janamanakannada > Blog > Latest > Mysore > ಪೆನ್ಸಿಲ್ ನಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಚಿತ್ರಬರೆದು ಶ್ರೀಗಳ ಮೆಚ್ಚುಗೆಗೆ ಪಾತ್ರರಾದ ಮೈಸೂರಿನ ಎಸ್.ಊಹಾ…
ಪೆನ್ಸಿಲ್ ನಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಚಿತ್ರಬರೆದು ಶ್ರೀಗಳ ಮೆಚ್ಚುಗೆಗೆ ಪಾತ್ರರಾದ ಮೈಸೂರಿನ ಎಸ್.ಊಹಾ…
adminಫೆಬ್ರವರಿ 23, 2026

ಮೈಸೂರಿನ ಅಗ್ರಹಾರದ ಉತ್ತರಾಧಿ ಮಠದ ರಸ್ತೆಯಲ್ಲಿರುವ ಕೆ.ಶ್ರೀನಿವಾಸ್ ಮತ್ತು ಎಸ್.ಅನುರಾಧ ದಂಪತಿ ಪುತ್ರಿ ಎಸ್.ಊಹಾ ಅವರು ಮೈಸೂರಿನ ಸಚ್ಚಿದಾನಂದ ಆಶ್ರಮದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಚಿತ್ರವನ್ನು ಪೆನ್ಸಿಲ್ ನಲ್ಲಿ ಬಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಆ ಚಿತ್ರವನ್ನು ಶ್ರೀಗಳಿಗೆ ಸಮರ್ಪಿಸಿ ಅವರ ಮೆಚ್ಚುಗೆ ಗಳಿಸಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ವಿಶ್ವದಲ್ಲಿಯೇ ಗಮನಸೆಳೆದಿರುವ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮವು ಮೈಸೂರಿಗೊಂದು ಹೆಮ್ಮೆಯಾಗಿದೆ. ಇಲ್ಲಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ನಿರ್ಮಿಸಿರುವ ಬೋನ್ಸಾಯ್ ಗಾರ್ಡನ್, ಶುಕವನ, ಬೃಹತ್ ಆಂಜನೇಯನ ಮೂರ್ತಿ, ವೆಂಕಟೇಶ್ವರ ದೇಗುಲ, ನಾದಮಂಟಪ, ವಸ್ತುಸಂಗ್ರಹಾಲಯ ಹೀಗೆ ಹತ್ತು ಹಲವು ವಿಶೇಷಗಳನ್ನು ಇಲ್ಲಿ ಕಾಣಬಹುದಾಗಿದೆ

ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್.. ಏನಿದರ ವಿಶೇಷ?
Tags:mysore news
admin







