janamanakannada > Blog > Latest > Mysore > 2025ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಕೃತಿಗಳ ಆಹ್ವಾನ… 25ಸಾವಿರ ಗೌರವಧನ
ಮೈಸೂರು: ವೀರಶೈವ/ಲಿಂಗಾಯತ ಧರ್ಮ, ಸಾಹಿತ್ಯ, ಇತಿಹಾಸ, ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ 2025ನೇ ಸಾಲಿನಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಜಗದ್ಗುರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ನೀಡಲಾಗುವ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ಗೆ ಆಹ್ವಾನಿಸಲಾಗಿದೆ.
ಲೇಖಕರು ಹಾಗೂ ಪ್ರಕಾಶಕರು ಪ್ರಕಟಿತ ಕೃತಿಗಳನ್ನು ಪ್ರಶಸ್ತಿ ಸಮಿತಿಯ ಅವಗಾಹನೆಗಾಗಿ ‘ನಿರ್ದೇಶಕರು, ಪ್ರಕಟಣ ವಿಭಾಗ, ಜೆಎಸ್ಎಸ್ ಮಹಾವಿದ್ಯಾಪೀಠ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು 570004’ ವಿಳಾಸಕ್ಕೆ 31 ಮಾರ್ಚ್ 2026ರ ಒಳಗಾಗಿ ಕಳುಹಿಸಲು ಕೋರಿದೆ. ಈ ಕುರಿತು ಮಾಹಿತಿ ನೀಡಬಯಸುವವರು ಕೂಡ ಕೃತಿಗಳ ವಿವರಗಳನ್ನು ಕಳುಹಿಸಬಹುದಾಗಿದೆ.
‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ಯನ್ನು 1983ರಿಂದ ಪ್ರತಿ ವರ್ಷ ಉತ್ತಮ ಕೃತಿಗಳಿಗೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 37 ಕೃತಿಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು ಪ್ರಶಸ್ತಿಫಲಕ, ಸ್ವಸ್ತಿವಾಚನ, ಫಲತಾಂಬೂಲ ಹಾಗೂ 25,000 ರೂ.ಗಳ ಗೌರವಧನವನ್ನು ಒಳಗೊಂಡಿರುತ್ತದೆ.
admin








