ಹಳೆಯ ಸಿನಿಮಾಗಳನ್ನು ನೋಡುವಾಗ ಸ್ಪುರದ್ರೂಪಿ ನಟ ಗಂಗಾಧರ್ ನಮ್ಮ ಗಮನಸೆಳೆಯದೆ ಇರಲಾರರು… ಇವತ್ತು ಬಹಳಷ್ಟು ಜನಕ್ಕೆ ಗಂಗಾಧರ್ ಎಂದಾಕ್ಷಣ ಗೊತ್ತಾಗದೇ ಹೋಗಬಹುದು ಆದರೆ ಶರಪಂಜರ ಸಿನಿಮಾ ನೆನಪಿಸಿಕೊಂಡರೆ ಈ ನಟ ನಮ್ಮ ಕಣ್ಮುಂದೆ ಬಂದು ಬಿಡುತ್ತಾರೆ… ಇವತ್ತು ಈ ನಟ ನಮ್ಮ ಮುಂದಿಲ್ಲ.. ಆದರೆ ಅವರು ನಟಿಸಿದ ಸಿನಿಮಾಗಳು ನಮ್ಮ ಜೊತೆಗಿವೆ… ಆದ್ದರಿಂದ ಅವರ ಬದುಕು ಮತ್ತು ಸಿನಿಮಾ ಜರ್ನಿ ಹೇಗಿತ್ತು? ಎಂಬುದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ನಮ್ಮ ಮುಂದಿಟ್ಟಿದ್ದಾರೆ… ಓದಿ ನಿಮ್ಮ ಅಭಿಪ್ರಾಯ ತಿಳಿಸಿ…

ಇದನ್ನೂ ಓದಿ: ಡಾ.ರಾಜಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ..
ಸಿನಿಮಾ ರಂಗ ಎಲ್ಲರನ್ನು ಸೆಳೆಯುತ್ತದೆ… ಆದರೆ ಇಲ್ಲಿ ಗಟ್ಟಿಯಾಗಿ ನಿಂತು ಹೆಸರು ಮಾಡುವವರು ಕೆಲವೇ ಕೆಲವರಷ್ಟೆ… ಇಂತಹವರಲ್ಲಿ ಗಂಗಾಧರ್ ಕೂಡ ಒಬ್ಬರು… 1936ರಲ್ಲಿ ಜನಿಸಿದ ಗಂಗಾಧರ್ ಬೆಂಗಳೂರು ಹೆಚ್.ಎ.ಎಲ್.ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಅವರಿಗೆ ನಾಟಕ ಸಿನಿಮಾಗಳತ್ತ ಎಲ್ಲಿಲ್ಲದ ಆಕರ್ಷಣೆ.. ಕಲೆಯಕಡೆಗೆ ಒಲವು ಹೊಂದಿದ್ದ ಅವರು ಬಣ್ಣ ಹಚ್ಚಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಇದಾದ ನಂತರ 1967ರಲ್ಲಿ ಲಗ್ನಪತ್ರಿಕೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಜಿ.ವಿ.ಅಯ್ಯರ್ ನಿರ್ಮಾಣ ನಿರ್ದೇಶನದ “ಚೌಕದದೀಪ” ಚಿತ್ರದಲ್ಲಿ ನವನಟನಾಗಿ ರಾಜೇಂದ್ರಕುಮಾರ್ ಎಂದು ಮರು ನಾಮಕರಣ ಮಾಡಿ ಚಂದನವನಕ್ಕೆ ಕೊಡುಗೆ ನೀಡಿದವರು ಅಯ್ಯರ್. ಆದರೆ ಎರಡೇ ಫಿಲಂ ನಂತರ ಪುನಃ ಮೂಲ ಹೆಸರಿನ ಗಂಗಾಧರ್ ಎಂಬ ಹೆಸರಿಂದಲೆ ಅಭಿನಯ ಲೋಕದಲ್ಲಿ ಮುಂದುವರೆದು ಮಿಂಚಿದರು. ಇದಾದ ಶೀಘ್ರದಲ್ಲೇ ಪುಟ್ಟಣ್ಣ ಕಣಗಾಲ್‍ರ ವಿಧೇಯ ಶಿಷ್ಯನಾಗಿ ಗೆಜ್ಜೆಪೂಜೆ ಮೂಲಕ ರಾಜ್ಯಾದ್ಯಂತ ಪರಿಚಿತರಾದರು. ಆಶ್ಚರ್ಯವೆಂಬಂತೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಬಹುಪಾಲು ಚಿತ್ರದ ನಾಯಕನೂ ಆಗಿ ಮೆರೆದ ಅದೃಷ್ಟವಂತ!
ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಇಷ್ಟೆಅಲ್ಲದೆ ಆ ಕಾಲಕ್ಕೆ ಹೊಸದಾಗಿ ಎಂಟ್ರಿ ಕೊಟ್ಟ ನವ ನಾಯಕ ನಟರ ಪೈಕಿ ಅತಿಹೆಚ್ಚು ಡಾ.ರಾಜ್ ಚಿತ್ರಗಳಲ್ಲಿ ನಟಿಸಿದ 2ನೇ ಹೀರೋ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ತನ್ಮೂಲಕ ಇವರ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಯ್ತು. ಅಂದಿನ ಕಾಲದ ಉದಯೋನ್ಮುಖ ನಟರಲ್ಲಿ ಅತಿಹೆಚ್ಚು ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಗಳಿಸಿದ ಪ್ರತಿಭಾವಂತ. ಮಿನುಗುತಾರೆ ಕಲ್ಪನ, ಅದೃಷ್ಟತಾರೆ ಆರತಿ, ಅಭಿನಯಶಾರದೆ ಜಯಂತಿ, ಮುಂತಾದ ಟಾಪ್ ಹೀರೋಯಿನ್ ಜತೆ ನಟಿಸಿದ ಅದೃಷ್ಟವಂತ ಹೀರೋ ಎನಿಸಿದರು!
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು

ಡಾ.ರಾಜ್ ಮತ್ತು ಇನ್ನಿತರ ಮಹಾನ್ ನಟರ ಸಿನಿಮಾದಲ್ಲಿ ನಟಿಸುವಾಗ ಕಿಂಚಿತ್ತು ಕಿರಿಕ್ ಮಾಡದೆ ಅಥವಾ ಸಂಕೋಚ ಮುಜುಗರ ತೋರದೆ ಸಂದರ್ಭಕ್ಕೆ ತಕ್ಕಂತೆ ಹಿರಿಯರು ನೀಡುತ್ತಿದ್ದ ಸೂಕ್ತ ಸಲಹೆ ಮಾರ್ಗದರ್ಶನ ಪಡೆಯಲು ಉತ್ಸಾಹ ತೋರುತ್ತಿದ್ದರು. “ನನ್ನ ತಮ್ಮ” ಚಿತ್ರದಲ್ಲಿ ರಾಜ್ ಕುಮಾರ್ ಸೋದರನ ಪಾತ್ರದಲ್ಲಿ ಉತ್ತಮವಾಗಿ ನಟಿಸಿ ರಾಜಣ್ಣನಿಂದ ಹೊಗಳಿಸಿಕೊಂಡು ಹೆಚ್ಚು ಜನಪ್ರಿಯರಾದರು. ಶ್ರೇಷ್ಠ ನಟನಾಗಿ ಹಲವಾರು ಬಹುಮಾನ ಪ್ರಶಸ್ತಿ ಪಡೆದರು. ಕಡೆಗಾಲದಲ್ಲೂ “ತನಿಖೆ” ಚಿತ್ರದ ನಟ, ನಿರ್ಮಾಪಕ, ನಿರ್ದೇಶಕ, ಗುಲ್ಜಾರ್ ಖಾನ್ ಸಿನಿಮದಲ್ಲಿ ಮತ್ತೊಮ್ಮೆ ಉತ್ತಮ ಅಭಿನಯ ನೀಡುವ ಮೂಲಕ ಸರಳ ಸಜ್ಜನಿಕೆಯ ನಟ ಎಂಬ ವಿಶೇಷ ಪ್ರಶಂಸೆಗೆ ಪಾತ್ರರಾದರು.
ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..

ಓರ್ವ ಆಜ್ಞಾಧಾರ ಕಲಾವಿದನಂತೆ ಪಾಲಿಗೆ ಬಂದ ಎಲ್ಲಾ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು. ತಮ್ಮ ಜತೆಗೆ ನಟಿಸುವವರು ಹಳಬರೊ, ಹೊಸಬರೊ, ಯಾರೇ ಇರಲಿ ಅವರೊಡನೆ ಖುಷಿಯಿಂದಲೇ ಷೆಡ್ಯೂಲ್ ಮುಗಿಸಿ ಶೂಟಿಂಗ್ ಮುಕ್ತಾಯವರೆಗೂ ಸಹಕರಿಸುತ್ತ ಇಡೀ ತಂಡದ ಮೆಚ್ಚುಗೆ ಗಳಿಸುತ್ತಿದ್ದರು. ಯಾವ ಕಾರಣಕ್ಕೂ ನಿರ್ಮಾಪಕ ನಿರ್ದೇಶಕರನ್ನು ಬೇಸರ ಪಡಿಸದೆ ನಗುಮೊಗದಿಂದ ಇರುತ್ತಿದ್ದರು.
ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..

ಸರಿಯಾದ ವಯಸ್ಸಿನಲ್ಲಿ ದೊರಕಿದ ಸುಶೀಲ ಕನ್ಯೆ ಕೌಸಲ್ಯಾರವರ ಕೈ ಹಿಡಿದು ಸುಂದರ ಸಂಸಾರ ಜವಾಬ್ಧಾರಿಯಿಂದ ಧನ್ಯರಾದರು. ನಂತರ ಇಬ್ಬರು ಮಕ್ಕಳ ತಂದೆಯಾಗಿ ತುಂಬು ಜೀವನ ನಡೆಸುವಾಗಲೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದುರಂತ ಸಾವು ಕಂಡರು.ತಮ್ಮ 67ನೇ ವಯಸ್ಸಲ್ಲಿ 27.12.2003ರಂದು ಬೆಂಗಳೂರಲ್ಲಿ ದೈವಾಧೀನರಾದ ಅಚ್ಚ ಕನ್ನಡದ ಸ್ವಚ್ಚ ಕಲಾವಿದ ಗಂಗಾಧರ್ ಕನ್ನಡ, ತುಳು, ಕೊಡವ, ಭಾಷೆಯ ಒಟ್ಟು77 ಚಿತ್ರಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…

ಗಂಗಾಧರ್ ನಟಿಸಿದ ಸಿನಿಮಾಗಳು ಹೀಗಿವೆ… ಲಗ್ನಪತ್ರಿಕೆ, ನಾನೇಭಾಗ್ಯವತಿ, ಚೌಕದದೀಪ, ಗೆಜ್ಜೆಪೂಜೆ, ನನ್ನತಮ್ಮ, ಸೀತಾ, ಅಳಿಯಗೆಳೆಯ, ಶರಪಂಜರ, ಭಲೇಭಾಸ್ಕರ, ಕಲ್ಯಾಣಿ, ಭಲೇ ಅದೃಷ್ಟವೋ ಅದೃಷ್ಟ, ಮಾಲತಿಮಾಧವ, ಸೋತು ಗೆದ್ದವಳು, ಸುಭದ್ರಾ ಕಲ್ಯಾಣ, ಯಾವ ಜನ್ಮದ ಮೈತ್ರಿ, ಒಂದು ಹೆಣ್ಣಿನಕಥೆ, ಬಾಂಧವ್ಯ, ಜೀವನ ಜೋಕಾಲಿ, ತ್ರಿವೇಣಿ, ಜಯ ವಿಜಯ, ಮಣ್ಣಿನ ಮಗಳು, ಜಾಗೃತಿ, ವಿಪ್ಲವ ವನಿತೆ, ದೇವರು ಕೊಟ್ಟ ವರ, ಕಥಾ ಸಂಗಮ, ಮಕ್ಕಳ ಭಾಗ್ಯ, ಬೆಂಗಳೂರು ಭೂತ, ಮುಗಿಯದ ಕಥೆ, ಬಂಗಾರದ ಗುಡಿ, ಬಾಳು ಜೇನು, ಆರು ಮೂರು ಒಂಭತ್ತು, ಶ್ರೀರೇಣುಕಾ ದೇವಿ ಮಹಾತ್ಮೆ, ಋತುಗಾನ, ಗುರು ಸಾರ್ವಭೌಮ, ಶ್ರೀ ರಾಘವೇಂದ್ರ ಕರುಣೆ , ಶನಿಪ್ರಭಾವ, ಅತ್ತೆಗೆ ತಕ್ಕ ಸೊಸೆ, ಮುತ್ತು ಒಂದು ಮುತ್ತು, ಮನಸ್ಸಿನಂತೆ ಮಾಂಗಲ್ಯ.
ಇದನ್ನೂ ಓದಿ: ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್…

ಖಂಡವಿದೆಕೋ ಮಾಂಸವಿದೆಕೋ, ರಂಗನಾಯಕಿ, ನ್ಯಾಯ ನೀತಿಧರ್ಮ, ನೀ ನನ್ನ ಗೆಲ್ಲಲಾರೆ, ಜೀವಕ್ಕೆಜೀವ, ದೇವರತೀರ್ಪು, ಭಕ್ತಪ್ರಹ್ಲಾದ, ಸಮರ್ಪಣೆ, ರಣಭೇರಿ, ಅಪರೂಪದ ಕಥೆ, ಕರ್ಣ, ಅಪರಾಧಿ ನಾನಲ್ಲ, ಶಿವಭಕ್ತ ಮಾರ್ಕಂಡೇಯ, ಮಿಥಿಲೆಯ ಸೀತೆಯರು, ಗುಡುಗು ಸಿಡಿಲು, ಶ್ರೀಸತ್ಯನಾರಾಯಣ ಪೂಜಾಫಲ, ಏಕಲವ್ಯ, ಸೆಂಟ್ರಲ್ ರೌಡಿ, ಮನ ಗೆದ್ದ ಮಗ, ಹರಕೆಯ ಕುರಿ, ರಂಜಿತಾ, ಸಿಡಿದೆದ್ದ ಶಿವ, ತನಿಖೆ, ರಶ್ಮಿ, ಆಟ ಹುಡುಗಾಟ, ಪಾಳೇಗಾರ, ರಂಭಾ ರಾಜ್ಯದಲ್ಲಿ ರೌಡಿ, ಬಾಳಿನ ದಾರಿ, ಲವರ್ಸ್, ಚಿಕ್ಕ, ಅಮ್ಮ ನಿನ್ನ ತೋಳಿನಲ್ಲಿ, ವಿಕ್ರಮ್(2003), ಪ್ರೊಡಕ್ಷನ್ ನಂ.5?










ಕನ್ನಡ ಚಲನಚಿತ್ರ ರಂಗದ ಸುಂದರ ಸೌಮ್ಯ ನಟ ದಿವಂಗತ ಗಂಗಾಧರ ಬಗ್ಗೆ ಚಂದನವನ ಚರಿತ್ರೆಯ ಕರ್ತೃ ಕುಮಾರಕವಿಯವರು ಬರೆದಿರುವ ಈ ಲೇಖನ ಬಹಳ ಸೊಗಸಾಗಿದೆ. ಇವತ್ತಿನ ಬಹುತೇಕ ಮಂದಿಗೆ ವಿಶೇಷವಾಗಿ ಯುವ ಪೀಳಿಗೆಯ ಸಿನಿಮಾ ಪ್ರೇಕ್ಷಕರಿಗೆ ಅವಶ್ಯಕ ಎನಿಸುತ್ತದೆ. ಧನ್ಯವಾದ ಸರ್
ಮಲ್ಲಿಕಾರ್ಜುನ ಹಿರೇಮಠ, ಬೆಂಗಳೂರು
ಕನ್ನಡ ಚಲನಚಿತ್ರ ರಂಗದ ಸುಂದರ ಸೌಮ್ಯ ನಟ ದಿವಂಗತ ಗಂಗಾಧರ ಬಗ್ಗೆ ಚಂದನವನ ಚರಿತ್ರೆಯ ಕರ್ತೃ ಕುಮಾರಕವಿಯವರು ಬರೆದಿರುವ ಈ ಲೇಖನ ಬಹಳ ಸೊಗಸಾಗಿದೆ. ಇವತ್ತಿನ ಬಹುತೇಕ ಮಂದಿಗೆ ವಿಶೇಷವಾಗಿ ಯುವ ಪೀಳಿಗೆಯ ಸಿನಿಮಾ ಪ್ರೇಕ್ಷಕರಿಗೆ ಅವಶ್ಯಕ ಎನಿಸುತ್ತದೆ. ಧನ್ಯವಾದ ಸರ್. ಕಲ್ಬುರ್ಗಿ ಮೂಲದ ಮಲ್ಲಿಕಾರ್ಜುನ ಹಿರೇಮಠ, ಕೋರಮಂಗಲ, ಬೆಂಗಳೂರು
ಮಿನುಗುತಾರೆ ಕಲ್ಪನ, ಅಭಿನಯಶಾರದೆ ಜಯಂತಿ ಪದ್ಮಭೂಷಣ .ಬಿ.ಸರೋಜ ದೇವಿ, ಆರತಿ ಭಾರತಿ ಮಂಜುಳ ಮುಂತಾದ ಖ್ಯಾತ ನಟಿಯರ ಜತೆ ಅದರಲ್ಲೂ ಕಲ್ಪನಾ ಜೊತೆಗೆ ಶರಪಂಜರ ಚಿತ್ರದಲ್ಲಿ ಮನೋಜ್ಞ ಮತ್ತು ಸಸ್ಮರಣೀವಾಗಿ ನಟಿಸಿದ್ದು ಮರೆಯಲು ಸಾಧ್ಯವಿಲ್ಲ ಕರ್ನಾಟಕದ ಶ್ರೇಷ್ಠ ಕನ್ನಡ ಲೇಖಕರಲ್ಲಿ ಒಬ್ಬರಾದ ಕುಮಾರಕವಿ ನಟರಾಜರಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ. ಜನಮನ ಪತ್ರಿಕೆಯ ಎಲ್ಲರಿಗೂ ನಮಸ್ಕಾರ, ಪೃಥ್ವಿ, ಶಿರ್ಖೆ, ಕೆಂಗೇರಿ, ಬೆಂಗಳೂರು
ದಿವಂಗತ ನಟ ಗಂಗಾಧರ್ ರವರು ಮಿನುಗುತಾರೆ ಕಲ್ಪನ, ಅಭಿನಯಶಾರದೆ ಜಯಂತಿ ಪದ್ಮಭೂಷಣ .ಬಿ.ಸರೋಜ ದೇವಿ, ಆರತಿ ಭಾರತಿ ಮಂಜುಳ ಮುಂತಾದ ಖ್ಯಾತ ನಟಿಯರ ಜತೆ ಅದರಲ್ಲೂ ಕಲ್ಪನಾ ಜೊತೆಗೆ ಶರಪಂಜರ ಚಿತ್ರದಲ್ಲಿ ಮನೋಜ್ಞ ಮತ್ತು ಸಸ್ಮರಣೀವಾಗಿ ನಟಿಸಿದ್ದು ಮರೆಯಲು ಸಾಧ್ಯವಿಲ್ಲ ಕರ್ನಾಟಕದ ಶ್ರೇಷ್ಠ ಕನ್ನಡ ಲೇಖಕರಲ್ಲಿ ಒಬ್ಬರಾದ ಕುಮಾರಕವಿ ನಟರಾಜರಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ. ಜನಮನ ಪತ್ರಿಕೆಯ ಎಲ್ಲರಿಗೂ ನಮಸ್ಕಾರ, ಪೃಥ್ವಿ, ಶಿರ್ಖೆ, ಕೆಂಗೇರಿ, ಬೆಂಗಳೂರು