CinemaLatest

ಮೈಸೂರಿನ ನಾರಾಯಣ ಸ್ವಾಮಿ ಚಂದನವನದಲ್ಲಿ ಶ್ರೀನಾಥ್ ಆಗಿ ಕನ್ನಡದ ಜನಮನ ಗೆದ್ದಿದ್ದು ಹೇಗೆ?

ಪ್ರಣಯರಾಜ ಶ್ರೀನಾಥ್ ಅವತ್ತಿನಿಂದ ಇವತ್ತಿನವರೆಗೂ ಗಮನಸೆಳೆಯುವ ನಟ… ಇವರ ನಟನೆಯನ್ನು ಮೆಚ್ಚದವರಿಲ್ಲ.. ಸದಾ ಚಟುವಟಿಕೆಯಲ್ಲಿರುವ ಈ ನಟ ಸ್ಯಾಂಡಲ್ ವುಡ್ ನ ಹೆಮ್ಮೆಯಾಗಿದ್ದಾರೆ.. ಇವರ ಸಿನಿಮಾ ಬದುಕು ಮತ್ತು ಅವರು ನಟಿಸಿದ ಅಷ್ಟು ಸಿನಿಮಾಗಳ ಪರಿಚಯವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಮ್ಮ ಓದುಗರಿಗೆ ಮಾಡಿಸಿದ್ದಾರೆ… ಒಮ್ಮೆ ಓದಿ ಅಭಿಪ್ರಾಯ ತಿಳಿಸಿ…

ಇದನ್ನೂ ಓದಿ: ಮೈಸೂರಿನ ಸಂಪತ್ ಕುಮಾರ್  ಕನ್ನಡಿಗರ ವಿಷ್ಣುವರ್ಧನ್ ಆಗಿದ್ದೇಗೆ…? 

28.12.1943 ರಂದು ಮೈಸೂರಿನ ರಾಮಸ್ವಾಮಿ ಶಾಸ್ತ್ರಿ ಮತ್ತು ಲಲಿತಮ್ಮ ದಂಪತಿಯ ಪುತ್ರನಾಗಿ ನಾರಾಯಣಸ್ವಾಮಿ ಜನಿಸಿದರು. ಪೋಷಕರ ಇಚ್ಚೆಯಂತೆ ಪದವೀಧರನಾಗಿ ಸರ್ಕಾರೀ ಹುದ್ದೆ ಸೇರುವ ಬದಲು ತಮ್ಮ ಅಣ್ಣ ಸಿ.ಆರ್. ಸಿಂಹ ಸಹವಾಸದಿಂದ ರಂಗಭೂಮಿ ನಟನಾದರು. ನಾಣಿ ಉರುಫ್ ಶ್ರೀನಾಥ್ 1967ರಲ್ಲಿ “ಲಗ್ನಪತ್ರಿಕೆ” ಚಿತ್ರದಲ್ಲಿ ದೊರೆತ ಚಿಕ್ಕ ಪಾತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು.

40ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದರೂ ಸಹ ಜನಪ್ರಿಯತೆ ಗಳಿಸಲು ಸಾಧ್ಯವಾಗಲೇ ಇಲ್ಲ! ಶ್ರೀನಾಥ್ ನಟಿಸಿದ 43ನೇ ಫಿಲಂ ’ಶುಭಮಂಗಳ’ ಚಿತ್ರದಿಂದ ಕ್ಲಿಕ್ ಆದ ಈ ಅಪರೂಪದ ಹೀರೋ ತನ್ನ ಮೊದಲಿನ 42 ಚಿತ್ರಗಳಿಂದ ಗಳಿಸದಿದ್ದ ಕೀರ್ತಿ ಹಣ ಪ್ರಶಸ್ತಿ ಮುಂತಾದುವನ್ನ ಈ ಚಿತ್ರದಿಂದ ಪಡೆದರು. ಎಸ್.ಆರ್.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭಮಂಗಳ ಚಿತ್ರವು ಶ್ರೀನಾಥ್ ಸಿನಿಜೀವನದಲ್ಲಿ ಉತ್ತಮ ಬ್ರೇಕ್ ನೀಡಿ ಇವರಿಗೂ ಪುಟ್ಟಣ್ಣ ಕಣಗಾಲರೇ ಗಾಡ್ ಫಾದರ್ ಎನಿಸಿದ್ದು ಇತಿಹಾಸ?

ಇದನ್ನೂ ಓದಿ:  ಬಂಗ್ಲೆ ಶಾಮಾರಾವ್ ದ್ವಾರಕಾನಾಥ ಚಂದನವನದ ‘ದ್ವಾರಕೀಶ್’ ಆಗಿ ಮೆರೆದಿದ್ದು ಹೇಗೆ?

ಹಲವಾರು ವರ್ಷ ಇವರನ್ನು ಶುಭಮಂಗಳ ಶ್ರೀನಾಥ್ ಎಂದೇ ಗುರ್ತಿಸಲಾಯ್ತು. ಅಂದಿನಿಂದ ಇವರು ಹಿನ್ನಡೆ ಇಲ್ಲದೆ ಸತತ ಮುನ್ನಡೆ ಸಾಧಿಸಿ ಖ್ಯಾತ ನಟನಾಗಿ ಉನ್ನತ ಸ್ಥಾನಮಾನ ಕಂಡರು. ಕಾಲಕ್ರಮೇಣ 300ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ ನಂತರ ಕಳೆದ 22 ವರ್ಷದಿಂದ ಪೋಷಕ ನಟನಾಗಿ ಅಭಿನಯಿಸುತ್ತ ಇವತ್ತಿಗೂ ತಮ್ಮದೇ ಆದ ಜನಪ್ರಿಯತೆ ಕಾಯ್ದುಕೊಂಡು ಬೆಳ್ಳಿತೆರೆ- ಕಿರುತೆರೆ ಎರಡೂ ಇಂಡಸ್ಟ್ರಿಯಲ್ಲಿ ತಮ್ಮ ಮಾರ್ಕೆಟ್ ಉಳಿಸಿಕೊಂಡಿದ್ದಾರೆ?!

ಕನ್ನಡ ಚಿತ್ರಾಭಿಮಾನಿಗಳು ಇವರಿಗೆ ನೀಡಿದ ಮತ್ತೊಂದು ಬಿರುದು ಪ್ರಣಯರಾಜ ಪಟ್ಟಣಕ್ಕೆ ಬಂದ ಪತ್ನಿಯರು, ಕನಸು ನನಸು, ಬೆಸುಗೆ ಮುಂತಾದ 15ಕ್ಕು ಹೆಚ್ಚಿನ ಚಿತ್ರಗಳಲ್ಲಿ ಶ್ರೀನಾಥ್- ಮಂಜುಳ ಸ್ಯಾಂಡಲ್‌ ವುಡ್‌ನ ಅತ್ಯಂತ ಜನಪ್ರಿಯ ತಾರಾಜೋಡಿ ಎನಿಸಿ ಧೀರ್ಘಕಾಲ ಯಶಸ್ವಿಯಾಗಿ ಮೆರೆದರು. ಸರಳ ಸಜ್ಜನಿಕೆ ಗುಣದ, ಕಾಯಕವೆ ಕೈಲಾಸ ಎಂಬುದನ್ನು ನಂಬಿ ಶ್ರದ್ಧೆ ಮತ್ತು ಆಸಕ್ತಿ ಮೈ ಗೂಡಿಸಿಕೊಂಡು ಎಂಥದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುವ ನಿಪುಣ ಕಲಾವಿದ.

 ಇದನ್ನೂ ಓದಿ:  ಕನ್ನಡ ಚಿತ್ರರಂಗದಲ್ಲಿ ನೆನಪಾಗಿ  ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ…

ಯಾವಾಗಲೂ ತಮ್ಮ ಸಹ- ನಟನಟಿಯರ ಜತೆಗೆ ಸ್ನೇಹ ವಿಶ್ವಾಸದಿಂದ ಇರುತ್ತಾರೆ. ತಾವು ಅಭಿನಯಿಸುವ ಪ್ರತಿಯೊಂದು ಚಿತ್ರದ ಆಯಾ ದಿನದ ಶೂಟಿಂಗ್ ನ ಆರಂಭದಿಂದ ಅಂತ್ಯದವರೆಗೆ ಇದ್ದು ಅಥವಾ ಆ ದಿನದ ಪ್ಯಾಕಪ್ ಹೇಳುವವರೆಗೆ ಸೆಟ್‌ ನಲ್ಲಿ ಇದ್ದುಕೊಂಡೇ ತಾಂತ್ರಿಕ ವರ್ಗವೂ ಸೇರಿದಂತೆ ಎಲ್ಲರ ವಿಶ್ವಾಸಗಳಿಸುತ್ತಿದ್ದ ಸಮಚಿತ್ತವುಳ್ಳ ನಟ. ಇವರ ಅನೇಕ ಸಿನಿಮಾಗಳು 50ದಿನ, 100ದಿನ, ಸಿಲ್ವರ್ ಜ್ಯುಬ್ಲಿ ಪ್ರದರ್ಶನ ಕಂಡಿವೆ. ಕರ್ನಾಟಕ ಸರ್ಕಾರದಿಂದ ಶ್ರೇಷ್ಠ ನಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಲಾರತ್ನಪ್ರಶಸ್ತಿ 100 ಚಿತ್ರಗಳನ್ನ ಪೂರೈಸಿದ ಸಂದರ್ಭ 1982ರಲ್ಲಿ ಅಭಿಮಾನಿಗಳು ನೀಡಿದ “ಅಭಿನಯ ಚಕ್ರವರ್ತಿ” ಬಿರುದು ಪುರಸ್ಕೃತ. ಡಾ.ರಾಜಕುಮಾರ್ ಸ್ಮರಣಾರ್ಥ ಪ್ರಶಸ್ತಿ, ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಇನ್ನು ಮುಂತಾದ ಅನೇಕ ಪ್ರಶಸ್ತಿ-ಸನ್ಮಾನ ಬಹುಮಾನ ಪಡೆದಿದ್ದಾರೆ.

ರಾಜ್‌ಕುಮಾರ್ ಕಲ್ಯಾಣಕುಮಾರ್ ಉದಯ ಕುಮಾರ್ ರಾಜೇಶ್ ವಿಷ್ಣುವರ್ಧನ್ ಅಂಬರೀಷ್ ಗೆಂಡೆತಿಮ್ಮ ಲೋಕೇಶ್ ಅನಂತನಾಗ್ ಶಂಕರ ನಾಗ್ ಸಿನಿಮಾದಲ್ಲೂ ಮುಖ್ಯಪಾತ್ರ, 2ನೇ ಹೀರೋ ಆಗಿ ನಟಿಸಿ ಯಶಸ್ವಿ ಆಗಿದ್ದಾರೆ. ಉದಯ ಟಿ.ವಿ. “ಆದರ್ಶ ದಂಪತಿಗಳು” ಸೀರಿಯಲ್ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಇವತ್ತಿಗೂ ಜನಪ್ರಿಯ ಸೆಲಿಬ್ರಿಟಿ ಎನಿಸಿದ್ದಾರೆ. ಇವರ ಸುಪುತ್ರ ಮಾಸ್ಟರ್ ರೋಹಿತ್ “ಜನ್ಮ ಜನ್ಮದ ಅನುಬಂಧ” ಮುಂತಾದ ಹಲವಾರು ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿ ರಾಷ್ಟ್ರ-ರಾಜ್ಯಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ:  ಚಂದನವನದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?

ಶ್ರೀನಾಥ್ ನಟಿಸಿರುವ ಸಿನಿಮಾಗಳು ಹೀಗಿವೆ.. ಲಗ್ನಪತ್ರಿಕೆ(1967),  ಒಂದೇ ಬಳ್ಳಿಯ ಹೂಗಳು, ಬೆಸುಗೆ, ಬದುಕು ಬಂಗಾರವಾಯಿತು, ಮಧುರ ಮಿಲನ, ಚಿರಂಜೀವಿ, ಕಲ್ಪವೃಕ್ಷ, ವಿಜಯವಾಣಿ, ಚಿಕ್ಕಮ್ಮ, ತುಳಸಿ, ಭಲೇಕಿಲಾಡಿ, ಕನಸು ನನಸು, ಅರಿಶಿನ ಕುಂಕುಮ,  ಇದು ನಮ್ಮದೇಶ, ಅನಿರೀಕ್ಷಿತ, ಅಪೂರ್ವ ಕನಸು, ರಂಗಮಹಲ್ ರಹಸ್ಯ, ಸೂತ್ರದ ಬೊಂಬೆ, ಠಕ್ಕ ಬಿಟ್ರೆ ಸಿಕ್ಕ, ಅಪರಾಧಿ, ಮೃತ್ಯು ಪಂಜರದಲ್ಲಿ ಗೂಢಚಾರಿ-555, ಮೂರು ಮುತ್ತುಗಳು,  ದೇವರ ದುಡ್ಡು, ಶ್ರೀರೇಣುಕಾದೇವಿ ಮಹಾತ್ಮೆ, ಬೋರೇಗೌಡ ಬೆಂಗಳೂರಿಗೆ ಬಂದ, ಧನಲಕ್ಷಿ, ಮೊದಲ ರಾತ್ರಿ,  ಕಾಕನಕೋಟೆ, ಸುಖಸಂಸಾರ, ಮುಗಿಯದ ಕನಸು, ಆರು ಮೂರು ಒಂಭತ್ತು, ಪಾವನಗಂಗಾ,  ಸೀತಾ, ಮುಗ್ಧಮಾನವ, ಒಂದೇ ಕುಲ ಒಂದೇ ದೈವ,  ತಾಯಿಗಿಂತ ದೇವರಿಲ್ಲ,  ಪೂರ್ಣಿಮಾ, ಶನಿಪ್ರಭಾವ, ಶರಪಂಜರ, ಗಂಡಹೆಂಡತಿ.

ಸಂಶಯಫಲ, ಹಳ್ಳೀಹೈದ, ಕಾಸಿದ್ರೆಕೈಲಾಸ, ಹಾವಿನಹೆಜ್ಜೆ,  ಅನುಗ್ರಹ,  ಮುಯ್ಯಿಗೆ ಮುಯ್ಯಿ, ಭಲೇಭಾಸ್ಕರ, ಕಿಲಾಡಿ ಜೋಡಿ,  ಭಲೇ ಅದೃಷ್ಟವೋ ಅದೃಷ್ಟ, ವಸಂತಲಕ್ಷ್ಮಿ, ತಂದೆ ಮಕ್ಕಳು,  ಬಲು ಅಪರೂಪ ನಮ್‍ ಜೋಡಿ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ,  ಮಧುರ ಸಂಗಮ, ನಾರಿ ಮುನಿದರೆ ಮಾರಿ, ಊರ್ವಶಿ ನೀನೇ ನನ್ನ ಪ್ರೇಯಸಿ, ಉತ್ತರ ದಕ್ಷಿಣ, ಧರ್ಮಸೆರೆ, ಬಂಗಾರದ ಮನುಷ್ಯ, ಅದಲು ಬದಲು,  ಭಲೇರಾಣಿ, ಅಳಿಯ ದೇವರು,  ನಾಮೆಚ್ಚಿದ ಹುಡುಗ, ಪಕ್ಕಾಕಳ್ಳ, ಭಲೇಹುಚ್ಚ, ಪುಟಾಣಿ ಏಜೆಂಟ್123, ನಂದಗೋಕುಲ, ಸವತಿಯ ನೆರಳು, ದೇವರು ಕೊಟ್ಟ ತಂಗಿ, ಪ್ರೀತಿ ಮಾಡು ತಮಾಷೆ ನೋಡು.

ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ…

ಸಿ.ಐ.ಡಿ.72, ಪಾಯಿಂಟ್‍ ಪರಿಮಳ, ಕಾಣದಕೈ, ರಾಮ ಪರಶುರಾಮ,  ಮೂರೂವರೆ ವಜ್ರಗಳು, ಹದ್ದಿನಕಣ್ಣು, ಶ್ರೀಚಾಮುಂಡೇಶ್ವರಿ ಮಹಿಮೆ, ಮಂಜಿನತೆರೆ, ನಾನೂ ಬಾಳಬೇಕು, ಉಷಾಸ್ವಯಂವರ, ಮಂಕುತಿಮ್ಮ, ಶ್ರೀನಿವಾಸ ಕಲ್ಯಾಣ, ಮಹದೇಶ್ವರ ಪೂಜಾಫಲ, ಪಟ್ಟಣಕ್ಕೆ ಬಂದ ಪತ್ನಿಯರು, ಶುಭಮಂಗಳ, ಮಿಥುನ, ನಿನಗಾಗಿ ನಾನು, ಡ್ರೈವರ್ ಹನುಮಂತು, ಮಯೂರ, ಶ್ರೀರಾಘವೇಂದ್ರ ವೈಭವ,  ನಿರೀಕ್ಷೆ, ಏಟು ಎದಿರೇಟು, ಹೆಣ್ಣು ಸಂಸಾರದ ಕಣ್ಣು,  ಅವಳಿ ಜವಳಿ, ಹುಡುಗಾಟದ ಹುಡುಗಿ,

ಪ್ರೇಮಾನುಬಂಧ, ಶಿಕಾರಿ, ಪೂರ್ಣಚಂದ್ರ, ನಂಬರ್ ಐದುಯಕ್ಕ, ದಿಗ್ವಿಜಯ, ಬಂಗಾರದಮನೆ, ತೇಜ, ಹೆಣ್ಣಿನಸೇಡು, ಪೊಲೀಸ್ ಮತ್ತು ದಾದಾ, ಪ್ರೇಮಪಲ್ಲವಿ, ಮಾಂಗಲ್ಯ, ಎಡೆಯೂರು ಸಿದ್ಧಲಿಂಗೇಶ್ವರ, ಕಲಿಯುಗ ಭೀಮ, ಗುಣನೋಡಿ ಹೆಣ್ಣುಕೊಡು,  ಕೃಷ್ಣ ಮೆಚ್ಚಿದ ರಾಧ,  ಅದೃಷ್ಟವಂತ, ವಿಜಯ ಖಡ್ಗ,  ಗರುಡರೇಖೆ, ಸಾಂಗ್ಲಿಯಾನ-1, ಬೂದಿ ಮುಚ್ಚಿದ ಕೆಂಡ,  ಗಂಡ ಮನೆ ಮಕ್ಕಳು,  ಸ್ನೇಹದ ಸಂಕೋಲೆ, ಅಂಜದಗಂಡು,  ಟೋನಿ, ಶ್ರೀವೆಂಕಟೇಶ್ವರ ವೈಭವ,  ಡ್ಯಾನ್ಸ್ ರಾಜ ಡ್ಯಾನ್ಸ್, ಬಾಳೊಂದು ಭಾವಗೀತೆ,  ಹೃದಯ ಪಲ್ಲವಿ,  ಮಾತೃ ವಾತ್ಸಲ್ಯ, ದೈವಶಕ್ತಿ,  ಕಲಾಭಿಮಾನಿ,  ಸೂಪರ್ ಬಾಯ್, ಕೃಷ್ಣನೀ ಕುಣಿದಾಗ, ಹೆಣ್ಣುಹುಲಿ, ಗುರು, ಧರ್ಮ ದಾರಿ ತಪ್ಪಿತು,  ಆ..ನಂತರ,  ಹಾಸ್ಯರತ್ನ ರಾಮಕೃಷ್ಣ,  ಶರವೇಗದ ಸರದಾರ.

ಇದನ್ನೂ ಓದಿ:  ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…

ಧರಣಿ ಮಂಡಲ ಮಧ್ಯದೊಳಗೆ,  ನ್ಯಾಯಕ್ಕಾಗಿ ನಾನು,  ಚಂಡಿ ಚಾಮುಂಡಿ,  ಪದ್ಮವ್ಯೂಹ,  ಆಕ್ರೋಶ, ಅದೇರಾಗ ಅದೇ ಹಾಡು,  ಚಲಿಸದ ಸಾಗರ,  ಇದುಸಾಧ್ಯ, ಎರಡು ನಕ್ಷತ್ರಗಳು,  ಗಗನ, ಸಮಯದ ಗೊಂಬೆ, ಗಜಪತಿ ಗರ್ವಭಂಗ, ಗಂಡು ಭೇರುಂಡ, ಅಜಯ್‍ ವಿಜಯ್, ಎರಡು ರೇಖೆಗಳು, ಅಶ್ವಮೇಧ,  ಸಿಡಿಲು,  ಮಹೇಶ್ವರ,  ಶ್ರಾವಣ ಬಂತು, ಏಕಲವ್ಯ, ಪೂಜಾಫಲ,  ಶೃತಿ, ಯಾರಿವನು?,  ಅರಳಿದ ಹೂವುಗಳು,  ಅಜ್ಞಾತವಾಸ, ಕ್ರಮ,  ಪ್ರೀತಿ ವಾತ್ಸಲ್ಯ,  ನೀನು ನಕ್ಕರೆ ಹಾಲು ಸಕ್ಕರೆ,  ಬಡ್ಡಿಬಂಗಾರಮ್ಮ, ತವರು ಮನೆ ಉಡುಗೊರೆ,  ಮರಳಿ ಗೂಡಿಗೆ,  ಮೋಡದ ಮರೆಯಲ್ಲಿ, ಮುಗಿಲ ಮಲ್ಲಿಗೆ, ನವತಾರೆ,  ಸತಿಸಕ್ಕೂಬಾಯಿ, ಎಸ್.ಪಿ.ಭಾರ್ಗವಿ.

ಪ್ರಳಯ ರುದ್ರ,  ಹೃದಯಂಗಮ,  ಬಾಳೊಂದು ಉಯ್ಯಾಲೆ, ಇತಿಹಾಸ,  ಪವಿತ್ರ ಪಾಪಿ,  ಕನಸು ನನಸು, ಕುಂಕುಮ ತಂದ ಸೌಭಾಗ್ಯ,  ರೌಡಿ & ಎಂಎಲ್‍ಎ,  ಬೆಂಗಳೂರು ರಾತ್ರಿಯಲ್ಲಿ, ಶಾಂತಿ ಕ್ರಾಂತಿ,  ಬೆಟ್ಟದ ತಾಯಿ,  ಮಧುರಮೈತ್ರಿ, ನಾ ನಿನ್ನ ಪ್ರೀತಿಸುವೆ, ಶ್ರೀಗಂಧ, ನೆನಪಿನ ದೋಣಿ,  ಎದ್ದಿದೆಗದ್ದಲ,  ನನ್ನವರು ,  ಸಿಪಾಯಿ,  ಮೌನಗೀತೆ, ಗೆಲುವಿನ ಸರದಾರ, ಅಪರಾಧಿ ನಾನಲ್ಲ,  ಮಾನಸ ವೀಣೆ,  ಬೇಟೆ ,  ಸೋಮ,  ರಥಸಪ್ತಮಿ,  ಕಲಾವಿದ, ಪ್ರೇಮ ಲೋಕ, ಮಿಡಿದಶೃತಿ, ಹಳ್ಳಿಮೇಷ್ಟ್ರು, ಜಯದೇವ, ಪುರುಷೋತ್ತಮ,  ಅವಳ ಚರಿತ್ರೆ, ಏಳುಸುತ್ತಿನ ಕೋಟೆ, ಗಡಿಬಿಡಿ ಅಳಿಯ, ಭೈರವ, ಮನ ಮಿಡಿಯಿತು, ಗೃಹಲಕ್ಷ್ಮಿ, ಮೈ ಡಿಯರ್ ಟೈಗರ್,  ಶಾಂಭವಿ,  ವೀರಣ್ಣ.

ಇದನ್ನೂ ಓದಿ:  ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್  ತ್ರಿಪುರಾಂಭ…

ಭರ್ಜರಿ ಗಂಡು,  ಕನಸಲೂ ನೀನೇ ಮನಸಲೂ ನೀನೇ,  ಝೇಂಕಾರ,  ಮಿಸ್ಟರ್ ಕೋಕಿಲ, ನನ್ನಶತ್ರು, ಮುತ್ತು, ಶ್ರೀರಾಮಚಂದ್ರ, ಮನಸೆಲ್ಲ ನೀನೇ, ವಿಕ್ರಮ್, ಧರ್ಮ, ಹೆಂಡ್ತಿ ಹೇಳಿದ್ರೆ ಕೇಳಬೇಕು, ಲಾಲಿ ಹಾಡು, ಜಗಮೆಚ್ಚಿದ ಹುಡುಗ, ನೀನಂದ್ರೆಇಷ್ಟ, ಸೂರ್ಯೋದಯ, ಸೊಗಸುಗಾರ,  ಶ್ರೀನಂಜುಂಡೇಶ್ವರ ಮಹಿಮೆ, ಅಣ್ಣಯ್ಯ,  ಒಂಟಿಮನೆ, ಮಂಜುನಾಥ ಬಿ.ಎ.ಎಲ್.ಎಲ್.ಬಿ.,  ಪ್ರತಿಫಲ, ನಾಗರಹಾವು,  ಕೊಲ್ಲೂರು ಶ್ರೀ ಮೂಕಾಂಬಿಕ,  ಮಿಸ್ಟರ್ ಪುಟ್ಟಸ್ವಾಮಿ, ದಾಕ್ಷಾಯಿಣಿ,  ಸ್ವಸ್ತಿಕ್,  ಮಹೇಂದ್ರ ವರ್ಮ,  ಯುವರಾಜ, ಕುಂಕುಮಭಾಗ್ಯ,  ಪ್ರೇಮಕ್ಕೆ ಸೈ, ನಾವಿಬ್ಬರು ನಮಗಿಬ್ಬರು, ಪುಂಗಿದಾಸ, ತೂಗುವೆ ಕೃಷ್ಣನ,  ಚಂದು.

ಕರುಳಿನ ಕೂಗು, ಧಂ, ರಾಯರಮಗ , ನಲ್ಲ, ಭುವನೇಶ್ವರಿ, ದತ್ತ, ಬೇಡಕೃಷ್ಣ ರಂಗಿನಾಟ, ಅಜಯ್, ಸಿಡಿದೆದ್ದ ಪಾಂಡವರು, ಸಿರಿವಂತ,  ಇಂದ್ರನ ಗೆದ್ದ ನರೇಂದ್ರ,  ಸತ್ಯಇನ್ ಲವ್, ಸಾಗರದೀಪ,  ರಾಮ್, ಪ್ರೇಮ ಸಿಂಹಾಸನ, ಕಿಚ್ಚ ಹುಚ್ಚ, ಯಮಕಿಂಕರ,  ಭಾಗೀರಥಿ, ಯಾರೇ ನೀ ಅಭಿಮಾನಿ, ಪ್ರೇಮ ಚಂದ್ರಮ, ಪ್ರೀತ್ಸೇ,  ಗೋಕುಲಕೃಷ್ಣ, ದೇವರಮಗ, ಮನಸ್ಸೆಲ್ಲಾ ನೀನೆ, ನಕ್ಸಲೈಟ್, ಹೃದಯವಂತ, ಪ್ರೇಮಿನಂಬರ್-1, ಸೈ, ಕನಸುಗಾರ, ಅಂದರ್ ಬಾಹರ್, ಪಟ್ಟಣಕ್ಕೆ ಬಂದಪುಟ್ಟ, ಚಂದ್ರ, ರಂಭಾ ರಾಜ್ಯದಲ್ಲಿ ರೌಡಿ, ಮಂದಹಾಸ, ಚಿನ್ನಾರಿಮುತ್ತ, ಬದುಕು ಜಟಕಾ ಬಂಡಿ, ಬಾಳಿನ ದಾರಿ, ರಂಗಣ್ಣ, ಪ್ರೇಮಗೀತೆ, ಪ್ರೇಮರಾಗ ಹಾಡು ಗೆಳತಿ, ಜಗದೀಶ್ವರಿ, ತುತ್ತಾಮುತ್ತಾ, ಮಿಸ್ಟರ್ & ಮಿಸಸ್‍ ರಾಮಾಚಾರಿ, ನಾರಾಯಣಸ್ವಾಮಿ [ಕಿರುಚಿತ್ರ], ಸುಳಿ, ಬಂಗಾರ ಸನ್‍ಆಫ್ ಬಂಗಾರದ ಮನುಷ್ಯ, ಕುರುಕ್ಷೇತ್ರ, ಪ್ರೊಡಕ್ಷನ್ ನಂಬರ್-8, ಕೆಂಪಮ್ಮನ ಕೋರ್ಟ್, ಸಾಫ್ಟ್ ವೇರ್ ಗಂಡ, ಅಂಧಳೇನು ಮಹಾರಾಣಿ, ಚಂದ್ರೋದಯ, ನವತಾರೆ, ಗಾಳಿಪಟ-2, ಟಾಕ್ಸಿಕ್, ಗಾಳಿಪಟ-3

admin
the authoradmin

23 Comments

  • ನಾನು ಮೈಸೂರಿನ ರಂಗಾಯಣದ ರಂಗಕರ್ಮ ವಿದ್ಯಾರ್ಥಿ. ರಂಗಾಯಣ ರಘು ಬ್ಯಾಚಿನ ಕಲಾವಿದ. ನನ್ನ ಪಾಲಿಗೆ ಶ್ರೀನಾಥ್ ದ್ರೋಣಾಚಾರ್ಯ ಮತ್ತು ನಾನು ಏಕಲವ್ಯ. ಇಂತಹ ಶ್ರೇಷ್ಠ ಕಲಾವಿದರ ಕುರಿತು ಅತ್ತ್ಯುತ್ತಮ ಲೇಖನ ಬರೆದ ಈ ಕುಮಾರಕವಿಯವರ ಬಗ್ಗೆ ಬಹಳಷ್ಟು ಕೇಳಿದ್ದೆ ಮತ್ತು ಬೇರೆಬೇರೆ ಪತ್ರಿಕೆ ಮತ್ತು ಮ್ಯಾಗಝೀನ್ ಗಳಲ್ಲಿ ಓದಿದ್ದೆ. ವಿಶೇಷವಾಗಿ ಚಂದನವನ ಚರಿತ್ರೆ ಕಂತುಗಳ ಅನೇಕ ನಟನಟಿಯರ ಲೇಖನಗಳಲ್ಲಿ ಬಹುತೇಕ ಓದಿದ್ದ ನೆನಪು.(ಎಲ್ಲವನ್ನೂ ಓದಲು ಸಾಧ್ಯವಾಗಲಿಲ್ಲ ಎಂಬ ನೋವಿದೆ) ಈಗ ಇದನ್ನು ಹತ್ತು ಸಲ ಓದಿದ ನಂತರ ನನ್ನ ಗೆಳೆಯ-ಗೆಳತಿಯರ ಗುಂಪಿಗೂ ಶೇರ್ ಮಾಡಿದ್ದೇನೆ. ಪ್ರಣಯರಾಜ
    ಮತ್ತು ಕಲಾದಿಗ್ಗಜ ಶ್ರೀನಾಥ್ ರವರ ಬಗೆಗಿನ ಈ ಲೇಖನವು ಅಮೋಘವಾಗಿದೆ. ಹಿರಿಯಕವಿ ನಟರಾಜ ರವರಿಗೆ ಅನೇಕಾನೇಕ ಧನ್ಯವಾದಗಳು ಮತ್ತು ಸಹಸ್ರ ಅಭಿನಂದನೆಗಳು, ಸಂಜೀವಕುಮಾರ ಹೆಗ್ಗಡೆ, ಕಾರ್ಕಳ. (ಓಡಾಟ ಬೆಂಗಳೂರು, ಮುಂಬೈ,ಚೆನ್ನೈ, ಹೈದರಾಬಾದ್ ಚಿತ್ರರಂಗ)

  • ನಾನು ಮೈಸೂರಿನ ರಂಗಾಯಣದ ರಂಗಕರ್ಮ ವಿದ್ಯಾರ್ಥಿ. ರಂಗಾಯಣ ರಘು ಬ್ಯಾಚಿನ ಕಲಾವಿದ. ನನ್ನ ಪಾಲಿಗೆ ಶ್ರೀನಾಥ್ ದ್ರೋಣಾಚಾರ್ಯ ಮತ್ತು ನಾನು ಏಕಲವ್ಯ. ಇಂತಹ ಶ್ರೇಷ್ಠ ಕಲಾವಿದರ ಕುರಿತು ಅತ್ತ್ಯುತ್ತಮ ಲೇಖನ ಬರೆದ ಈ ಕುಮಾರಕವಿಯವರ ಬಗ್ಗೆ ಬಹಳಷ್ಟು ಕೇಳಿದ್ದೆ ಮತ್ತು ಬೇರೆಬೇರೆ ಪತ್ರಿಕೆ ಮತ್ತು ಮ್ಯಾಗಝೀನ್ ಗಳಲ್ಲಿ ಓದಿದ್ದೆ. ವಿಶೇಷವಾಗಿ ಚಂದನವನ ಚರಿತ್ರೆ ಕಂತುಗಳ ಅನೇಕ ನಟನಟಿಯರ ಲೇಖನಗಳಲ್ಲಿ ಬಹುತೇಕ ಓದಿದ್ದ ನೆನಪು.(ಎಲ್ಲವನ್ನೂ ಓದಲು ಸಾಧ್ಯವಾಗಲಿಲ್ಲ ಎಂಬ ನೋವಿದೆ) ಈಗ ಇದನ್ನು ಹತ್ತು ಸಲ ಓದಿದ ನಂತರ ನನ್ನ ಗೆಳೆಯ-ಗೆಳತಿಯರ ಗುಂಪಿಗೂ ಶೇರ್ ಮಾಡಿದ್ದೇನೆ. ಪ್ರಣಯರಾಜ
    ಮತ್ತು ಕಲಾದಿಗ್ಗಜ ಶ್ರೀನಾಥ್ ರವರ ಬಗೆಗಿನ ಈ ಲೇಖನವು ಅಮೋಘವಾಗಿದೆ. ಹಿರಿಯಕವಿ ನಟರಾಜ ರವರಿಗೆ ಅನೇಕಾನೇಕ ಧನ್ಯವಾದಗಳು ಮತ್ತು ಸಹಸ್ರ ಅಭಿನಂದನೆಗಳು, ಸಂಜೀವಕುಮಾರ ಹೆಗ್ಗಡೆ, ಕಾರ್ಕಳ. ಓಡಾಟ ಬೆಂಗಳೂರು, ಮುಂಬೈ,ಚೆನ್ನೈ, ಹೈದರಾಬಾದ್ ಚಿತ್ರರಂಗ

  • ಎಂದಿನಂತೆ ಹಿರಿಯ ನಟ ಶ್ರೀನಾಥ್ ರವರ ಲೇಖನವೂ ಬೊಂಬಾಟ್ ಆಗಿದೆ. ಎಲ್ಲರಿಗು ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಬರೆದಿರುವ ಕುಮಾರಕವಿ ನಟರಾಜ ರವರಿಗೆ ದೊಡ್ಡ ನಮಸ್ಕಾರ. ಎಲ್ಲಕಿಂತ ಮಿಗಿಲಾಗಿ ಪ್ರಣಯರಾಜ
    ನಟಿಸಿರುವ ಎಲ್ಲಾ ಸಿನಿಮಾದ ಪಟ್ಟಿಯಿಂದ ನನಗಂತೂ ತುಂಬ ಖುಷಿಯಾಗಿದೆ.
    Sathyanarayana, Mysore

  • ಎಂದಿನಂತೆ ಹಿರಿಯ ನಟ ಶ್ರೀನಾಥ್ ರವರ ಲೇಖನವೂ ಬೊಂಬಾಟ್ ಆಗಿದೆ. ಎಲ್ಲರಿಗು ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಬರೆದಿರುವ ಕುಮಾರಕವಿ ನಟರಾಜ ರವರಿಗೆ ದೊಡ್ಡ ನಮಸ್ಕಾರ. ಎಲ್ಲಕಿಂತ ಮಿಗಿಲಾಗಿ ಪ್ರಣಯರಾಜ
    ನಟಿಸಿರುವ ಎಲ್ಲಾ ಸಿನಿಮಾದ ಪಟ್ಟಿಯಿಂದ ನನಗಂತೂ ತುಂಬ ಖುಷಿಯಾಗಿದೆ.
    Sathyanarayana, Rtd.Superintendent, Mysore University

  • Old kannada film Hero Sreenath article 👏. Very interesting and useful. Thanks sir for the best author Natraj sir 🙏 👍

  • Old kannada film Hero Sreenath article 👏. Very interesting and useful. Thanks sir for the best author Natraj sir 🙏 👍. Also for the e-newsletter JANAMANA KANNADA patrike

    • ಚಿರಯವ್ವನ ಚಿರಸ್ಮರಣೀಯ ಕಲಾವಿದ ಶ್ರೀನಾಥ್ ಲೇಖನ ಓದಿದ ನನಗೂ ನಮ್ಮ ಕುಟುಂಬ ಬಂಧುಮಿತ್ರಬಳಗದ ಎಲ್ಲರಿಗೂ ತುಂಬ ಇಷ್ಟವಾಯ್ತು. ಇವತ್ತಿನ ಯುವ ಪೀಳಿಗೆಯವರಿಗೆ ಉತ್ತಮ ಕಲಾತ್ಮಕ ಮತ್ತು ಸಂಗ್ರಹಯೋಗ್ಯ ಲೇಖನ ಬರೆದ ನಟರಾಜ ಕವಿಯವರಿಗೆ ಹೃತ್ಪೂರ್ವಕ ನಮಸ್ಕಾರ ಧನ್ಯವಾದ. ಮಲ್ಲಿಕಾರ್ಜುನ ಹಿರೇಮಠ
      ಬೆಂಗಳೂರು

    • ಚಿರಯವ್ವನ ಚಿರಸ್ಮರಣೀಯ ಕಲಾವಿದ ಶ್ರೀನಾಥ್ ಲೇಖನ ಓದಿದ ನನಗೂ ನಮ್ಮ ಕುಟುಂಬ ಬಂಧುಮಿತ್ರಬಳಗದ ಎಲ್ಲರಿಗೂ ತುಂಬ ಇಷ್ಟವಾಯ್ತು. ಇವತ್ತಿನ ಯುವ ಪೀಳಿಗೆಯವರಿಗೆ ಉತ್ತಮ ಕಲಾತ್ಮಕ ಮತ್ತು ಸಂಗ್ರಹಯೋಗ್ಯ ಲೇಖನ ಬರೆದ ನಟರಾಜ ಕವಿಯವರಿಗೆ ಹೃತ್ಪೂರ್ವಕ ನಮಸ್ಕಾರ ಧನ್ಯವಾದ. ಮಲ್ಲಿಕಾರ್ಜುನ ಹಿರೇಮಠ, ಹಾಲಿ ಬೆಂಗಳೂರು ನಿವಾಸಿ

  • Very meaningful and useful article on Legend actor SHREENATH by KUMARAKAVI NATARAJA, thank you very much sir 🙏 👍 😀 👏

  • Kumarakavi nataraja ravaru barediruva old actor sreenath ravara lekana very nice 👍 👌 😀 😎, dhanyavadagalu.
    Amruthavalli, gonikoppaal, Kodagu.

  • Kumarakavi nataraja ravaru barediruva old actor sreenath ravara lekana very nice 👍 👌 😀 😎, dhanyavadagalu.
    Amruthavalli, Gonikoppa, Kodagu district.

  • ಚಿರಯವ್ವನ ಚಿರಸ್ಮರಣೀಯ ಕಲಾವಿದ ಶ್ರೀನಾಥ್ ಲೇಖನ ಓದಿದ ನನಗೂ ನಮ್ಮ ಕುಟುಂಬ ಬಂಧುಮಿತ್ರಬಳಗದ ಎಲ್ಲರಿಗೂ ತುಂಬ ಇಷ್ಟವಾಯ್ತು. ಇವತ್ತಿನ ಯುವ ಪೀಳಿಗೆಯವರಿಗೆ ಉತ್ತಮ ಕಲಾತ್ಮಕ ಮತ್ತು ಸಂಗ್ರಹಯೋಗ್ಯ ಲೇಖನ ಬರೆದ ನಟರಾಜ ಕವಿಯವರಿಗೆ ಹೃತ್ಪೂರ್ವಕ ಧನ್ಯವಾದ. ಮಲ್ಲಿಕಾರ್ಜುನ ಹಿರೇಮಠ, ಬೆಂಗಳೂರು ನಿವಾಸಿ

  • ಚಂದನವನ ಚರಿತ್ರೆಯ ಮೂಲಕ ನೂರಾರು ನಟನಟಿಯರ ಲೇಖನ ಬರೆಯುವ ಕವಿ ನಟರಾಜಣ್ಣ ರವರಿಗೆ ನಮೋ ನಮಃ. ನಿನ್ನೆ ದಿನದ ಪ್ರಣಯರಾಜ ಶ್ರೀನಾಥ್ ಲೇಖನ ಓದಿದ ನನಗೆ ಅನೇಕ ಹೊಸ ಹೊಸ ವಿಚಾರ ಗೊತ್ತಾಯ್ತು, ಜನಮನ ಪತ್ರಿಕೆಯ ಎಲ್ಲರಿಗೂ ಧನ್ಯವಾದ ಸರ್

  • ಚಂದನವನ ಚರಿತ್ರೆಯ ಮೂಲಕ ನೂರಾರು ನಟನಟಿಯರ ಲೇಖನ ಬರೆಯುವ ಕವಿ ನಟರಾಜಣ್ಣ ರವರಿಗೆ ನಮೋ ನಮಃ. ನಿನ್ನೆ ದಿನದ ಪ್ರಣಯರಾಜ ಶ್ರೀನಾಥ್ ಲೇಖನ ಓದಿದ ನನಗೆ ಅನೇಕ ಹೊಸ ಹೊಸ ವಿಚಾರ ಗೊತ್ತಾಯ್ತು, ಜನಮನ ಪತ್ರಿಕೆಯ ಎಲ್ಲರಿಗೂ ಧನ್ಯವಾದ ಸರ್
    ಶಾಂತಕುಮಾರ್, ರೈತ, ಮಂಡಕಳ್ಳಿ, ಮೈಸೂರು

  • ಕಲಾರತ್ನ ಪ್ರಣಯರಾಜ ಶ್ರೀನಾಥ್ ಕೂಡ ನಮ್ಮ ಮೈಸೂರಿನವರೇ ಎಂದು ಗೊತ್ತಿರಲಿಲ್ಲ. ಇಷ್ಟೆಲ್ಲ ವಿಷಯ ಮತ್ತು ಎಷ್ಟೊಂದು ಮಾಹಿತಿಯ ಭಂಡಾರ ಆಗಿದ್ದಾರೆ ನಮ್ಮೆಲ್ಲರ ಮೆಚ್ಚಿನ ಹಿರಿಯ ಬರಹಗಾರರಾದ ಕುಮಾರಕವಿಯವರು ನಾನಂತೂ ಕಂಪ್ಲೀಟ್ ಬೋಲ್ಡ್ ಆಗಿ ಓಟ್ ಆಗಿದ್ದೇನೆ ಇಂಥವರಿಗೆ ಅಭಿಮಾನಿ ಬಳಗ ಇರೋದು ಸಹಜ. ಗಮಕ ವಿದ್ವಾನ್ ರಾ.ರಾಮಕೃಷ್ಣ, ಜಯಲಕ್ಷ್ಮಿಪುರಂ ಮೈಸೂರು

  • ಕಲಾರತ್ನ ಪ್ರಣಯರಾಜ ಶ್ರೀನಾಥ್ ಕೂಡ ನಮ್ಮ ಮೈಸೂರಿನವರೇ ಎಂದು ಗೊತ್ತಿರಲಿಲ್ಲ. ಇಷ್ಟೆಲ್ಲ ವಿಷಯ ಮತ್ತು ಎಷ್ಟೊಂದು ಮಾಹಿತಿಯ ಭಂಡಾರ ಆಗಿದ್ದಾರೆ ನಮ್ಮೆಲ್ಲರ ಮೆಚ್ಚಿನ ಹಿರಿಯ ಬರಹಗಾರರಾದ ಕುಮಾರಕವಿಯವರು ನಾನಂತೂ ಕಂಪ್ಲೀಟ್ ಬೋಲ್ಡ್ ಆಗಿ ಓಟ್ ಆಗಿದ್ದೇನೆ ಇಂಥವರಿಗೆ ಅಭಿಮಾನಿ ಬಳಗ ಇರೋದು ಸಹಜ. ಗಮಕ ವಿದ್ವಾನ್ ರಾ.ರಾಮಕೃಷ್ಣ, ಜಯಲಕ್ಷ್ಮಿಪುರಂ ಮೈಸೂರು/ಬೆಂಗಳೂರು

  • Kumarakavi nataraja ravara SREENATH article bahala chennagide, thanks 😊 🙏 👍
    Srikanta shetty, Malpe, D.K.

  • Kumarakavi nataraja ravara Hero actor SREENATH article bahala chennagide, thanks 😊 🙏 👍
    Srikanta shetty, Malpe, D.K.

  • Hiriya nata mattu kirutere kalavida Pranayaraja SREENATH obba great celebrity ♥ intha Maha natara bagge Natraj ravaru sariyage barediddare, namaskara dhanyavadagalu
    Srinivas gowda, Ramanagara.

Leave a Reply

Translate to any language you want