದು  ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಆಗಿದೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು,  ರೈತ ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿ ಕಾಯ್ದೆಯ ಜಾರಿ ಬಗ್ಗೆ ಕ್ರಮ ಕೈಗೊಂಡಿಲ್ಲ  ಎಂ ಎಸ್ ಸ್ವಾಮಿ ನಾಥನ್ ವರದಿ ಜಾರಿಯ ಬಗ್ಗೆ ಕ್ರಮ ಕೈಗೊಂಡಿಲ್ಲ. ರೈತರ ಸಾಲ ಮನ್ನಾದ ಪ್ರಸ್ತಾಪವಿಲ್ಲ ಕೃಷಿ ಸಾಲದ ನೀತಿ, ರೈತನ ಹೊಲದಲ್ಲಿನ ಕಬ್ಬಿನ ದರದ ಬಗೆ ಪ್ರಸ್ತಾಪವಿಲ್ಲ.  ರೈತರಬೆಳೆ ವಿಮೆ ನೀತಿಯು ವೈಯಕ್ತಿಕ ವಿಮೆ  ರೀತಿ ಜಾರಿಗೆ ತರಬೇಕಾಗಿತ್ತು ರೈತರ ಕೃಷಿ ಉತ್ಪನ್ನಗಳನ್ನು  ವರ್ಷಪೂರ್ತಿ ಖರೀದಿ ಕೇಂದ್ರಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ  ಎಂದು ಬೇಸರ ವ್ಯಕ್ತ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಬೆಲೆಕುಸಿತವಾದಾಗ ಖರೀದಿ ಮಾಡುವ ಯೋಜನೆಯನ್ನು ಪ್ರಕಟಣೆ ಮಾಡಿಲ್ಲ.  ಕೇವಲ ತೆಂಗು, ಗೋಡಂಬಿ ಶ್ರೀಗಂಧ ಬೆಳೆಗೆ ಮಾತ್ರ ವಿಶೇಷ ಗಮನಹರಿಸಿ ರೈತರ ಮೂಗಿಗೆ ತುಪ್ಪ ಸವರೋ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಅವರು ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want