ಒಳಮೀಸಲಾತಿಯಲ್ಲಿ ಅನ್ಯಾಯ ವಿರೋಧಿಸಿ ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆಗೆ ನಿರ್ಧಾರ
ಫೆ.27ರಂದು ಬೆಳಿಗ್ಗೆ 10ಕ್ಕೆ ಕೆಆರ್ ನಗರದಲ್ಲಿ ಪ್ರತಿಭಟನೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಒಳಮೀಸಲಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ಪ್ರತಿಭಟಿಸಿ ಫೆ.27ರಶುಕ್ರವಾರ ಪಟ್ಟಣದಲ್ಲಿ ಜಿ.ಪಂ.ಮಾಜಿ ಸದಸ್ಯ ಅಚ್ಚುತಾನಂದರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಪಟ್ಟಣದ ಸರಕಾರಿ ನೌಕರರಭವನದಲ್ಲಿ ಕರೆಯಲಾಗಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಸಮಾಜದ ಹಲವಾರು ಮುಖಂಡರು ಸಲಹೆಯೊಂದಿಗೆ ಚರ್ಚಿಸಿ ಈಕುರಿತು ಅಂತಿಮ ತೀರ್ಮಾನ ಕೈಗೊಂಡರು. ಫೆ.27ರಶುಕ್ರವಾರ ಬೆಳಿಗ್ಗೆ 10ಗಂಟೆಗೆ ಪಟ್ಟಣದ ಮೈಸೂರುರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಮಾಜದ ಭಾಂದವರೊಂದಿಗೆ ಬೃಹತ್ ಪ್ರತಿಭಟನೆಯೊಂದಿಗೆ ತಾಲೂಕುಕಛೇರಿಗೆ ತೆರಳಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.

ಅಂದಿನ ಹೋರಾಟಕ್ಕೆ ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲೂಕಿನ ಬಲಗೈ ಸಮಾಜದ ಎಲ್ಲ ಮುಖಂಡರು, ಪುರಸಭೆ, ಜಿ.ಪಂ, ತಾ.ಪಂ, ಗ್ರಾ.ಪಂ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಮುಖಂಡರು ಈ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪ್ರಚಾರಕಾರ್ಯ ಕೈಗೊಂಡು ಸಮಾಜದ ಭಾಂದವರು ಸಮಾಜಕ್ಕೆಆಗಿರುವ ಅನ್ಯಾಯದ ವಿರುದ್ದ ಹೋರಾಡಲು ತಪ್ಪದೆ ಭಾಗವಹಿಸುವಂತೆ ಮಾಡಿ ಎಂದು ಮನವಿ ಮಾಡಿದರು.
ನಮ್ಮ ಹೋರಾಟ ಇಂದಿನ ಹಾಗೂ ಭವಿಷ್ಯದ ನಮ್ಮ ಸಮಾಜದ ಯುವಕರು, ಯುವತಿಯರು ಮತ್ತು ಸಮಾಜದ ಭಾಂದವರಿಗೆ ನ್ಯಾಯ ಒದಗಿಸುವುದಾಗಿದ್ದು ಎಲ್ಲರೂ ಪಕ್ಷಾತೀತಿವಾಗಿ ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಸಮಾಜಕ್ಕೆ ನ್ಯಾಯ ದೊರಕಿಸುವ ಕೆಲಸಕ್ಕೆ ಕೈಜೋಡಿಸುವಂತೆ ಕರೆನೀಡಿದರು.

ಸಭೆಯಲ್ಲಿ ಜಿ.ಪ.ಮಾಜಿ ಸದಸ್ಯ ಅಚ್ಚುತಾನಂದ, ಮುಖಂಡರಾದ ಹನಸೋಗೆನಾಗರಾಜ್, ಹಂಗರಬಾಯನಹಳ್ಳಿ ತಮ್ಮಣ್ಣ, ಡಾ.ರಾಮಚಂದ್ರ, ದೊಡ್ಡಯ್ಯ, ಚಂದಗಾಲುರಾಚಯ್ಯ, ಮೂಲೆಪೆಟ್ಲು ಶೇಖರ್, ಗೀತಾಮಹೇಶ್, ಹೊಸಕೋಟೆ ಚಲುವರಾಜ್, ಹಂಪಾಪುರ ಸುರೇಶ್, ಹೊಸಅಗ್ರಹಾರ ವೆಂಕಟೇಶ್, ಸಂಪತ್, ಹನಸೋಗೆ ಮಂಜು, ಗಂಗೋತ್ರಿ ಗೋಪಿ, ಮೋಹನ್, ಪುಟ್ಟಣ್ಣಯ್ಯ, ಕೃಷ್ಣ, ಬಿ.ಟಿ.ಗೋವಿಂದರಾಜು, ಮಹದೇವಸ್ವಾಮಿ ಸೇರಿದಂತೆ ಸಮಾಜದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.







