ಕೊತ್ತಲವಾಡಿ ಮಾರಮ್ಮನ ಜಾತ್ರೆಯಲ್ಲಿ ಪ್ರಭು ಲಿಂಗಲೀಲೆ ಅಥವಾ ಅಲ್ಲಮ ಶರಣ ಸಂದರ್ಶನ ನಾಟಕ ಪ್ರದರ್ಶನ

ಮೈಸೂರು: ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದಲ್ಲಿ ಗ್ರಾಮ ದೇವತೆ ಮಾರಮ್ಮನ ಏಳು ದಿನಗಳು ಜಾತ್ರಾ ಮಹೋತ್ಸವದ ಅಂಗವಾಗಿ ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ವತಿಯಿಂದ ಗ್ರಾಮಸ್ಥರ ಮನವಿ ಮೇರೆಗೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಕೃಪಾಶೀರ್ವಾದದ ಅನುಮತಿ ಹಿನ್ನಲೆಯಲ್ಲಿ ಪ್ರಭು ಲಿಂಗಲೀಲೆ ಅಥವಾ ಅಲ್ಲಮ ಶರಣ ಸಂದರ್ಶನ ನಾಟಕ ಪ್ರದರ್ಶನ ನಡೆಸಲಾಯಿತು.
ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಲಾ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಕಲ್ಮಳ್ಳಿ ನಟರಾಜು ಅವರು, ಶರಣಧರ್ಮ ಮನುಕುಲದ ಧರ್ಮವಾಗಿದೆ. ಸಾವಿರ ವರ್ಷಗಳ ಹಿಂದೆಯೇ ಜಗತ್ತಿನಲ್ಲಿ ಯಾರು ಊಹಿಸಲು ಅಸಾಧ್ಯವಾದ ಮಹತ್ವದ ಸಾಮಾಜಿಕ ಪ್ರಜಾಪ್ರಭುತ್ವದ ಚಳವಳಿ ಘಟಿಸಿ ಬಹು ದೊಡ್ಡ ಕರ್ನಾಟಕ ಮಾನವ ಧರ್ಮದ ಕ್ರಾಂತಿಗೆ ಸಾಕ್ಷಿಯಾಯಿತು.

ಇದರ ಮೂಲ ಬೇರು ನಿಜಾರ್ಥದಲ್ಲಿ ಬಸವಣ್ಣ. ಹಾಗಾಗಿಯೇ ಬಸವಣ್ಣನ ವ್ಯಕ್ತಿತ್ವವನ್ನು ವಿಶ್ವದ ದಾರ್ಶನಿಕರು ತಮ್ಮ ವ್ಯಾಖ್ಯಾನಕ್ಕೆ ತಕ್ಕಂತೆ ಕ್ರಾಂತಿಕಾರಿ, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ನೇತಾರ ಸ್ತ್ರೀ ಸ್ವತಂತ್ರ ಪ್ರತಿಪಾದಕ ಸಮಾನತೆಯ ಹರಿಕಾರ, ವಿವಿಧ ರೀತಿಯಲ್ಲಿ ಅರ್ಥೈಸಿ ಕೊಂಡು ಒಟ್ಟಾರೆ ವಿಶ್ವದ ಎಲ್ಲ ಧರ್ಮಗಳ ಸಾರವನ್ನು ಶರಣರ ವಚನಗಳು ಹೊಂದಿರುವ ಕಾರಣ ವಿಶ್ವಧರ್ಮ ಎಂದರೂ ತಪ್ಪಾಗಲಾರದು ಎಂದರು.
ಪೌರಾಣಿಕ ಕಥೆಗಳು ಕಾಲ್ಪನಿಕ ಆದರೆ ಶರಣರ ಬದುಕು ಐತಿಹಾಸಿಕ ಅದನ್ನು ಸಾಕ್ಷಿಕರಿಸುವಂತೆ ವಚನಗಳು ಜೀವಂತವಾಗಿವೆ. ಬಸವಣ್ಣ ತನ್ನದೊಂದು ವಚನದಲ್ಲಿ ನುಡಿದಂತೆ ನಡೆ ನರಜನ್ಮಕಡೆ ಮಾತಿನಂತೆ ಮನವಿಲ್ಲದವನ ಜೀವನ ಡೊಂಬರ ಆಟದಂತೆ ಶರಣರ ನಡೆ ನುಡಿ ಎರಡು ಒಂದೇ ಆಗಿದ್ದವು. ನಮ್ಮದು ನಡೆಯಿಲ್ಲದ ನುಡಿಯಾಗಿದೆ ಹಾಗಾಗಿ ನಾವು ಕೇವಲ ಮನುಷ್ಯರಾಗಿದ್ದೇವೆ. ಅಂತರಂಗ ಬಹಿರಂಗ ಶುದ್ಧಿಯವ ಲೋಕದ ಕಣ್ಣಿಗೆ ದೇವನಾಗಿ ಕಾಣುತ್ತಾನೆ. ಬಸವಣ್ಣ ತನ್ನೆಡೆಗೆ ಬಂದ ಎಲ್ಲರನ್ನೂ ವರ್ಗ, ವರ್ಣ, ಜಾತಿ, ಲಿಂಗ ಯಾವುದನ್ನು ಪರಿಗಣಿಸದೆ ಪ್ರೀತಿ ಕರುಣೆ ನೀಡಿದ ನೊಂದವರ ಪರವಾಗಿ ನಿಂತು ಆತ್ಮ ಸ್ಥೈರ್ಯ ತುಂಬಿದವರು.

ಆ ಕಾರಣಕ್ಕೆ ಕಣ್ಣಿಗೆ ಕಾಣುವ ದೇವರಾದ ಅನುಭವ ಮಂಟಪ ಕಟ್ಟಿ ಎಲ್ಲರ ಧ್ವನಿಗೂ ಧ್ವನಿಯಾದ ಸರ್ವರೊಳಗೊಂಡ ಅಂದಿನ ಅನುಭವ ಮಂಟಪವೆ ವಿಶ್ವದ ಪ್ರಜಾಪ್ರಭುತ್ವಕ್ಕೆ ಅಡಿ ಗಲ್ಲಾಗಿದೆ. ಹೀಗಾಗಿ ಈ ನಾಟಕ ಪಾತ್ರಗಳ ಪ್ರದರ್ಶನವಾಗದೆ ಶರಣರ ಬದುಕಿನ ಜ್ವಲಂತ ನಿದರ್ಶನವಾಗಿದೆ. ಆ ಹಾದಿಯಲ್ಲಿ ಸಾಗಿದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಲಕ್ಷಾಂತರ ಜನರ ಬಾಳಿಗೆ ಬೆಳಕಾಗುವ ಮೂಲಕ ದೇವರಾಗಿದ್ದಾರೆ. ಇದನ್ನೇ ಜೀವ ಶಿವನಾಗುವ ಬಗೆ ಎಂದು ಅವರ ಸಾಧನೆ ನಮ್ಮಂತಹವರಿಗೆ ಅವರ ಬದುಕು ಆದರ್ಶ ಅಷ್ಟೇ ಅಲ್ಲದೆ ಸ್ಪೂರ್ತಿಯಾದರೆ ನಮ್ಮ ನರ ಜನ್ಮವನ್ನು ಸಾರ್ಥಕ ಮಾಡಿ ಕೊಳ್ಳಬಹುದು.

ತಾವು ಆಧುನಿಕ ಜಂಜಾಟದ ಜೀವನದ ನೋವುಗಳಿಂದ ಹೊರ ಬಂದು ಹತ್ತಾರು ವಚನಗಳನ್ನು ಓದಿದರೆ ನಮ್ಮ ಅಂತಃ ಶಕ್ತಿ ಎಚ್ಚೆತ್ತು ಕೊಳ್ಳುತ್ತದೆ ದ್ವೇಷ ಅಸೂಯೆ ಕೊನೆ ಗೊಳಿಸಿ ದೇವರನ್ನು ಹೊರಗೆ ಹುಡುಕುವ ಬದಲು ನಮ್ಮಲ್ಲೇ ಕಂಡು ಕೊಳ್ಳಬಹುದು ಎಂದರು
ಕಾರ್ಯಕ್ರಮದಲ್ಲಿ ಹರವೆ ಮಠದ ಶ್ರೀಗಳಾದ ಶ್ರೀ ಸರ್ಪಭೂಷಣ ಸ್ವಾಮಿಗಳು, ಚಾಮರಾಜನಗರದ ವಿರಕ್ತ ಮಠದ ಶ್ರೀಗಳಾದ ಶ್ರೀ ಚೆನ್ನಬಸವ ಸ್ವಾಮೀಜಿ, ಕೊತ್ತಲವಾಡಿ ಶ್ರೀ ಗುರು ಮಲ್ಲೇಶ್ವರ ಮಠದ ಶ್ರೀಗಳು ಮತ್ತು ಗ್ರಾಮದ ಗೌಡಿಕೆ ರಾಜಶೇಖರ್, ಮುಖಂಡರಾದ ಶಾಂತಪ್ಪ ಸೋಮಯ್ಯ ಸೋಮಲಿಂಗಪ್ಪ ಗುರುಸ್ವಾಮಿ ಮರಪ್ಪ ಶಿವ ಮಲ್ಲಪ್ಪ ಕುಮಾರ್, ಸಿದ್ದ ಮಲ್ಲಪ್ಪ ಮಹದೇವಸ್ವಾಮಿ ನಂದೀಶ್ ರಾಜೇಂದ್ರ ಡಾ ಕೆ ವಿ ಯೋಗೇಶ್ ಕುಮಾರ್ ಆರಾಧ್ಯ ಕಲಾ ಬಳಗದ ಪದಾಧಿಕಾರಿಗಳಾದ ಮಾಲಂಗಿ ಸುರೇಶ್ ಪರಮೇಶ್ ಮಾಸ್ಟರ್ ಅನಿಲ್ ಕುಮಾರ್ ಪ್ರಶಾಂತ್

ಸಮಾಜ ಸೇವಕ ಮಲ್ಲು ಪಾತ್ರ ಪಾತ್ರಧಾರಿಗಳಾದ ಪರ್ವತಪ್ಪ ಮುಳ್ಳೂರು ಪ್ರಭುಸ್ವಾಮಿ ತಳೂರು ಗುರು ಕೊಡಗಾಪುರ ಕೆಬ್ಬೆ ಹುಂಡಿ ಶಿವಕುಮಾರ್ ಮಲ್ಲಣ್ಣ ಸಿದ್ಧರಾಮೇಶ್ ಮಂಜಣ್ಣ ಮಹದೇವಸ್ವಾಮಿ ಚೇತನ್ ಕುಮಾರ್ ಬಾಗಳಿ ಮಹೇಶ್ ಸಂತೋಷ್ ಬಾನಹಳ್ಳಿ ಮಹೇಶ್ ಸಿದ್ದಲಿಂಗ ಸ್ವಾಮಿ ಗುರುಪಾದು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.







