CinemaLatest

ಡಾ.ರಾಜ್ ಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ.. ಏಕೆ ಗೊತ್ತಾ?

ಸಿನಿಮಾ ಕ್ಷೇತ್ರದ ಇತಿಹಾಸವನ್ನು ನೋಡಿದ್ದೇ ಆದರೆ ಹಲವು ಬದಲಾವಣೆ, ಏರಿಳಿತಗಳನ್ನು ಕಂಡಿದೆ.. ಹಾಗೆಯೇ ಕಲಾವಿದರು  ಕೂಡ ಆಯಾಯ ಕಾಲಘಟ್ಟದಲ್ಲಿ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಲ್ಲದೆ, ಸಿನಿಮಾ ರಂಗವನ್ನು ಉತ್ತುಂಗಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದಿನ ಸಿನಿಮಾ ನಟ, ನಟಿಯರ ಅಭಿನಯ ಮತ್ತು ಅವರು ನಟಿಸಿರುವ ಚಿತ್ರಗಳ ಸಂಖ್ಯೆಗಳನ್ನು ಗಮನಿಸಿದರೆ ಅಚ್ಚರಿ ಮೂಡಿಸುತ್ತದೆ.  ಅವರ ಸಿನಿಮಾ ಜಗತ್ತಿನ ಸಾಧನೆ ಖುಷಿಕೊಡುತ್ತದೆ.  ಸಿನಿಮಾ ಗಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ವಿಶ್ಲೇಷಣೆ ಮಾಡುತ್ತಾ ಡಾ.ರಾಜಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ ಎಂಬುದನ್ನು ನೆನಪಿಸಿದ್ದಾರೆ.

ಇವತ್ತು ಇಡೀ ಜಗತ್ತು ತಂತ್ರಜ್ಞಾನದ ಕಾರಣಕ್ಕೆ ಅಂಗೈನಲ್ಲಿದೆ. ಹೀಗಾಗಿ ಎಲ್ಲವೂ ಸುಲಭವಾಗಿ ದಕ್ಕುತ್ತದೆ. ಆದರೆ ಅವತ್ತು ಸೀಮಿತ ತಂತ್ರಜ್ಞಾನದಲ್ಲಿ ಸಿನಿಮಾಗಳನ್ನು ತಯಾರು ಮಾಡಬೇಕಾಗಿತ್ತು.. ರೀಲ್ ಗಿಂತ ರಿಯಲ್ ಗೆ ಆದ್ಯತೆ ನೀಡಲಾಗುತ್ತಿತ್ತು. ಹೀಗಾಗಿಯೇ ಅವತ್ತಿನ ಕಲಾವಿದರು ಇವತ್ತಿಗೂ ನಮ್ಮ ಮಧ್ಯೆ ನೆನಪಾಗಿ ಉಳಿದಿದ್ದಾರೆ. ಅವರ ಅವತ್ತಿನ ಸಿನಿಮಾಗಳು ಇವತ್ತಿಗೂ ಮೆಚ್ಚಿನ ಚಿತ್ರಗಳಾಗಿ ಉಳಿಯಲು ಸಾಧ್ಯವಾಗಿವೆ. ನಟ, ನಟಿಯರು ಕೂಡ…

ಇನ್ನು ಸಿನಿಮಾ ನಟರ ವಿಚಾರ ಬಂದರೆ ಡಾ.ರಾಜ್ ಕುಮಾರ್ ಅವರು ಕನ್ನಡದ ಪಾಲಿಗೆ ಅಣ್ಣಾವ್ರರಾಗಿಯೇ ಉಳಿದು ಬಿಡುತ್ತಾರೆ. ಅವರಿಗೆ ಅವರೇ ಸಾಟಿ… ಇನ್ನು ಸಿನಿಮಾಗಳ ಗಳಿಕೆ ಲೆಕ್ಕಾಚಾರವನ್ನು ನೋಡುವುದಾದರೆ  ಅಂದಿನ ಕಾಲದ 1972 ರಲ್ಲಿ ಬಿಡುಗಡೆಯಾದ “ಬಂಗಾರದಮನುಷ್ಯ” ಸಿನಿಮಾ ದಾಖಲೆ ಗಳಿಕೆ 1.56 ಕೋಟಿ (ಬಾಕ್ಸಾಫೀಸ್ ಕಲೆಕ್ಷನ್) ಈಗಿನ ಕಾಲದ (2025ರ) 312 ಕೋಟಿ ರೂಪಾಯಿಗಳಿಗೆ ಸಮ.

ಈ ಚಿತ್ರವು ಕರ್ನಾಟಕ ರಾಜ್ಯದಲ್ಲಿ ಮಾತ್ರ ಬಿಡುಗಡೆ ಆಗಿತ್ತು. ರಾಜ್ಯದ ಪ್ರತಿಯೊಂದು ಹೋಬಳಿ, ತಾಲ್ಲೂಕು, ನಗರ, ಜಿಲ್ಲಾ ಮಟ್ಟದ ಟಾಕೀಸ್, ಟೂರಿಂಗ್ ಟಾಕೀಸ್, ಥಿಯೇಟರ್ ಗಳಲ್ಲಿ 50ದಿನ, 100ದಿನ, 25/50/60 ವಾರಗಳ (ಸಿಲ್ವರ್/ಗೋಲ್ಡನ್/ಡೈಮಂಡ್/ಪ್ಲಾಟಿನಂ ಜುಬ್ಲಿ) ಪ್ರದರ್ಶನ ಮಾತ್ರವಲ್ಲದೆ ಎರಡು (ಮೈಸೂರು ಬೆಂಗಳೂರು) ನಗರದಲ್ಲಿ ಸತತ 2 ವರ್ಷ ಪ್ರದರ್ಶನ ಕಂಡಿತು. ಈಗಿನ ಕಾಲದ ಲೆಕ್ಕಾಚಾರದ ಪ್ರಕಾರ ಒಂದು ವೇಳೆ ಈಗಿನಂತೆ ಬಹುಭಾಷೆಯಲ್ಲಿ (ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್, ಮುಂತಾದ ಅನೇಕ ಭಾಷೆಗಳಲ್ಲಿ) ಪ್ರಪಂಚ ದಾದ್ಯಂತ ಬಿಡುಗಡೆ ಆಗಿದ್ದರೆ ನಿವ್ವಳ ಗಳಿಕೆ 3000 ಕೋಟಿಗೆ ಸರಿಸಮಾನ ಆಗುತ್ತದೆ.

ಇದೇ ರೀತಿಯ ಅಂಕಿ- ಅಂಶ ಪ್ರಕಾರ 1978ರಲ್ಲಿ ಬಿಡುಗಡೆಯಾದ “ಶಂಕರ್ ಗುರು” ಚಿತ್ರದ ಗಳಿಕೆ ಇವತ್ತಿನ 8500 ಕೋಟಿ ರೂಪಾಯಿಗೆ ಸರಿಸಮಾನ ಆಗುತ್ತದೆ. ಡಾ.ರಾಜ್ ತ್ರಿಪಾತ್ರದ ಎರಡನೆ ಚಿತ್ರ (ಮೊದಲ ಚಿತ್ರ “ಕುಲಗೌರವ”) ಶಂಕರ್ ಗುರು. ಇದರ ರೀಮೇಕ್ ಹಿಂದಿಯಲ್ಲಿ ಅಮಿತಾಭ ಬಚ್ಚನ್ ನಟಿಸಿದ “ಮಹಾನ್”, ತಮಿಳಿನಲ್ಲಿ ಶಿವಾಜಿ ಗಣೇಶನ್ ನಟಿಸಿದ “ತ್ರಿಶೂಲಂ”, ತೆಲುಗಿನಲ್ಲಿ  ಕೃಷ್ಣ ನಟಿಸಿದ “ಕುಮಾರರಾಮ”. ಈ ರೀಮೇಕ್ ಚಿತ್ರಗಳೂ ಸಹ ನೂತನ ದಾಖಲೆ ನಿರ್ಮಿಸಿದವು.

ಬಂಗಾರದ ಮನುಷ್ಯ ಮತ್ತು ಶಂಕರಗುರು ಇವೆರಡೂ ಚಿತ್ರಗಳನ್ನು ಉದಾಹರಣೆ ಆಗಿ ತೆಗೆದುಕೊಳ್ಳಲಾಗಿದೆ ಅಷ್ಟೆ. ಇಂಥ ನೂರಾರು ದಾಖಲೆ ನಿರ್ಮಿಸಿದ ಕನ್ನಡ ಚಿತ್ರಗಳು ಇವೆ. ಈ ಲೆಕ್ಕಾಚಾರವನ್ನು ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧರಿಸಿದ ಜನಸಂಖ್ಯೆ, ಚಿನ್ನ-ಬೆಳ್ಳಿ, ದವಸಧಾನ್ಯ, ರಿಯಲ್ ಎಸ್ಟೇಟ್ ಹಾಗೂ ಕಾಸ್ಟ್ ಆಫ್ ಲಿವಿಂಗ್ ಆಧಾರದ ಮೇಲೆ ಅವಲಂಬಿಸಿ ಲೆಕ್ಕಾಚಾರ ಮಾಡಲಾಗಿದೆ. ಅದು ಏನೇ  ಇರಲಿ.. ಅವತ್ತು ಸಿನಿಮಾಗಳು ರಾಜ್ಯದಾದ್ಯಂತ ಎಲ್ಲ ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದ್ದವು. ಕನ್ನಡದ ನಟರನ್ನು ಕನ್ನಡಿಗರೇ ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಿದ್ದರು..

ಇವತ್ತು ಪ್ಯಾನ್ ಇಂಡಿಯಾ ಟ್ರೆಂಡಿಂಗ್ ಶುರುವಾಗಿದೆ. ಹೀಗಾಗಿ ಯುವ ಜನ ಪ್ರತಿಯೊಂದು ಸಿನಿಮಾವನ್ನು ಆ ನಿರೀಕ್ಷೆಯಿಂದಲೇ ನೋಡಲು ಆರಂಭಿಸಿದ್ದಾನೆ. ಕನ್ನಡದ ನಿರ್ಮಾಪಕರು, ನಿರ್ದೇಶಕರು, ನಟರಿಗೆ  ಹೊಸ ಸವಾಲ್ ಗಳು ಆರಂಭವಾಗಿವೆ.. ಜನ ಕೂಡ ಸಿನಿಮಾದ ಬಗ್ಗೆ ಮಾತಾಡುವುದಕ್ಕಿಂತ ಹೆಚ್ಚಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಆರಂಭಿಸಿದ್ದಾರೆ. ಅದು ಏನೇ ಇರಲಿ.. ಕನ್ನಡದ ಸಿನಿಮಾಗಳು ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಕೂಡ ಖುಷಿಕೊಡುವ ವಿಚಾರವೇ…

(ಚಂದನವನ ಚರಿತ್ರೆ”10 ಸಂಪುಟಗಳ ಹಾಗೂ 2000ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ ತಜ್ಞ ಬರಹಗಾರ, ಅಂಕಣಕಾರ. ಮಹತ್ವ ಇತಿಹಾಸದ ಸಾಕ್ಷ್ಯಗಳಿಗೆ ಅಥವ ಹೆಚ್ಚಿನ ಮಾಹಿತಿಗೆ, ಯಾರು ಬೇಕಾದರೂ ಇವರನ್ನು ಸಂಪರ್ಕಿಸಬಹುದು. ಆದರೆ ನೆನಪಿರಲಿ… ಅದಕ್ಕೂ ಮುನ್ನ (SANDALWOOD STORY) ಚಂದನವನ ಚರಿತ್ರೆಯ ಲೇಖನಗಳನ್ನು ಓದಿ  ನಂತರ ಸಂಪರ್ಕಿಸಿ.. ಚರ್ಚಿಸಿ)

admin
the authoradmin

27 Comments

  • 100% 👍 ✔ true. Excellent job and extraordinary comparison analysis from legendary expert writer KUMARA KAVI NATARAJA. I have gone through his SANDALWOOD STORY also published in newspapers and periodicals (magazines). Thanksgiving article. Magadi Viswanath, (former supervisor, Jagath pictures and Sharada movies) Gandhinagara, Bengaluru 560009

  • 100% 👍 ✔ true. Excellent job and extraordinary comparison analysis from legendary expert writer KUMARA KAVI NATARAJA. I have gone through his SANDALWOOD STORY also published in newspapers and periodicals (magazines). Thanksgiving article. Magadi Viswanath, B (former supervisor, Jagath pictures and Sharada movies) Gandhinagara, majestic, Bengaluru

  • ನೂರಕ್ಕೆ ನೂರು ಸತ್ಯ ಸರ್, ಅಸಾಧಾರಣ ಅಂಕಿ-ಅಂಶ ನೀಡುವ ಮೂಲಕ ರುಜುವಾತು ಪಡಿಸಿದ ಅಮೂಲ್ಯ ಬರಹಗಾರರಾದ ಕುಮಾರಕವಿಯವರ ಜ್ಞಾನ ಸಂಪತ್ತಿಗೆ ನನ್ನ ಬಿಗ್ ಸೆಲ್ಯೂಟ್ ಸರ್, ಬಿ.ರವಿಕುಮಾರ್, (ಸನ್ ಆಫ್ ಲೇಟ್ MB Basavaraju ಉರುಫ್ ಮುದ್ದಗೆರೆ ಬಸವಯ್ಯ, ಶಾರದಾ ಮೂವೀಸ್, ಗಾಂಧಿನಗರ) ಗವಿಪುರಂ, ಬೆಂಗಳೂರು.

  • First class comparative study of old movies with current years movies 🎬 🎞 🎥 🎦. Especially pan India Sandalwood films. Narayana Rao, ex manager, ALANKAR THEATER, K.G.ROAD, MAJESTIC, BANGALORE

  • First class comparative study of old movies with current years movies 🎬 🎞 🎥 specially about Sandalwood films and PAN INDIA CRAZY FANS. thank you very much Natraj sir the best author.
    Narayana Rao, ex manager, ALANKAR THEATER, K.G.ROAD, MAJESTIC, BANGALORE

  • Very meaningful and true history about the REEL AND REAL FILM WORLD. Beautifully written by NATRAJ sir 👏 🙏
    V.Somanna, film financier, Rajajinagar, Bangalore

  • Dr.Rajkumar Films bagge ee satya bahala janakke gotte Illa. Adbhuta stastics information neediruva great and senior writer KAVI NATARAJA sir ravarige estu dhanyavada sallisidaru kadime annisuttade. LOLAKSHI, EX ACTRESS AND DRAMA ARTIST, BASAVANAGUDI, BENGALURU

  • Superb quality and great compared article deeply studied by KUMARA KAVI NATARAJA sir about Sandalwood films especially of Dr.Rajkumar Films. Of course one and only film god in India is Dr Raj. I am a big fan of RAJANNA.
    Manimuthuraj, Malleswaram 1st cross, Bengaluru

  • Superb quality and great compared article deeply studied by KUMARA KAVI NATARAJA sir about Sandalwood films especially of Dr.Rajkumar Films. Of course one and only film god in India is Dr Raj. I am a big fan of RAJANNA.
    Manimuthuraj, Malleswaram, Bengaluru

  • ನೂರಕ್ಕೆ ನೂರು ಸತ್ಯ ಸರ್, ಅಸಾಧಾರಣ ಅಂಕಿ-ಅಂಶ ನೀಡುವ ಮೂಲಕ ರುಜುವಾತು ಪಡಿಸಿದ ಅಮೂಲ್ಯ ಬರಹಗಾರರಾದ ಕುಮಾರಕವಿಯವರ ಜ್ಞಾನ ಸಂಪತ್ತಿಗೆ ನನ್ನ ಬಿಗ್ ಸೆಲ್ಯೂಟ್ ಸರ್, B.ರವಿಕುಮಾರ್, (ಸನ್ ಆಫ್ ಲೇಟ್ MB Basavaraju ಉರುಫ್ ಮುದ್ದಗೆರೆ ಬಸವಯ್ಯ, ಶಾರದಾ ಮೂವೀಸ್, ಗಾಂಧಿನಗರ) ಗವಿಪುರಂ, ಬೆಂಗಳೂರು.

  • What a wonderful article about kannada film industry especially with regard to DR.RAJKUMAR films greatest achievements. Llott of regards to the author Natraj sir and thanks to janamanakannada patrike.
    Srikanth Rathod, Belagavi

  • What a wonderful article about kannada film industry especially with regard to DR.RAJKUMAR films greatest achievements. Llott of regards to the author Natraj sir and thanks to janamanakannada patrike. Keep on publishing this type of useful articles, 👌 👍 👏 Srikanth Rathod, Belagaum

  • Nanna jeevamanada aneka uttama lekanagalalli idu saha ondu. Dr.Rajkumar Films mattu Kannada Films bagge best anki-amsha kottu bareda hiriya barahagara kumarakavi B.N.Nataraj ravarige dhanyavadagalu. Gangavati Srikanth.

  • Nanna jeevamanada aneka uttama lekanagalalli idu saha ondu. Dr.Rajkumar Films mattu Kannada Films bagge best anki-amsha kottu bareda hiriya barahagara kumarakavi B.N.Nataraj ravarige dhanyavadagalu. Gangavati Srikanth. Presently residing in Kondamma Street, Bellary

  • Whatever written by NATRAJ sir is absolutely right. 💯 infact PhD theses and books are written about BANGARADA MANUSHYA & DR. RAJKUMAR, under many professors guidance/supervision. I stand guarantee for the true lies forever. Grateful acknowledge 🙏 for the article by KUMARA KAVI,, Basantkumar patil DB (rtd.professor, Karnataka University) Dharwada 💙

  • Whatever written by NATRAJ sir is absolutely right. 💯 infact PhD theses and books are written about BANGARADA MANUSHYA & DR. RAJKUMAR, under many professors guidance/supervision. I stand guarantee for the true lies forever. Grateful acknowledge 🙏 for the article by KUMARA KAVI,, Basantkumar patil DB (rtd.professor, Karnataka University) Dharwad.

  • ಕನ್ನಡ ಚಿತ್ರರಂಗದ ಆಗುಹೋಗು ಬಗ್ಗೆ ಹಿರಿಮೆಗರಿಮೆ ಕುರಿತು ಜೇಷ್ಟತೆ ಶ್ರೇಷ್ಟತೆ ಇತ್ಯಾದಿಗಳೆಲ್ಲ ಅರ್ಥ ಮಾಡಿಕೊಂಡು ಅದನ್ನು ಎಲ್ಲರಿಗೂ ಅರ್ಥವಾಗುವ ರೀತಿ ಅಂಕಿ-ಅಂಶ ಸಮೇತ ನಮ್ಮೆಲ್ಲರ ಮೆಚ್ಚಿನ ಹಿರಿಯ ಕವಿಗಳಾದ ನಟರಾಜ ಸರ್ ಬರೆದಿರುವ ಎರಡು ಉದಾಹರಣೆ ಸಿನಿಮಾಗಳು ಬಂಗಾರದಮನುಷ್ಯ ಮತ್ತು ಶಂಕರ್ ಗುರು. ಇಂಥ ಅನೇಕ ಕನ್ನಡ ಚಿತ್ರಗಳು ಖಂಡಿತ ವಿಶ್ವದಾಖಲೆ ಲೆವಲ್ ತಲುಪಿದೆ. ಆದರೆ ಕುಮಾರಕವಿಯವರ ಹಾಗೆ ಬರೆದು ಕನ್ನಡ ಕುಲಕೋಟಿಗೆ ತಿಳಿಸುವವರು ಬಹಳ ಕಡಿಮೆ. ಆದ್ದರಿಂದ ಎಲ್ಲರೂ ಇವರಿಗೆ ಕೃತಜ್ಞತೆ ಹೇಳಲೇ ಬೇಕು. ಕೆಂಡಗಣ್ಣಾಚಾರ್, ಕನ್ನಡ ಅಭಿಮಾನಿ, ಹುಣಸೂರು/ಮೈಸೂರು

  • Dr.Rajkumar bagge Natraj ravara Amoghavada lekana. Dhanyavadagalu. Krishnegowda, tagadoor

  • Dr.Rajkumar bagge Natraj ravara article superb 👏 👌thanks 👍 😊 🙏 SHANTHAMANI, SHANTHI STORES, near RTTC,(thonchikoppal) Saraswathipuram, Mysore

  • Mamoolinante nataraj sir tumba chennagi bareda Dr.Rajkumar ravara filmy records amoghavagide. Dhanyavadagalu. SATHYANARAYAN, near kamakshi hospital, Kuvempu nagara. Mysore

  • Excellent exciting article on Dr.Rajkumar the matinee idol of kannada film industry 👏 👍 👌 Thanks to the great author shri nataraj kavigalu. Shantakumar moodalapalya, Bengaluru-560072

  • Excellent exciting article on Dr.Rajkumar the matinee idol of kannada film industry 👏 👍 👌 Thanks to the great author shri nataraj kavigalu. Shantakumar CHANDAMAMA, Bengaluru -560072

  • DR.RAJKUMAR DAKALEGALA SARADARA first class lekana. Natarajanna ravarige namaskara 👌👍🎉⚘👏🌹🤝🙏🦚🌾Mahadevu VATAAPI, MANDYA

  • DR.RAJKUMAR DAKALEGALA SARADARA first class lekana. Natarajanna ravarige namaskara 👌👍🎉⚘👏🌹🤝🙏🦚🌾Mahadevu VATAAPI, MANDYA.

  • Dr.Rajkumar bagge Natraj ravara article excellent 👏 👌
    Vibha Manasakumari, Vijayanagar, Bengaluru

Leave a Reply

Translate to any language you want