LatestMysore

ಹೊಸಹಳ್ಳಿ‌ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿ

ಕೆ.ಆರ್.ನಗರ(ಜಿಟೆಕ್ ಶಂಕರ್):  ತಾಲೂಕಿನ ಹೊಸಹಳ್ಳಿ‌ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಕಾಂಗ್ರೆಸ್ ಬೆಂಬಲಿತ 8 ಮಂದಿ ಆಯ್ಕೆಯಾಗುವುದರೊಂದಿಗೆ ಸಂಘದ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರೊಂದಿಗೆ 3 ಮಂದಿ ಜೆಡಿಎಸ್ ಬೆಂಬಲಿತರು ಚುನಾಯಿತರಾಗಿದ್ದು, ಓರ್ವ ಪಕ್ಷೇತರ ಅಭ್ಯರ್ಥಿ ಜಯ ದಾಖಲಿಸಿದ್ದಾರೆ. ಡೋರ್ನಹಳ್ಳಿಯ ಸಂತ ಮೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಸಿ ಆನಂತರ ಫಲಿತಾಂಶ ಪ್ರಕಟಿಸಲಾಯಿತು.

ಕಾಂಗ್ರೆಸ್ ಬೆಂಬಲಿತರಾಗಿದ್ದ  ವೆಂಕಟೇಗೌಡ, ರಮೇಶ್, ವಿಜಯಕುಮಾರ್, ಸುರೇಶ್, ರಮೇಶ್, ಲಕ್ಷ್ಮಣ, ರಾಜನಾಯಕ, ಮಂಜುಳಲೋಕೇಶ್ ಆಯ್ಕೆಯಾದರೆ. ಜೆಡಿಎಸ್ ಬೆಂಬಲದಿಂದ ಚುನಾವಣಾ ಕಣದಲ್ಲಿದ್ದ ಲಾಲನಹಳ್ಳಿಮಹೇಶ್, ಹೇಮಲತಾಚಂದ್ರು, ಜಯಣ್ಣ, ಪಕ್ಷೇತರರಾಗಿ ತೀರ್ಥೇಶ್ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಗ್ರಾ.ಪಂ.ಮಾಜಿ ಸದಸ್ಯ ಕೆ.ಪಿ.ಜಗದೀಶ್, ಜೆಡಿಎಸ್ ಬೆಂಬಲಿತರನ್ನು ಗ್ರಾ.ಪಂ.ಮಾಜಿ ಸದಸ್ಯ ಲಾಲನಹಳ್ಳಿಉಮೇಶ್ ಮತ್ತು ಗಣೇಶ್ ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎಸ್.ರವಿ ಕಾರ್ಯನಿರ್ವಹಿಸಿದರು. ಸಂಘದ ಸಿಇಒ ಎಂ.ಜಿ.ಸಂತೋಷ್ ಸಹಕರಿಸಿದರು.

admin
the authoradmin

Leave a Reply

Translate to any language you want