LatestMysore

ಹುಲ್ಲೇನಹಳ್ಳಿಯಲ್ಲಿ ಶಾಸಕ ಹರೀಶ್ ಗೌಡರ ಪತ್ನಿ ವರ್ಷಾರಿಂದ ಶ್ರೀ ಮಹರ್ಷಿ ವಾಲ್ಮೀಕಿ ಮಂಟಪ, ಪುತ್ಥಳಿ ಅನಾವರಣ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಹುಲ್ಲೇನಹಳ್ಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದಿಂದ ನಿರ್ಮಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಮಂಟಪ ಮತ್ತು ಪುತ್ಥಳಿಯನ್ನುಶಾಸಕ ಜಿ.ಡಿ.ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್‌ ಗೌಡ ಅನಾವರಣಗೊಳಿಸಿದರು.

ನಂತರ ಮಾತನಾಡಿ, ಗ್ರಾಮದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ ಗೌರಿಶಂಕರ್ (ಮಧುಬಿಳಿಕೆರೆ), ಶಿವ ಶಂಕರ್ ಅವರೊಂದಿಗೆ ಜಿ.ಡಿ. ಹರೀಶ್‌ ಗೌಡ ಅವರು ಮತ್ತು ನನ್ನ ಸಹಕಾರ ಸದಾ ಇರಲಿದೆ ಎಂದು ಹೇಳಿದರು.

ತಾಲೂಕು ನಾಯಕರ ಸಂಘದ ಅಧ್ಯಕ್ಷ ಕೆ. ಎಸ್.ಅಣ್ಣಯ್ಯನಾಯಕ ಮಾತನಾಡಿ, ಗ್ರಾಮದಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಮಂಟಪ ಮತ್ತು ವುತ್ಥಳಿ ಅತ್ಯಂತ ಸುಂದರವಾಗಿ ಮೂಡಿಬಂದಿದ್ದು, ಜಿಲ್ಲೆಯಲ್ಲಿ ಎಲ್ಲಿಯೂ ಈ ರೀತಿಯ ಮಂಟಪ ಮತ್ತು ಪುತ್ಥಳಿ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

15 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣ: ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಂಟಪ ಮತ್ತು ಪುತ್ಥಳಿಯನ್ನು ನಿರ್ಮಿಸಿ ಕೊಡುವಂತೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಸದಸ್ಯರು ಮನವಿ ಮಾಡಿದ್ದ ಹಿನ್ನೆಲೆ ಬಿಳಿಕೆರೆ ಗ್ರಾಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಪರಮೇಶ್ವರ್ ಹಾಗೂ ಅವರ ಪುತ್ರರಾದ ಗೌರಿಶಂಕರ್, ಗ್ರಾಪಂ ಮಾಜಿ ಅಧ್ಯಕ್ಷಶಿವಶಂಕರ್ ಅವರು 15 ಲಕ್ಷರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಮಂಟಪ ಮತ್ತು ಪುತ್ಥಳಿ ನಿರ್ಮಿಸಿ ಕೊಟ್ಟಿದ್ದಾರೆ. ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಪರಮೇಶ್ವರ್ ಹಾಗೂ ಗೌರಿಶಂಕರ್, ಶಿವಶಂಕರ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸುರೇಂದ್ರ, ಪ್ರಧಾನ ಕಾರ್ಯದರ್ಶಿ ಹರವೆ ಶ್ರೀಧರ್, ಕಾರ್ಯಾಧ್ಯಕ್ಷೆ ರಂಜಿತಾ ಚಿಕ್ಕಮಾದು, ರಾಜ್ಯ ಅಹಿಂದ ಅಧ್ಯಕ್ಷ ದ್ಯಾವಪ್ಪನಾಯಕ, ಜಿಪಂ ಮಾಜಿ ಸದಸ್ಯ ಗಾವಡಗೆರೆ ದೇವರಾಜ್ ಇತರರಿದ್ದರು.

admin
the authoradmin

Leave a Reply

Translate to any language you want