janamanakannada > Blog > Latest > Mysore > ಸತ್ಯ ನಿಷ್ಠೆ ಅಹಿಂಸೆಯ ಮಾರ್ಗದಲ್ಲಿ ಮಾನವತ್ವದ ಬೆಳಕನ್ನು ಸಾರುವ ರಂಜಾನ್: ಡಿ ರವಿಶಂಕರ್
ಹೊಸೂರು(ಸಂಘಟನೆ ಮಂಜುನಾಥ್): ಸತ್ಯ ನಿಷ್ಠೆ ಅಹಿಂಸೆಯ ಮಾರ್ಗದಲ್ಲಿ ಮಾನವತ್ವದ ಬೆಳಕನ್ನು ಸಾರುವ ರಂಜಾನ್ ಆಚರಣೆ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಮುಸಲ್ಮಾನ ಬಾಂಧವರಿಗೆ ರಂಜಾನ್ ಡ್ರೈ ಫ್ರೂಟ್ ವಿತರಿಸಿ ಶುಭಾಶಯ ತಿಳಿಸಿ ಮಾತನಾಡಿದ ಅವರು ಗ್ರಾಮೀಣ ಭಾರತದ ಬದುಕು ಅಡಗಿರುವುದೇ ಸಹಬಾಳ್ವೆ ಮತ್ತು ಸಹಜೀವನದಿಂದ ಎಲ್ಲಾ ಧರ್ಮ ಜಾತಿಗಳನ್ನು ಗೌರವಿಸಿದಾಗಲೇ ಮಾನವನ ಬದುಕಿಗೆ ಅರ್ಥ ಬರಲಿದ್ದು ಈ ನಿಟ್ಟಿನಲ್ಲಿ ಜನತೆ ಸಾಗಬೇಕಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡರಾದ ಡೈರಿ ಮಾಧು, ರಮೇಶ್, ಸೈಯದ್ ಸಲೀಮ್, ರವಿ, ಮಸೀದಿ ಗುರುಗಳಾದ ಆಸಿಫ್ ಖಾನ್ ಇಬ್ರಾಹಿಂ ಶರೀಫ್ ರಿಯಾಜ್ ರಸುಲ್ ಚಾನ್ಚರಿಫ್ ಅಮಾನುಲ್ಲಾ ಮುಶ್ರದ್ ಪಾಷಾ ಯಾಕುಬ್ ಶರೀಫ್ ಸೇರಿದಂತೆ ಮತ್ತು ಇತರರು ಹಾಜರಿದ್ದರು.
Tags:k r nagar news
admin








