LatestMysore

ಏಪ್ರಿಲ್ 14ರಿಂದ ಮಂಡ್ಯ ರಮೇಶ್ ರವರ ನಟನರಂಗದಿಂದ `ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರ

ಮೈಸೂರು: ನಟನರಂಗ ಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ.

ತನ್ನ ಚಟುವಟಿಕೆಯ ಭಾಗವಾಗಿ 24ನೇ ವರ್ಷದ `ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರವನ್ನು ಏಪ್ರಿಲ್ 14ರಿಂದ ಮೇ 09ರ ವರೆಗೆ ಮೈಸೂರಿನ ಕೃಷ್ಣಮೂರ್ತಿಪುರಂನ ಬಿ.ಎಸ್.ಎಸ್.ವಿದ್ಯೋದಯ (ಭಗಿನಿ ಸೇವಾ ಸಮಾಜ) ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಸತತ 26 ದಿನಗಳ ಕಾಲ ನಾಟಕ ಕಲೆಯನ್ನು ಕೇಂದ್ರವಾಗಿರಿಸಿಕೊAಡು ಕರ್ನಾಟಕದ ದೇಸಿ ಜಾನಪದ ಕಲಾ ಪ್ರಕಾರಗಳು, ಹಾಡುಗಾರಿಕೆ, ಕರಕುಶಲ ಕಲೆ, ಸಂವಹನ ಕೌಶಲ, ಅಭಿನಯ, ಸಾಧಕರೊಂದಿಗೆ ಸಂವಾದ, ಕಂಪೆನಿ ಮತ್ತುಆಧುನಿಕ ನಾಟಕಗಳ ಕುರಿತು ಮಕ್ಕಳಿಗೆ ಸಂಪೂರ್ಣ ಮನೋರಂಜನೆಯೊAದಿಗೆ ವಿಶೀಷ್ಟ ಪ್ರಾತ್ಯಕ್ಷಿಕೆಗಳ ಮೂಲಕ ರಂಗಭೂಮಿಯಲ್ಲಿ ಪ್ರಖ್ಯಾತರಾದ ಸಾಧಕರನೇಕರು ಮಕ್ಕಳನ್ನು ತರಬೇತಿಗೊಳಿಸಲಿದ್ದಾರೆ.

ಮಾರ್ಚ್ 29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 01.30ರ ವರೆಗೆ ರಾಮಕೃಷ್ಣ ನಗರದಲ್ಲಿರುವ ನಟನರಂಗ ಶಾಲೆಯಲ್ಲಿ ‘ರಜಾ ಮಜಾ’ದಅರ್ಜಿ ವಿತರಣೆ ಮತ್ತು ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ತಡವಾಗಿ ಬಂದವರಿಗೆ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ 8ವರ್ಷದಿಂದ 14ವರ್ಷದ ಮಕ್ಕಳಿಗೆ ಮಾತ್ರ ಪ್ರವೇಶವಿದೆ.

ಮಾರ್ಚ್ 29ರಂದು ಪ್ರವೇಶಾತಿಗೆ ಬರುವಾಗ ಪೋಷಕರು ಮಗುವಿನ ಭಾವಚಿತ್ರದೊಂದಿಗೆ ಜನನ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು. ಮೊದಲು ಬಂದವರಿಗೆ ಆದ್ಯತೆ. ಸೀಮಿತ ಅವಕಾಶವಾಗಿದೆ. ಹೆಚ್ಚಿನ ವಿವರಗಳಿಗೆ 7259537777, 9480468327, 9845595505 ಸಂಪರ್ಕಿಸಬಹುದಾಗಿದೆ.

admin
the authoradmin

Leave a Reply

Translate to any language you want