LatestMysore

ಬಿ ಮಟಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ಕೆ ಎಸ್.ಪಿ. ಮಂಜುನಾಥ್ ಶ್ಲಾಘನೆ

ಮೈಸೂರು: ಆರೋಗ್ಯ ತಪಾಸಣಾ ಶಿಬಿರಗಳಂತಹ ಸಮಾಜಮುಖಿ ಚಟುವಟಿಕೆಗಳಿಂದ ಮಾತ್ರ ಸಂಘಟನೆಗಳ ಸಾರ್ಥಕತೆ ಸಾಧ್ಯ ಎಂದು ಜೆಎಸ್ಎಸ್ ಮಹಾ ವಿದ್ಯಾ ಪೀಠದ ಕಾರ್ಯದರ್ಶಿ ಎಸ್ ಪಿ ಮಂಜುನಾಥ್ ಹೇಳಿದರು.

ಮೈಸೂರು ಜಿಲ್ಲೆ ಸರಗೂರು ತಾಲೂಕು ಬಿ ಮಟಕೆರೆ ಗ್ರಾಮದಲ್ಲಿ ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಜೆಎಸ್ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗ ಮತ್ತು ರೋಟರಿ ಸಂಸ್ಥೆಉತ್ತರ ವಲಯದ ಸಹಯೋಗದಲ್ಲಿ  ಹಮ್ಮಿ ಕೊಂಡಿದ್ದ  ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ  ಎಸ್ ಪಿ ಮಂಜುನಾಥ್  ಅವರು ಸಂಘಟನೆಗಳ ಸ್ಥಾನ ಮಾನಗಳು ವೈಯಕ್ತಿಕ  ಬೆಳವಣಿಗೆಗೆ ಸೀಮಿತವಾಗದೆ ಇಂತಹ ಉಪಯುಕ್ತ ಕಾರ್ಯಕ್ರಮ ಹಮ್ಮಿ ಕೊಂಡು ಆರ್ಥಿಕ ದುರ್ಬಲ ಮತ್ತು ಅಸಕ್ತ ಗ್ರಾಮೀಣ ಸಮುದಾಯದ ಜನರ ಬಳಿಗೆ ಹೋಗಿ ಕಿಂಚಿತ್ ಸೇವೆ ಸಲ್ಲಿಸಿ ಆರೋಗ್ಯಯುತ ನೆಮ್ಮದಿ ಸಂತೋಷದಿಂದ ಜೀವನ ಸಾಗಿಸಲು ನೆರವಾದಾಗ ಮಾತ್ರ ಅವುಗಳ ಸ್ಥಾಪನಾ ಉದ್ದೇಶ ಸಫಲವಾಗುತ್ತದೆ  ಎಂದರು.

ಇಂದು ವಿಜ್ಞಾನ ತಂತ್ರಜ್ಞಾನ ತೀವ್ರ ಬೆಳವಣಿಗೆ ಸಂಶೋಧನೆಗಳಿಂದ  ಆರೋಗ್ಯಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬಂದಿದೆ. ಹಿಂದೆ ಮನುಕುಲವನ್ನು ರಾಕ್ಷಸಿಯಂತೆ ಕಾಡುತ್ತಿದ್ದ  ಅನೇಕ ರೋಗಗಳಿಗೆ ಔಷಧಿ ಕಂಡು ಹಿಡಿಯಲಾಗಿದೆ ಸರಾಸರಿ ಮನುಷ್ಯನ ಜೀವಿತಾವಧಿ 100 ವರ್ಷಗಳು ಬದುಕಬಹುದಾಗಿದೆ ಎಂದರು.

ನಿರ್ಲಕ್ಷ ತೋರದೆ 40 ವರ್ಷ ತುಂಬಿದ ಪ್ರತಿಯೊಬ್ಬರು ಎಷ್ಟೇ ಆರೋಗ್ಯ ವಾಗಿದ್ದರೂ  ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿ ಕೊಂಡು ವ್ಯತ್ಯಾಸ ಕಂಡು ಬಂದರೂ ಭಯ ಪಡದೆ ವೈದ್ಯರ ಸಲಹೆಯಂತೆ ಔಷಧ ಸೇವಿಸಿ ಜೀವನ ಶೈಲಿಯನ್ನು ಬದಲಾಯಿಸಿಕೊಂಡರೆ ಉತ್ತಮ ಬದುಕು ಸಾಗಿಸಬಹುದು ಎಂದರು

ಇಂದು ಕಾಲ ಬದಲಾಗಿದೆ ಮನುಷ್ಯನ ಅತಿ ಒತ್ತಡದ ಜೀವನ ಕ್ರಮ ಬದಲಾಗಿರುವ ಆಹಾರ ಸೇವನೆಗಳಿಂದ ಹಿಂದೆ ವಯೋಸಹಜ ಕಾಯಿಲೆಗಳು ಇಂದು ಚಿಕ್ಕ ವಯಸ್ಸಿನಲ್ಲಿ ಬರುತ್ತಿದ್ದು, ಔಷಧಿಗಳನ್ನು ಆಹಾರವಾಗಿ ಸೇವಿಸಬೇಕಾದ ಪರಿಸ್ಥಿತಿ ಬಂದಿದೆ

ಇವುಗಳ ಬಗ್ಗೆ ಚಿಂತಿಸದೆ ಗ್ರಾಮೀಣ ಪ್ರದೇಶದ ಜನರಿಗೆ ಇಂತಹ ಶಿಬಿರ ಏರ್ಪಡಿಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ ಮತ್ತು ಅಭಿನಂದನಾರ್ಹ ಕೆಲಸ ಅದಕ್ಕಾಗಿ ಮನಃ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು

ಇದು ಒಬ್ಬರಿಂದ ಆಗುವ ಕೆಲಸವಲ್ಲ ಸಂಘಟನೆಯ ಎಲ್ಲರ ಪರಿಶ್ರಮ ಇಚ್ಛಾಶಕ್ತಿ ಬದ್ಧತೆ ಪ್ರಾಮಾಣಿಕ ಸೇವಾ ಸಂಕಲ್ಪ ವಿದ್ದಾಗ ಮಾತ್ರ ಇಂತಹ ಸಮಾಜಮುಖಿ ಚಟುವಟಿಕೆ ಸಾಧ್ಯ. ಈ ಸಂಘಟನೆ ಇಂತಹ ಕಾಡಂಚಿನ  ಗ್ರಾಮಗಳ ಜನರ ಬಳಿ ಬಂದು ಗ್ರಾಮದ ಮುಖಂಡರಿಗೆ ಮನವರಿಕೆ ಮಾಡಿ ಜೊತೆಗೆ ಅಗತ್ಯ ಸಹಕಾರ ಮಾಡಿರುವುದನ್ನು ನೋಡಿದರೆ ನನಗೆ ಬಹಳ ಸಂತೋಷವಾಗುತ್ತಿದೆ

ಸುತ್ತೂರು ಶ್ರೀ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳ ಸುಮಾರು 50 ವರ್ಷಗಳ ಹಿಂದೆಯೇ ಈ ಭಾಗದಲ್ಲಿ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣ ಒಂದೇ ಸೂರಿನಲ್ಲಿ ದೊರೆಯುವಂತೆ ಮಾಡಿದ್ದರು.

ಇಂದಿನ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರು ಈ ಭಾಗದ ಜನರ ಆಶೋತ್ತರಗಳಿಗೆ ಧ್ವನಿಯಾಗಿ ಉತ್ತಮ ಜೀವನ ಸಾಗಿಸಲು ಅಗತ್ಯ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ  ಆಧ್ಯಾತ್ಮಿಕ ಕ್ಷೇತ್ರದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ ಎಂದರು

ಈ ಸಂಘಟನೆ ಮುಂದಿನ ದಿನಗಳಲ್ಲಿ ಗ್ರಾಮೀಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯ ಕ್ರಮ ಆಯೋಜಿಸಿದರೆ ಜೆಎಸ್ಎಸ್ ಮಹಾ ವಿದ್ಯಾ ಪೀಠ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಕಾರ್ಯೋನ್ಮುಖರಾಗಿ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ದಡದ ಹಳ್ಳಿ ಶ್ರೀ ಗುರು ಮಲ್ಲೇಶ್ವರ ಶಾಖ ಮಠದ ಶ್ರೀಗಳು ಸುತ್ತೂರು ಮಠಕ್ಕೂ ನಮ್ಮ ತಾಲೂಕಿಗೂ ವಿಶೇಷ ಸಂಬಂಧವುಂಟು ಪರಮ ಪೂಜ್ಯ ರಾಜೇಂದ್ರ ಮಹಾ ಸ್ವಾಮಿಗಳು ಅಂದು ಎಷ್ಟೇ ಆರ್ಥಿಕ ಕಷ್ಟವಿದ್ದರೂ ಗ್ರಾಮೀಣ ಭಾಗದಲ್ಲಿ ತೆರೆದಿರುವ ಅನಾಥಾಲಯ, ಶಾಲೆಗಳು, ಕಾಲೇಜುಗಳು ಮೈಸೂರಿನಲ್ಲಿ ಸ್ಥಾಪಿಸಿದ ಆಸ್ಪತ್ರೆ ಇಲ್ಲದಿದ್ದರೆ ಇಂದಿಗೂ ನಮ್ಮ ಜೀವನ ಹೇಗಿರುತ್ತಿತ್ತು ಎಂದು ಊಹಿಸಿ ಕೊಳ್ಳಲು ಸಾಧ್ಯವಿಲ್ಲ ಕಿಂಚಿತ್ ಸೇವೆ ಮಾಡಲು ನಮಗೂ ಇಂದಿನ ಸುತ್ತೂರು ಶ್ರೀ ಗಳೇ ಸ್ಪೂರ್ತಿ ಮತ್ತು ಪ್ರೇರಣೆ ಎಂದರು

ಹಂಚೀಪುರ ಶ್ರೀ ಗುರು ಮಲ್ಲೇಶ್ವರ ಶಾಖ ಮಠದ ಕಿರಿಯ ಶ್ರೀಗಳು, ಸರಗೂರು ವೀರಶೈವ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷ ರಾದ ದಡದಹಳ್ಳಿ ಶ್ರೀ ನಟರಾಜು, ಬಿ ಮಟಕೆರೆ ಕೃಷಿ ಪತ್ತಿನ ಸಹಕಾರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ  ಅಣ್ಣಯ್ಯ ಸ್ವಾಮಿ, ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ಪರಮೇಶ್ ಮಾಸ್ಟರ್, ಸಂಘದ ಅಧ್ಯಕ್ಷ ಬಿ ಆರ್ ಶಿವಕುಮಾರ್, ಖಜಾಂಚಿ ಬಾಗಳಿ ಮಹೇಶ್, ಉಪಾಧ್ಯಕ್ಸೆ ಶ್ರೀಮತಿ ಮೀನಾಕ್ಷಿ ಬಸವಣ್ಣ ನಿರ್ದೇಶಕರಾದ  ಬಾನಲ್ಲಿ ಸಂತೋಷ, ಗಜೇಂದ್ರ, ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾದ  ಮಾಲಂಗಿ ಸುರೇಶ್, ಉಮ್ಮತ್ತೂರು ಸುರೇಶ್ ಗಣೇಶ್, ರೋಟರಿ ಸಂಸ್ಥೆಉತ್ತರ ವಲಯದ ಉಪಾಧ್ಯಕ್ಷರಾದ   ಡಿ ಬಿ ರಾಜಶೇಖರ್,  ಕಾರ್ಯದರ್ಶಿ ವಿರೂಪಾಕ್ಷ, ನಿರ್ದೇಶಕರಾದ ಪುಟ್ಟಸುಬ್ಬಣ್ಣ ಸೇರಿದಂತೆ ಗ್ರಾಮದ ಮುಖಂಡರು ವಿವಿಧ ಗ್ರಾಮಗಳ 300 ಕ್ಕೂ ಹೆಚ್ಚು ಜನ ಉಪಸ್ತಿತರಿದ್ದರು

admin
the authoradmin

Leave a Reply

Translate to any language you want