Mysore

ಶರಣರ ಚಿಂತನೆಗಳನ್ನು ಜಗತ್ತಿನಾದ್ಯಂತ ಪ್ರಸರಿಸಿದವರು ಮಡಿವಾಳ ಮಾಚಿ ದೇವರು: ಸಿದ್ದನಕೊಪ್ಪಲು ಕುಮಾರ್

ಕೆ.ಆರ್.ನಗರ(ಜಿಟೆಕ್ ಶಂಕರ್): ಸಮಾಜದಲ್ಲಿ ಜಾತಿಯ‌ ಎಲ್ಲೆಯನ್ನು ಮೀರಿ ಸರ್ವರಿಗೂ ಜಾತ್ಯಾತೀತ ಸಂದೇಶ ಸಾರಿ ಶರಣರ  ಚಿಂತನೆಗಳನ್ನು ಜಗತ್ತಿನಾದ್ಯಂತ ಪ್ರಸರಿಸಿದ ಮಡಿವಾಳ ಮಾಚಿ ದೇವರು ಆದರ್ಶ ಪುರುಷ ಎಂದು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಸಿದ್ದನಕೊಪ್ಪಲು ಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ವೀರ ಮಡಿವಾಳ ಮಾಚೀದೇವರದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶರಣರಲ್ಲಿ ಅಗ್ರಗಣ್ಯರಾಗಿದ್ದ ಅವರು ಸಮಾಜದಲ್ಲಿ ತುಳಿತಕ್ಕೊಳ್ಳಗಾಗಿದ್ದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸಲು ದುಡಿದ ಮಹಾನ್ ವ್ಯಕ್ತಿ ಎಂದರು.

ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ವಚನಗಳನ್ನು ರಚಿಸಿ ಆ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಲು ದುಡಿದ ಅವರು ತಳ‌ಮಟ್ಟದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ದುಡಿದ ಯುಗ ಯೋಗಿ ಎಂದು ನುಡಿದರು. ಆಧ್ಯಾತ್ಮೀಯ ಶೋಷಣೆಗೆ ಒಳಗಾಗಿದ್ದ ವ್ಯಕ್ತಿ ಗಳ ಬಗ್ಗೆ ಚಿಂತಿಸಿ ಮನುಷ್ಯರ ನಡುವಿನ ಅಂತರ ಓಡಿಸಲು ಪ್ರಾಮಾಣಿಕ ವಾಗಿ ಕೆಲಸ ಮಾಡಿದ ಮಹಾನ್ ಪುರುಷ ಎಂದು ಕೊಂಡಾಡಿದರು.

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ಸಮಾಜ ಸುಧಾರಕರು ಮತ್ತು ಸಂತರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಅವರ ಜೀವನದ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸುಂದರವಾದ ಬದುಕು ನಡೆಸಬಹುದು ಎಂದು‌ ಸಲಹೆ ನೀಡಿದರು.

ಸಾಲಿಗ್ರಾಮ ತಾಲೂಕು ಅಧ್ಯಕ್ಷ ಹರ್ಷವರ್ಧನ್, ಕೆ ಆರ್ ನಗರ ಟೌನ್ ಅಧ್ಯಕ್ಷ ಕಟ್ಟೆ ಕುಮಾರ್ ,  ಸಮಾಜದ ಮುಖಂಡರಾದ ಬೋರ ಶೆಟ್ಟಿ, ಕೃಷ್ಣಯ್ಯ, ಪುರುಷೋತ್ತಮ್, ಮಂಡಿದರ್ಶನ್,  ಕೆಂಚಿಮಂಜು, ಪ್ರಕಾಶ್, ಶಿವಣ್ಣ, ವರದರಾಜು, ಸಂತೋಷ್, ಮಹದೇವ  ಸೇರಿದಂತೆ ಸಮಾಜದ ಮುಖಂಡರು, ತಾಲೂಕು‌ ಮಟ್ಟದ ಅಧಿಕಾರಿಗಳು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want