ArticlesLatestLife style

ಲಕ್ಷಣ-ಅವಲಕ್ಷಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಮನುಷ್ಯನ ಲಕ್ಷಣಾವಲಕ್ಷಣಗಳೇನು…?

ಲಕ್ಷಣದ ತದ್ವಿರುದ್ಧ ಅಸ್ತಿತ್ವವೇ ಅವಲಕ್ಷಣ! ಜಗತ್ತಿನಲ್ಲಿರುವ ನರ-ವಾನರ-ಅಸುರ(ರಾಕ್ಷಸ) ಈ ಮೂರು ಬಗೆಯ ಜೀವ ಜಂತುಗಳಲ್ಲಿ ಒಂದಲ್ಲೊಂದು ರೀತಿಯ ಲಕ್ಷಣ ಮತ್ತು ಅವಲಕ್ಷಣಗಳು ಇದ್ದೆ ಇರುತ್ತದೆ. ಅಂಕಿಅಂಶ ಪ್ರಕಾರ ಸಿದ್ಧಾಂತ ಪಡಿಸಿದ ಫಲಿತಾಂಶವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಇಲ್ಲಿ ತೆರೆದಿಟ್ಟಿದ್ದಾರೆ..

ಪ್ರತಿಯೊಬ್ಬರಿಗೂ ತನ್ನದೇ ಆದ ಲಕ್ಷಣಗಳಿರುತ್ತವೆ.. ಆ ಲಕ್ಷಣಗಳನ್ನು ಕಾಪಾಡಿಕೊಂಡು ಮುನ್ನಡೆಯುವುದು ಜಾಣತನ… ಆದರೆ ಕೆಲವರು ಲಕ್ಷಣಕ್ಕೆ ವಿರುದ್ಧವಾಗಿ ಅವಲಕ್ಷಣಗಳನ್ನು ಎಳೆದುಕೊಳ್ಳುತ್ತಾರೆ. ನರಮಾನವ ವಿಭಾಗದಲ್ಲಿ ಶೇಕಡ 50:50 ಅನುಪಾತದಲ್ಲಿದ್ದರೆ, ಅದೇ ವಾನರ ಸಂತತಿ ಯಲ್ಲಿ ಶೇ.20:80 ಅನುಪಾತದಲ್ಲು ಹಾಗೂ ಅಸುರ ವಿಭಾಗದಲ್ಲಿ ಶೇ.10:90 ಅನುಪಾತ ದಲ್ಲು ಇರುತ್ತದೆ! ಲಕ್ಷಣಾವಲಕ್ಷಣ ಸ್ಥಿತಿಯನ್ನ ತಲುಪಲು ಅಥವ ಪಡೆದುಕೊಳ್ಳಲು ನಾಲ್ಕು ಮುಖ್ಯ ಕಾರಣವಿದ್ದು ಅವುಗಳೆಂದರೆ…

ಮೊದಲನೆಯದಾಗಿ ತಾಯಿ-ತಂದೆ, ಅನುವಂಶಿಕ, ವಂಶಪಾರಂಪರ್ಯ ಸಂಸ್ಕಾರ ಲಕ್ಷಣಾವಲಕ್ಷಣವಾದರೆ, ಎರಡನೆಯದು ಪರಿಸರ, ಸ್ನೇಹ, ಸಹವಾಸ, ಸಂಗ, ಸಮಾಜ, ಅರಿಷಟ್ವರ್ಗ ಲಕ್ಷಣಾವಲಕ್ಷಣವಾಗಿದೆ. ಮೂರನೇದು  ಗುರು-ಹಿರಿಯ, ಶಿಕ್ಷಣ-ಶಿಕ್ಷೆ, ವಿದ್ಯಾ-ಬುದ್ಧಿ, ಮಡದಿ-ಮಕ್ಕಳು, ಬಂಧು-ಬಳಗ, ಲಕ್ಷಣಾವಲಕ್ಷಣ, ನಾಲ್ಕನೇದು ಆಧ್ಯಾತ್ಮಿಕ, ಸತ್ಸಂಗ, ಬ್ರಹ್ಮಚರ್ಯೆ, ಧ್ಯಾನ, ಭಕ್ತಿ, ಸಾತ್ವಿಕ, ಲಕ್ಷಣಾವಲಕ್ಷಣವಾಗಿದೆ.

ಲಕ್ಷಣವು  ಪ್ರಪಂಚದ ಯಾವುದೇ ಕಾಲ/ ಸ್ಥಳದಲ್ಲು ಎಂತಹ ಪರಿಸರದಲ್ಲು ಅನವರತ ಸಹ್ಯ, ಪೂರಕ ಹಾಗೂ ಆಪ್ಯಾಯಮಾನ ಎನಿಸುತ್ತದೆ. ಪ್ಪ್ರತಿಯೊಬ್ಬರಿಗೂ ಪ್ರತಿಕ್ಷಣವು ಇಷ್ಟವಾಗುತ್ತದೆ. ಸದಾಕಾಲ ಸಂತಸ, ತೃಪ್ತಿ ತರುತ್ತದೆ. ಆದರೆ ಅವಲಕ್ಷಣವು ಅನವರತ ಅಸಹ್ಯ ಮಾತ್ರವಲ್ಲ ಮಾರಕವೂ ಅನಿಷ್ಟವೂ ಎನಿಸಿ ಪ್ರತಿಕ್ಷಣ ದುಃಖ, ಚಿಂತೆ ತರಿಸುತ್ತದೆ. ಆದ್ದರಿಂದ, ಮನಸ್ಸು ಶಾಂತವಾಗಿ ದೇಹವು ಆರೋಗ್ಯವಾಗಿ ಸಮಾಜಕ್ಕೆ ಬೇಕಾದವರಾಗಿ ಇರಬೇಕಾದರೆ ಲಕ್ಷಣ ಮತ್ತು ಅವಲಕ್ಷಣ ಇವೆರಡೂ ಸಹ ಪ್ರಮುಖ ಪಾತ್ರ ವಹಿಸುತ್ತವೆ.

ಅಧಿಕಾರ, ಅಂತಸ್ತು ಆಸ್ತಿ ದೇಶಕೋಶ ಶಕ್ತಿಯುಕ್ತಿ ಭಕ್ತಿಸೇವೆ ಎಷ್ಟೇ ಪ್ರಮಾಣದಲ್ಲಿ, ಸಂಖ್ಯೆಯಲ್ಲಿ ಇದ್ದರೂ ಸುಲಕ್ಷಣ ಇರದಿದ್ದಾಗ ಎಲ್ಲವು ವ್ಯರ್ಥವಾಗಿ ಅವಲಕ್ಷಣ ಎನಿಸುತ್ತದೆ. ಹೀಗಾಗಿ (ಅಲ್ಪ) ಆಯುಷ್ಯ ಇದ್ದಾಗ ಏನಿಲ್ಲ ದಿದ್ದರೂ ಸು-ಲಕ್ಷಣ ಇರಬೇಕು ಆಗಲೇ ಜನ್ಮ ಸಾರ್ಥಕ?!

ಪ್ರಮುಖವಾದ ಲಕ್ಷಣಗಳು ಯಾವುವು ಎಂದರೆ? ವರ್ಣಲಕ್ಷಣ, ಮುಖಲಕ್ಷಣ, ಹಸ್ತಲಕ್ಷಣ, ಪಾದಲಕ್ಷಣ, ಗುಣಲಕ್ಷಣ, ವಿದ್ಯಾಲಕ್ಷಣ, ವಿವೇಕ ಲಕ್ಷಣ, ಧನಕನಕ ಲಕ್ಷಣ, ಮನೆತನ ಲಕ್ಷಣ, ಗ್ರಾಮೀಣ, ನಗರ, ಗಿರಿ, ಸ್ಥಳಲಕ್ಷಣ, ನಕ್ಷತ್ರ ಲಕ್ಷಣ, ಸುಳಿಲಕ್ಷಣ, ವಾಕ್ಚಾತುರ್ಯ ಲಕ್ಷಣ, ರಾಶಿ-ಗ್ರಹಲಕ್ಷಣ, ಗೋತ್ರಲಕ್ಷಣ (ಮಹಾ)ರಾಜ ಲಕ್ಷಣ, ಋತು(ಮಾನ)ಲಕ್ಷಣ (ವಿ)ಜ್ಞಾನ-ತಂತ್ರಜ್ಞಾನಲಕ್ಷಣ, ಶಿಕ್ಷಕಲಕ್ಷಣ,  ರಕ್ಷಕಲಕ್ಷಣ, ಭಯೋತ್ಪಾದನಲಕ್ಷಣ,ಇತ್ಯಾದಿ.

ಇಷ್ಟೇ ವಿಧಗಳಲ್ಲಿ ಅವಲಕ್ಷಣವೂ ಇರುತ್ತವೆ. ಯಾರೇನೆ ಹೇಳಲಿ ಏನನ್ನಾದ್ರೂ ನಂಬದಿರಲಿ ಅನಾದಿಕಾಲದಿಂದ ಸಂಪ್ರದಾಯಬದ್ಧವಾಗಿ ಆಯಾಯ (ಪ್ರ)ದೇಶಕ್ಕೆ ತಕ್ಕಂತೆ ಅವರವರ ಮನೆತನಕ್ಕೆ ಬಂದಂತೆ ನಂಬಿಕೆ ಮೂಢನಂಬಿಕೆ ಅಪನಂಬಿಕೆ ಇವತ್ತಿಗೂ ಚಾಲ್ತಿಯಲ್ಲಿದೆ, ಲಕ್ಷಣ ಅವಲಕ್ಷಣ ಸಿದ್ಧಾಂತ-ವೇದಾಂತದ ಪಠ್ಯಕ್ರಮವೂ ಆಗಿದೆ.

ಲಕ್ಷಣಾವಲಕ್ಷಣ ಮನಸ್ಸು.. ಮನಸ್ಸು ಶಿಸ್ತು ಸಂಯಮ ಶ್ರದ್ಧೆ ಮತ್ತು ಇಚ್ಛಾಶಕ್ತಿ ಇದ್ದವರು ಯಾರೇ ಆಗಿರಲಿ ತಮ್ಮ ಲಕ್ಷಣವನ್ನು ಅವಲಕ್ಷಣವನ್ನಾಗಿಯೂ ಅಥವ ಅವಲಕ್ಷಣವನ್ನು ಲಕ್ಷಣವನ್ನಾಗಿಯೂ ಬದಲಾಯಿಸಿಕೊಳ್ಳಬಹುದಾದ ಅವಕಾಶ ಮತ್ತು ಸ್ವಾತಂತ್ರ್ಯ ಇದ್ದೆ ಇರುತ್ತದೆ. ಯಾರಿಂದ ಬೇಕಾದರೂ ಯಾವಾಗ ಬೇಕಾದರೂ ಲಕ್ಷಣಾವಲಕ್ಷಣ ಪೈಕಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ ಕೊಳ್ಳುವುದು ಅಥವ ಅದನ್ನು ಪಡೆದುಕೊಳ್ಳುವುದು ಅವರವರ ಇಷ್ಟಕ್ಕೆ ಬಿಟ್ಟದ್ದು! ಏಕೆಂದರೆ ಮನಸ್ಸು ಮತ್ತು ಲಕ್ಷಣ ಒಂದೇ ನಾಣ್ಯದ ಎರಡು ಮುಖ. ಹೀಗಿರುವಾಗ ಮನಸ್ಸಿದ್ದರೆ ಮಾರ್ಗ ಇದ್ದೇ ಇರುತ್ತದೆ?!

admin
the authoradmin

5 Comments

  • Fantastic and fabulously narrated after purely using
    differentiation methodology that how does human attitude impact on his own conduct and character of self earned gesture, mentality with reference to his genes and society 👏 what a Wonderful person is KUMARA KAVI NATARAJ.
    God bless him 🙏 ❤ Doreswamy Iyengar (former HOD psychology, Madras University) Banashankari 2nd stage, BANGALORE.

  • Fantastic and fabulously narrated after purely using
    differentiation methodology that how does human attitude impact on his own conduct and character of self earned gesture, mentality with reference to his/her genes and social behavior, etc 👏. Wow!what a Wonderful person is KUMARA KAVI NATARAJ. God bless him 🙏 ❤ Doreswamy Iyengar (former HOD psychology, Madras University) Banashankari 2nd stage, BANGALORE.

  • I am honored Doreswamy Iyengar sir, thank you so much sir🙏 .
    sincerely Yours ,
    -kumarakavi nataraja

Leave a Reply

Translate to any language you want